Boots Care Tips: ಶೂಗಳು ಹಾಳಾಗದಂತೆ ನೋಡಿಕೊಳ್ಳಲು ಇಲ್ಲಿದೆ ತಜ್ಞರ ಸಲಹೆ

ಶೂಗಳನ್ನು ಇಷ್ಟಪಡದವರೇ ಇಲ್ಲ. ಆದರೆ ಆ ಶೂಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಕಷ್ಟವಾಗಬಹುದು. ನಿಮ್ಮ ಶೂಗಳನ್ನು ಯಾವ ರೀತಿ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಬಗ್ಗೆ ಕೆಲವೊಂದು ಸಲಹೆ ಇಲ್ಲಿದೆ.

Boots Care Tips: ಶೂಗಳು ಹಾಳಾಗದಂತೆ ನೋಡಿಕೊಳ್ಳಲು ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ Image Credit source: india today
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 12, 2023 | 6:13 PM

ಶೂಗಳನ್ನು (shoes) ಇಷ್ಟಪಡದವರೇ ಇಲ್ಲ. ಆದರೆ ಆ ಶೂಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಕಷ್ಟವಾಗಬಹುದು. ನಿಮ್ಮ ಶೂಗಳನ್ನು ಯಾವ ರೀತಿ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಬಗ್ಗೆ ಕೆಲವೊಂದು ಸಲಹೆ ಇಲ್ಲಿದೆ. ಫ್ಯಾಶನ್ ಪ್ರೇಮಿಗಳಿಗೆ ಶೂಗಳೆಂದರೆ ಬಲು ಇಷ್ಟ. ಆದರೆ ಅದನ್ನು ಹಾಳಾಗದಂತೆ ಚೆನ್ನಾಗಿ ನೋಡಿಕೊಳ್ಳುವುದು ಕಷ್ಟವಾಗಿರಬಹುದು. ಚಳಿಗಾಲವು ಬಹಳಷ್ಟು ಫ್ಯಾಶನ್ ಉತ್ಸಾಹಿಗಳಿಗೆ ಹೆಚ್ಚು ನಿರೀಕ್ಷಿತವಾಗಿದೆ. ಏಕೆಂದರೆ ಅದು ಶೂ ಸೀಸನ್ ಕೂಡಾ ಆಗಿದೆ. ಚಳಿಗಾಲದಲ್ಲಿ ಹೆಚ್ಚಿನ ಜನರು ಶೂಗಳನ್ನು ಹಾಕಲು ಇಷ್ಟಪಡುತ್ತಾರೆ.

ಶೂಗಳನ್ನು ಧರಿಸುವವರು ಸಾಮಾನ್ಯವಾಗಿ ಹೊಂದಿರುವ ಒಂದು ದೂರು ಎಂದರೆ ಶೂಗಳು ಬಹಳ ಬೇಗನೆ ಸುಕ್ಕಾಗಿ ಬಿಡುತ್ತವೆ ಎನ್ನುವಂತಹದ್ದು. ನೀವು ಏನಾದರೂ ಶೂ ಕೇರ್ ಸಲಹೆಯನ್ನು ಹುಡುಕುತ್ತಿದ್ದರೆ, ಆರ್ಟಿಮೆನ್ ಎಂಬ ಪಾದರಕ್ಷೆ ಬ್ರ್ಯಾಂಡ್ ಸಂಸ್ಥಾಪಕ ಸುಕೃತ್ ಖನ್ನಾ ಅವರು ಶೂಗಳನ್ನು ಹೇಗೆ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂಬುದರ ಕುರಿತು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.

ಶೂಗಳ ಒಳ ಭಾಗವನ್ನು ತುಂಬಿಸಿಟ್ಟುಕೊಳ್ಳಿ: ನಿಮ್ಮ ಜೋಡಿ ಶೂಗಳನ್ನು ಚೆನ್ನಾಗಿ ನೋಡಿಕೊಂಡರೆ ಅದು ಹೆಚ್ಚು ಬಾಳಿಕೆ ಬರುತ್ತದೆ. ನೀವು ಶೂಗಳಲ್ಲಿ ಪೇಪರ್ ಅಥವಾ ಬಟ್ಟೆ ತುಂಡುಗಳನ್ನು ತುಂಬಿಸಡಬೇಕು. ಇದರಿಂದ ಅವು ಮಡಚುವುದಿಲ್ಲ. ಶೂಗಳು ಸುಕ್ಕುಗಟ್ಟದಂತೆ ತಡೆಯಲು ಬಟ್ಟೆ ಅಥವಾ ವೃತ್ತ ಪತ್ರಿಕೆಯನ್ನು ಅದರೊಳಗಡೆ ತುಂಬುವುದು ಯವಾಗಲೂ ಉತ್ತಮ. ಮತ್ತು ಯೋಗ್ಯವಾದ ಸ್ಥಳದಲ್ಲಿ ಅದನ್ನು ಇಡಬೆಕು ಎಂದು ಸುಕೃತ್ ಖನ್ನಾ ಸಲಹೆ ನೀಡುತ್ತಾರೆ.

ಇದನ್ನು ಓದಿ:Lifestyle: ನಮಗಾಗಿ ನಾವು ಬದುಕೋದು ಹೇಗೆ? ಉತ್ತಮ ಜೀವನಕ್ಕಾಗಿ ಈ ಸರಳ ಸೂತ್ರಗಳನ್ನು ಪಾಲಿಸಿ

ಶುಷ್ಕ ಸ್ಥಳಗಳಲ್ಲಿ ಚರ್ಮದ ಶೂಗಳನ್ನು ಸಂಗ್ರಹಿಸಿ: ಚರ್ಮದ ಶೂಗಳನ್ನು ಒಣಗಿದ ಸ್ಥಳಗಳಲ್ಲಿ ಶೇಖರಿಸಿಡಬೇಕು. ಚರ್ಮದ ವಸ್ತುಗಳು ಶಿಲೀಂಧ್ರಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಬೂಟುಗಳನ್ನು ಆದಷ್ಟು ತೇವಾಂಶವಿಲ್ಲದ ಶುಷ್ಕ ಸ್ಥಳಗಳಲ್ಲಿ ಶೇಖರಿಸಿ ಇಡಬೇಕಾಗುತ್ತದೆ. ಡಸ್ಟ್ ಬ್ಯಾಗ್‍ಗಳನ್ನು ಬಳಸಿ: ಧೂಳಿನ ಚೀಲಗಳು ಅತ್ಯಗತ್ಯ. ಅದು ಲೆದರ್ ಶೂಸ್ ಆಗಿರಲಿ ಅಥವಾ ಸಾದಾ ಬೂಟ್‍ಗಳಾಗಿರಲಿ, ನೀವು ನಿಮ್ಮ ಬೂಟ್‍ಗಳನ್ನು ಸರಿಯಾಗಿ ಕವರ್ ಮಾಡಬೇಕು ಮತ್ತು ಡಸ್ಟ್ ಬ್ಯಾಗ್‍ಗಳನ್ನು ಬಳಸಬೇಕು.

ಶುಚಿಗೊಳಿಸುವಿಕೆ ಮತ್ತು ಆರೈಕೆ: ನಿಮ್ಮ ಶೂಗಳು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುವಲ್ಲಿ ಶುಚಿಗೊಳಿಸುವಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪಿಯು ಮೆಟೀರಿಯಲ್ (ಚರ್ಮವಲ್ಲದ) ಬೂಟ್‍ಗಳನ್ನು ನೀವು ತೇವವಾದ ಬಟ್ಟೆಯಿಂದ ಕೊಳೆಯನ್ನು ಒರೆಸಬಹುದು ಎಂದು ಸುಕೃತ್ ಖನ್ನಾ ಹೇಳುತ್ತಾರೆ. ಮತ್ತು ಸ್ಯೂಡ್ ಬೂಟುಗಳನ್ನು ಸ್ವಚ್ಛಗೊಳಿಸಲು ಬ್ರಷ್‍ಗಳನ್ನು ಬಳಸಬೇಕು. ಮತ್ತು ಲೆದರ್ ಬೂಟ್‍ಗಳನ್ನು ಕಾಲಕಾಲಕ್ಕೆ ವ್ಯಾಕ್ಸ್ ಪಾಲೀಶ್ ಅಥವಾ ಮಾಯಿಶ್ಚರೈಸರ್​ನಿಂದ ತೇವಗೊಳಿಸಬೇಕು ಎಂದು ಖನ್ನಾರವರು ಸಲಹೆ ನೀಡುತ್ತಾರೆ.

ಲೆದರ್ ಅಲ್ಲದ ಶೂಗಳನ್ನು ಹೆಚ್ಚಾಗಿ ಧರಿಸಿ: ಪಿಯು ಅಥವಾ ನಾನ್-ಲೆದರ್ ಬೂಟುಗಳನ್ನು ಹೆಚ್ಚಾಗಿ ಧರಿಸಿ. ನೀವು ಅವುಗಳನ್ನು ಕ್ಲೋಸೆಟ್ ಅಥವಾ ಬೀರುವಿನಲ್ಲಿ ಹೆಚ್ಚು ಸಮಯದವರೆಗೆ ಇರಿಸಿದರೆ ಅದು ಬೇಗನೆ ಹಾಳಾಗುತ್ತವೆ. ನಾನ್ ಲೆದರ್ ಶೂಗಳು ಹೆಚ್ಚು ಬಾಳಿಕೆ ಬರಬೇಕೆಂದರೆ ಅವುಗಳನ್ನು ಹೆಚ್ಚಾಗಿ ಧರಿಸುತ್ತಿರಬೇಕು ಎಂದು ಸುಕೃತ್ ಖನ್ನಾ ಸಲಹೆ ನೀಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Thu, 12 January 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ