AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Degi Biryani Recipe: ನೀವು ದೇಗಿ ಬಿರಿಯಾನಿ ಮಾಡಿ, ಪಾಕ ವಿಧಾನ ಇಲ್ಲಿದೆ

ದೇಗಿ ಬಿರಿಯಾನಿ ದೆಹಲಿಯ ಬೀದಿಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಅತ್ಯಂತ ಪ್ರಸಿದ್ಧ ಬಿರಿಯಾನಿಯಾಗಿದೆ. ಈ ಬಿರಿಯಾನಿಯಲ್ಲಿ ಹೆಚ್ಚಾಗಿ ಮೆಣಸಿನ ಫ್ಲೇವರ್ ಕಾಣಬಹುದು. ಅದ್ದರಿಂದ ಇದರ ಸಂಪೂರ್ಣ ಪಾಕ ವಿಧಾನ ಇಲ್ಲಿದೆ.

Degi Biryani Recipe: ನೀವು ದೇಗಿ ಬಿರಿಯಾನಿ ಮಾಡಿ, ಪಾಕ ವಿಧಾನ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: YouTube
TV9 Web
| Edited By: |

Updated on:Jan 12, 2023 | 4:03 PM

Share

ಬಿರಿಯಾನಿ(Biryani) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ಇಷ್ಟ ಪಡುವ ಖಾದ್ಯಗಳಲ್ಲಿ ಬಿರಿಯಾನಿ ಕೂಡ ಒಂದು. ಭಾರತದಲ್ಲಿ ಇತ್ತೀಚೆಗಷ್ಟೇ ಸ್ವಿಗ್ಗಿ ವರದಿ ಮಾಡಿರುವ ಪ್ರಕಾರ 2022ರಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿರುವ ಫುಡ್​​ಗಳ ಪಟ್ಟಿಯಲ್ಲಿ ಬಿರಿಯಾನಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬಿರಿಯಾನಿಯಲ್ಲಿ ಹಲವಾರು ವಿಧಗಳನ್ನು ಕಾಣಬಹುದು. ಅದರಲ್ಲಿ ಒಂದು ದೇಗಿ ಬಿರಿಯಾನಿ. ಇದು ದೆಹಲಿಯ ಬೀದಿಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಅತ್ಯಂತ ಪ್ರಸಿದ್ಧ ಬಿರಿಯಾನಿಯಾಗಿದೆ. ಈ ಬಿರಿಯಾನಿಯಲ್ಲಿ ಹೆಚ್ಚಾಗಿ ಮೆಣಸಿನ ಫ್ಲೇವರ್ ಕಾಣಬಹುದು. ಅದ್ದರಿಂದ ಇದರ ಸಂಪೂರ್ಣ ಪಾಕ ವಿಧಾನ ಇಲ್ಲಿದೆ. ನೀವೂ ಕೂಡ ನಿಮ್ಮ ಮನೆಯಲ್ಲಿ ಈ ದೇಗಿ ಬಿರಿಯಾನಿ ಮಾಡಿ ರುಚಿ ನೋಡಿ.

ದೇಗಿ ಬಿರಿಯಾನಿ ಮಾಡುವ ಸಂಪೂರ್ಣ ಪಾಕ ವಿಧಾನ ಇಲ್ಲಿದೆ.

ದೇಗಿ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು:

500 ಗ್ರಾಂ ಅಕ್ಕಿ, ದಾಲ್ಚಿನ್ನಿ ಎಲೆ 2, ಏಲಕ್ಕಿ 2-3, ಲವಂಗ 3-4, ಚಕ್ಕೆ 2-3, ರುಚಿಗೆ ಉಪ್ಪು, ಒಂದು ಚಿಕ್ಕ ಟಿನ್ ತುಪ್ಪ, 700 ಗ್ರಾಂ ಚಿಕನ್, 1 ಟೀಸ್ಪೂನ್ ಗರಂ ಮಸಾಲ ಪುಡಿ, 2 ಚಮಚ ಗರಂ ಮಸಾಲ, 1/2 ಚಮಚ ಜಾಯಿಕಾಯಿ ಪುಡಿ, 2 ಮಧ್ಯಮ ಹುರಿದ ಈರುಳ್ಳಿ, 250 ಮಿಲಿ ಮೊಸರು, 4 ಹಸಿ ಮೆಣಸಿನಕಾಯಿ, 3 ಚಮಚ ಕತ್ತರಿಸಿದ ಪುದೀನಾ ಸೊಪ್ಪು, 8-10 ಒಣದ್ರಾಕ್ಷಿ ಮತ್ತು ಗೋಡಂಬಿ, 2 ಚಮಚ ನಿಂಬೆ ರಸ, ಹಸಿ ಮೆಣಸಿನ ಕಾಯಿಯ ಪೇಸ್ಟ್ 2 ಚಮಚ.

ದೇಗಿ ಬಿರಿಯಾನಿ ಮಾಡುವ ವಿಧಾನ:

ಬಿರಿಯಾನಿ ಅನ್ನ ಮಾಡುವುದು:

ಅಕ್ಕಿಯನ್ನು ಚೆನ್ನಾಗಿ ತೊಳೆದು ಸುಮಾರು 30 ನಿಮಿಷಗಳ ಕಾಲ ನೆನೆಸಿಡಿ. ನಂತರ, ಏಲಕ್ಕಿ,ಲವಂಗ, ಚಕ್ಕೆ ಎಲ್ಲಾ ಮಸಾಲೆಗಳನ್ನು ಸೇರಿಸಿ ಮತ್ತು ಅಕ್ಕಿ ಶೇಕಡಾ 80ರಷ್ಟು ಬೇಯುವವರೆಗೆ ಚೆನ್ನಾಗಿ ಕುದಿಸಿ.

ಇದನ್ನೂ ಓದಿ: ಬಾಯಲ್ಲಿ ನಿರೂರಿಸುವ ಹಬ್ಬದ ಸಿಹಿ ಭಕ್ಷ್ಯಗಳು ಇಲ್ಲಿವೆ ಬಿರಿಯಾನಿ ಮಸಾಲ ಮಾಡುವುದು:

ಒಂದು ದೊಡ್ಡ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ಹಸಿರು ಮೆಣಸಿನಕಾಯಿಗಳು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ನಂತರ ಮೇಲೆ ತಿಳಿಸಿದ ಎಲ್ಲಾ ಮಸಾಲೆಗಳನ್ನು ಸೇರಿಸಿ. ಇದನ್ನು ಸುಮಾರು 5-6 ನಿಮಿಷಗಳ ಕಾಲ ಹುರಿಯಿರಿ. ನಂತರ ದಮ್ ಬಿರಿಯಾನಿ ಪುಡಿ ಅಥವಾ ಯಾವುದೇ ಬಿರಿಯಾನಿ ಪುಡಿ ಸೇರಿಸಿ ಮತ್ತು ಮತ್ತೆ 5 ನಿಮಿಷಗಳ ಕಾಲ ಬೆರೆಸಿ. ಈಗ, ಚಿಕನ್ ತುಂಡುಗಳನ್ನು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಬೇಯಿಸಿದ ಅನ್ನವನ್ನು ಚಿಕನ್ ಗ್ರೇವಿಯ ಮೇಲೆ ಸುರಿಯಿರಿ ಮತ್ತು ಅಕ್ಕಿಯ ನಡುವೆ ಮೆಣಸಿನಕಾಯಿ ಪೇಸ್ಟ್ ಸೇರಿಸಿ. ಇದನ್ನು 10 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಇದರ ಮೇಲೆ ಹುರಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನ ಎಲೆಗಳಿಂದ ಅಲಂಕರಿಸಿ. ಈಗ ದೆಹಲಿ ಸ್ಪೆಷಲ್ ದೇಗಿ ಬಿರಿಯಾನಿ ಸಿದ್ದವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:  

Published On - 4:03 pm, Thu, 12 January 23

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ