
ಈ ಬೇಸಿಗೆಯಲ್ಲಿ ಐಸ್ ಆಪಲ್ಗಳ (ice apple) ವ್ಯಾಪಾರ ಜೋರಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಐಸ್ ಆಪಲ್ ಗೆ ಬೇಡಿಕೆ ಹೆಚ್ಚು, ಬೆಂಗಳೂರಿನ ಬಿದಿ ಬಿದಿಯಲ್ಲಿ ಐಸ್ ಆಪಲ್ ಸಿಗುತ್ತಿದೆ. ಆದರೆ ಈ ಐಸ್ ಆಪಲ್ ಮಿಲ್ಕ್‌ಶೇಕ್ (ice apple shake) ಯಾವತ್ತಾದರೂ ಸೇವನೆ ಮಾಡಿದ್ದೀರಾ? ಖಂಡಿತ, ಯಾಕೆಂದರೆ ಐಸ್ ಆಪಲ್ ಮಿಲ್ಕ್‌ಶೇಕ್ ತಯಾರಿಸುವುದು ಹೇಗೆ ಎಂಬ ಬಗ್ಗೆ ಐಡಿಯಾ ಕೂಡ ಇರಲ್ಲ, ಈ ಐಸ್ ಆಪಲ್ನ್ನು ತಾಳೆ ಹಣ್ಣು ಎಂದು ಕರೆಯುತ್ತೇವೆ. ಇದು ಬೇಸಿಗೆಯಲ್ಲಿ ತುಂಬಾ ತಂಪು ಅನುಭವವನ್ನು ನೀಡುತ್ತದೆ.ಈ ಬೇಸಿಗೆಯಲ್ಲಿ ಹೆಚ್ಚು ಮಾರಾಟ ಆಗುತ್ತಿದ್ದು, ಸಿಹಿಯಾಗಿ, ಆರೋಗ್ಯಕರವಾಗಿ ತಾಳೆ ಹಣ್ಣು ಇರುತ್ತದೆ. ಇದರ ಮಿಲ್ಕ್‌ಶೇಕ್ ಮಾಡಿ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗಾಗಲೇ ಈ ವಿಡಿಯೋ 4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಮೊದಲಿಗೆ ಐಸ್ ಆಪಲ್ ಕತ್ತರಿಸುವುದನ್ನು ಕಾಣಬಹುದು, ನಂತರ ಅದರ ಹಸಿರು ಭಾಗಗಳನ್ನು ತೆಗೆದು, ಚಾಕುವನ್ನು ಬಳಸಿ, ಅದರ ಹೊರ ಪದರದಿಂದ ತಿರುಳನ್ನು ತೆಗೆಯುತ್ತಾರೆ. ಆ ಇಡೀ ಐಸ್ ಆಪಲ್ನಲ್ಲಿ ಒಳಗೆ ಕಣ್ಣಿನಂತಿರುವ ಬಿಳಿಯಾದ ಹೋಳಿನಲ್ಲಿ ಎಲ್ಲವು ಅಡಗಿದೆ. ಅದನ್ನು ತೆಗೆಯುವುದು ದೊಡ್ಡ ಸಾಹಸವಾಗಿದೆ. ನಂತರ ಒಂದು ಬೌಲ್ನಲ್ಲಿ ಒಂದು ಹಿಡಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ಅವುಗಳ ಸಿಪ್ಪೆ ಸುಲಿದು, ಪ್ರತ್ಯೇಕ ಪಾತ್ರೆಯಲ್ಲಿ ಹಾಕುತ್ತಾರೆ. ನಂತರ ಚಿಯಾ ಬೀಜಗಳನ್ನು ಬೌಲ್ನಲ್ಲಿ ಹಾಕಿ. ಅದಕ್ಕೆ ನೀರು ಹಾಗೂ ಬೆಲ್ಲವನ್ನು ಹಾಕುತ್ತಾರೆ. ನಂತರ ಒಂದು ಮಿಕ್ಸಿ ಜಾರ್ಗೆ ತೆಗೆದುಕೊಂಡು ಅದಕ್ಕೆ ನೀರಿನಲ್ಲಿ ನೆನೆಸಿಟ್ಟ ಬಾದಾಮಿಯ ಸಿಪ್ಪೆ ತೆಗೆದು ಹಾಕುತ್ತಾರೆ. ಆದನಂತರ ಅದಕ್ಕೆ ಐಸ್ ಆಪಲ್ ತಿರುಳು, ಬೆಲ್ಲ ಎಲ್ಲವನ್ನು ಹಾಕಿ ಮಿಶ್ರಣ ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಮೊದಲು ಗುರುತಿಸುವ ಪ್ರಾಣಿ ತಿಳಿಸುತ್ತಂತೆ ನಿಮ್ಮ ರಹಸ್ಯ ಗುಣ ಸ್ವಭಾವ
ಈ ಮಿಶ್ರಣ ಆದ್ಮೇಲೆ, ಒಂದು ದೊಡ್ಡ ಲೋಟಕ್ಕೆ ಈ ನೆನೆಸಿದ ಚಿಯಾ ಬೀಜ, ಹೆಪ್ಪುಗಟ್ಟಿದ ಹಾಲು, ಜೊತೆಗೆ ಐಸ್ ಆಪಲ್ ಪೇಸ್ಟ್ ಹಾಕುತ್ತಾರೆ. ಅಲಂಕಾರ ಮತ್ತು ಹೆಚ್ಚುವರಿ ಸುವಾಸನೆಗಾಗಿ ಕತ್ತರಿಸಿದ ಐಸ್ ಆಪಲ್ ತಿರುಳನ್ನು ಸಣ್ಣ ತುಂಡುಗಳಾಗಿ ಮಾಡಿ ಹಾಕುತ್ತಾರೆ. ಮತ್ತೆ ಅದಕ್ಕೆ ಹಾಲು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ ಕುಡಿಯುತ್ತಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಐಸ್ ಆಪಲ್ ಮಿಲ್ಕ್‌ಶೇಕ್ ಪಾಕವಿಧಾನಕ್ಕೆ ಆಹಾರಪ್ರಿಯರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರರು, “ದಯವಿಟ್ಟು ನನಗಾಗಿ ಒಂದನ್ನು ನೀಡಬಹುದೇ…” ಕೇಳಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ನನಗೆ ಈ ಹಣ್ಣು ತುಂಬಾ ಇಷ್ಟ!” ಎಂದು ಕಮೆಂಟ್ ಮಾಡಿದ್ದಾರೆ. ಇದು ಮಿಲ್ಕ್ ಶೇಕ್ ಅಲ್ಲ ಆದರೆ ಈಗ ಅದು ಫಲೂದಾ ಎಂದು ಮತ್ತೊಬ್ಬ ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಪಾಕವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ