ದಾಸವಾಳ ಚಹಾ
ದಾಸವಾಳ(Hibiscus)ದಲ್ಲಿ ಅನೇಕ ಅನೇಕ ಔಷಧೀಯ ಗುಣಗಳಿದ್ದು, ಶೀತ, ಜ್ವರ ಸೇರಿದಂತೆ ಹಲವು ರೋಗಗಳನ್ನು ನಿವಾರಿಸಬಹುದಾಗಿದೆ. ದಾಸವಾಳದ ಹೂವನ್ನು ನೀರಿನಲ್ಲಿ ಕುದಿಸಿ ಈ ಚಹಾ ತಯಾರಿಸಲಾಗುತ್ತದೆ. ಇದು ಕ್ರ್ಯಾನ್ಬೆರಿಗಳಂತೆಯೇ ಟಾರ್ಟ್ ಪರಿಮಳವನ್ನು ಹೊಂದಿದೆ. ದಾಸವಾಳದ ಚಹಾವನ್ನು ಕುಡಿಯುವುದರೊಂದಿಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ ಮತ್ತು ತೂಕ ಇಳಿಸಲು (Weight Loss) ಸಹಾಯ ಮಾಡುತ್ತದೆ. ದಾಸವಾಳ ಚಹಾದ ಪ್ರಯೋಜನಗಳು ಇಲ್ಲಿದೆ.
- ದಾಸವಾಳ ಚಹಾ ಮಾಡುವುದು ಹೇಗೆ?
ಮೊದಲು ಒಂದು ಲೋಟ ಕುದಿಯುವ ನೀರಿನಲ್ಲಿ ದಾಸವಾಳ ಹೂವಿನ ದಳಗಳನ್ನು ಹಾಕಿ ಸುಮಾರು 5 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಇದರಲ್ಲಿ ಹೆಚ್ಚು ತಾಜಾತನ ತುಂಬಿರುವ ಕಾರಣದಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಇಡೀ ದಿನ ಚೈತನ್ಯದಿಂದ ಇರಿಸುತ್ತದೆ.
ದಾಸವಾಳ ಚಹಾ ಸೇವನೆಯಿಂದ ದೇಹದಲ್ಲಿ ಈಗಾಗಲೇ ಅಭಿವೃದ್ಧಿ ಯಾಗಿರುವ ಕ್ಯಾನ್ಸರ್ ಕಾರಕ ಜೀವಕೋಶಗಳ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತದೆ. ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿ ಹಾಗೂ ಮಹಿಳೆಯರ ಸ್ತನಗಳ ಭಾಗದಲ್ಲಿ ಕಂಡುಬರುವ ಕ್ಯಾನ್ಸರ್ ಜೀವಕೋಶಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.
- ದಾಸವಾಳ ಚಹಾ ಕುಡಿಯುವುದರಿಂದಾಗುವ ಪ್ರಯೋಜನಗಳು
ಆ್ಯಂಟಿ ಆಕ್ಸಿಡೆಂಟ್ಗಳು ಹೆಚ್ಚಿವೆ
ದಾಸವಾಳ ಚಹಾದಲ್ಲಿ ಇದರಲ್ಲಿ ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ಗಳಿದ್ದು ಅದು ನಿಮ್ಮ ಕೋಶಗಳಿಗೆ ಹಾನಿಯನ್ನುಂಟುಮಾಡುವ ಫ್ರೀ ರಾಡಿಕಲ್ಸ್ ಎಂಬ ಸಂಯುಕ್ತಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಸ್ವತಂತ್ರ ರಾಡಿಕಲ್ಗಳ ಹಾನಿಕಾರಕ ಪರಿಣಾಮಗಳನ್ನು 92% ರಷ್ಟು ಕಡಿಮೆಗೊಳಿಸಿದೆ ಎಂದು ಸಾಬೀತಾಗಿದೆ. ದಾಸವಾಳದ ಬಹುತೇಕ ಎಲ್ಲಾ ಭಾಗಗಳು ಪ್ರಬಲವಾದ ಆ್ಯಂಟಿ ಆಕ್ಸಿಡೆಂಟ್ಗುಣಲಕ್ಷಣಗಳನ್ನು ಹೊಂದಿವೆ.
- ದಾಸವಾಳ ಚಹಾ ಕುಡಿಯುವುದರಿಂದ ಖಿನ್ನತೆ ದೂರ
ದಾಸವಾಳ ಚಹಾ ಕುಡಿಯುವುದರಿಂದ ಖಿನ್ನತೆ ದೂರವಾಗಲಿದೆ. ಮನಸ್ಸಿನಲ್ಲಿ ಯಾವುದೋ ಒಂದು ವಿಷಯವನ್ನಿಟ್ಟುಕೊಂಡು ಸದಾ ಕೊರಗುತ್ತಿದ್ದರೆ ಅವೆಲ್ಲವೂ ಕ್ರಮೇಣವಾಗಿ ದೂರವಾಗಲಿದೆ.
- ರಕ್ತದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ
ದಾಸವಾಳದ ಚಹಾವು ರಕ್ತದ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ. ಒಂದು ಅಧ್ಯಯನದಲ್ಲಿ, ಮಧುಮೇಹ ಹೊಂದಿರುವ 60 ಜನರಿಗೆ ದಾಸವಾಳದ ಚಹಾ ಅಥವಾ ಕಪ್ಪು ಚಹಾವನ್ನು ನೀಡಲಾಯಿತು.
ಒಂದು ತಿಂಗಳ ನಂತರ, ದಾಸವಾಳದ ಚಹಾವನ್ನು ಸೇವಿಸಿದವರು ಉತ್ತಮ HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿಕೊಂಡಿದ್ದರು ಮತ್ತು ಒಟ್ಟು ಕೊಲೆಸ್ಟ್ರಾಲ್, ಕೆಟ್ಟ LDL ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಕಡಿಮೆಯಾಗಿತ್ತು.
- ಸುಲಭವಾಗಿ ತೂಕವನ್ನು ಇಳಿಸಬಹುದು
ಇದರಲ್ಲಿನ ಸಾರಗಳು ಕೊಬ್ಬಿನ ಕೋಶಗಳನ್ನು ಸಂಗ್ರಹವಾಗುವುದನ್ನ ತಡೆಯಲು ಸಹಾಯ ಮಾಡುತ್ತದೆ. ದಾಸವಾಳ ಸೇವನೆ ಮಾಡುವುದರಿಂದ ದೇಹದ ತೂಕ, ದೇಹದ ಕೊಬ್ಬು ಮತ್ತು ಕೊಬ್ಬಿನ ಅಂಗಾಂಶದಲ್ಲಿನ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಸವಾಳ ಹೂವಿನ ಚಹಾ ಕುಡಿಯುವುದರಿಂದ ಸುಲಭವಾಗಿ ತೂಕವನ್ನು ಇಳಿಸಬಹುದು ಎಂದು ಸಾಬೀತಾಗಿದೆ.
- ದಾಸವಾಳ ಚಹಾ ಕುಡಿಯುವುದರಿಂದಾಗುವ ಅಡ್ಡಪರಿಣಾಮಗಳು
-ಕೆಲವು ಮಂದಿಗೆ ಅಲರ್ಜಿ, ಜ್ವರ, ಕಣ್ಣು ಕೆಂಪಾಗುವುದು, ಇನ್ನು ದಾಸವಾಳವು ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಹೀಗಾಗಿ ನೀವು ಮಧುಮೇಹಿಗಳಾಗಿದ್ದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸಬೇಕು.
-ಗರ್ಭಿಣಿಯರು ಹೆಚ್ಚಾಗಿ ದಾಸವಾಳ ಚಹಾವನ್ನು ಕುಡಿಯದಂತೆ ಸಲಹೆ ನೀಡಲಾಗುತ್ತದೆ
ಮೇಲೆ ನೀಡಲಾದ ಮಾಹಿತಿಯು ಟಿವಿ9ನ ಅಧಿಕೃತ ಮಾಹಿತಿಯಲ್ಲ, ಇದು ಸಾಮಾನ್ಯ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಯಾವುದೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ