ಒಗಟಿನ ಗಂಟು, ಬುದ್ಧಿಗೆ ಜಿಗುಟು, ಕೇಳಿ ಉತ್ತರಿಸಿ: ಹಿರೇಮಗಳೂರು ಕಣ್ಣನ್

|

Updated on: Mar 26, 2023 | 3:56 PM

ಹಿರೇಮಗಳೂರು ಕಣ್ಣನ್ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಫೇಸ್​​ ಬುಕ್​​ ಪೇಜ್​ನಲ್ಲಿ ಒಗಟು ಜಿಗುಟು ಬಿಡಿಸುವಿರಾ? ಪೋಸ್ಟ್​​​ಗಳನ್ನು ಹಂಚಿಕೊಳ್ಳುತ್ತಿದ್ದು, ಜನಪದ ಸಾಹಿತ್ಯದ ಒಂದು ಭಾಗವಾದ ಒಗಟಿನ ಮಹತ್ವವನ್ನು ಮತ್ತೆ ಪಸರಿಸುತ್ತಿದ್ದಾರೆ.

ಒಗಟಿನ ಗಂಟು, ಬುದ್ಧಿಗೆ ಜಿಗುಟು, ಕೇಳಿ ಉತ್ತರಿಸಿ: ಹಿರೇಮಗಳೂರು ಕಣ್ಣನ್
ಹಿರೇಮಗಳೂರು ಕಣ್ಣನ್
Image Credit source: Facebook
Follow us on

ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ, ಇನ್ನೇನು ರಜಾ ಪ್ರಾರಂಭವಾಗುವ ಖುಷಿ ಒಂದೆಡೆಯಾದರೆ, ಇನ್ನೊಂದೆಡೆ ಸಾಕಷ್ಟು ತಿಂಗಳುಗಳ ಬಳಿಕ ಅಜ್ಜನ ಮನೆಗೆ ಹೋಗುವ ಖುಷಿ. ಅಜ್ಜ ಹೇಳುವ ಕಥೆಗಳು, ಅಜ್ಜಿ ಮಾಡುವ ರುಚಿಕರ ತಿಂಡುಗಳು ಇವೆಲ್ಲಾವು ಹಬ್ಬದ ಸಂಭ್ರಮದಂತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಖುಷಿಗಳು ಕಣ್ಮರೆಯಾಗುತ್ತಿದೆ. ಒಗಟು ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದೇ ಅಜ್ಜನ ಮನೆ. ಆದರೆ ಈಗೀನ ಬದಲಾದ ಜೀವನಶೈಲಿಯಲ್ಲಿ ಒಗಟು ಎಂದರೆ ಯಾವ ಮಕ್ಕಳಿಗೂ ತಿಳಿಯದು.

ಒಗಟು ಜನಪದ ಸಾಹಿತ್ಯದಲ್ಲಿ ಒಂದು ಮುಖ್ಯವಾದ ಪ್ರಕಾರ. ಕನ್ನಡದಲ್ಲಿ ಒಡಪು, ಮುಂಡಿಗೆ ಎಂಬ ಬೇರೆ ಹೆಸರಗಳೂ ಉಂಟು. ಒಗಟು ಎಂದರೆ ಒಬ್ಬರು ಮತ್ತೊಬ್ಬರಿಗೆ ಒಡ್ಡಿದ ಸವಾಲು, ಸಮಸ್ಯೆ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ ಚಮತ್ಕಾರವಾಗಿ ವರ್ಣಿಸಿ ಆ ಅವ್ಯಕ್ತ ವಸ್ತುವನ್ನು ಕಂಡುಹಿಡಿಯುವಂತೆ ಹೇಳುವುದು ಇದರ ಕ್ರಮ. ಸಾಮಾಜಿಕ ಮಾಧ್ಯಮವಾದ ಫೇಸ್​​ ಬುಕ್​​ ಖಾತೆಯಲ್ಲಿ ಇದೀಗಾ ಒಗಟು ಜಿಗುಟು ಬಿಡಿಸುವಿರಾ? ಭಾರೀ ವೈರಲ್​ ಆಗುತ್ತಿದೆ. ಇದು ಸಾಕಷ್ಟು ಸ್ವಾರಸ್ಯಕರವಾಗಿದ್ದು, ದಿನಗಳೆದಂತೆ ಸಾಕಷ್ಟು ವೀಕ್ಷಣೆ ಪಡೆಯುತ್ತಿದೆ.

ಇದನ್ನೂ ಓದಿ: ತನ್ನ ಸ್ವಂತ ಹಣದಿಂದ ಐಫೋನ್ ಖರೀದಿಸಿದ 12 ವರ್ಷದ ಪುಟ್ಟ ಹುಡುಗಿ, ಆಕೆಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಗೊತ್ತಾ?

ಚಿಕ್ಕಮಗಳೂರಿನ ಹೊರ ಭಾಗದಲ್ಲಿರುವ ಹಿರೇಮಗಳೂರಿನಲ್ಲಿ ಕೋದಂಡ ರಾಮ ದೇವಾಲಯದಲ್ಲಿ ಅರ್ಚಕರಾಗಿ, ಜೊತೆಗೆ ಕನ್ನಡದಲ್ಲಿ ಸ್ವಚ್ಛಂದವಾಗಿ ವ್ಯವಹರಿಸಬಲ್ಲ ಕನ್ನಡದ ಪೂಜಾರಿ ಎಂದೇ ಪ್ರಸಿದ್ಧವಾಗಿರುವ ಹಿರೇಮಗಳೂರು ಕಣ್ಣನ್ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಫೇಸ್​​ ಬುಕ್​​ ಪೇಜ್​ನಲ್ಲಿ ಒಗಟು ಜಿಗುಟು ಬಿಡಿಸುವಿರಾ? ಪೋಸ್ಟ್​​​ಗಳನ್ನು ಹಂಚಿಕೊಳ್ಳುತ್ತಿದ್ದು, ಜನಪದ ಸಾಹಿತ್ಯದ ಒಂದು ಭಾಗವಾದ ಒಗಟಿನ ಮಹತ್ವವನ್ನು ಮತ್ತೆ ಪಸರಿಸುತ್ತಿದ್ದಾರೆ. ಹಿರೇಮಗಳೂರು ಕಣ್ಣನ್ ಅವರು ಹಂಚಿಕೊಂಡಿರುವ ಪೋಸ್ಟ್​​ ಇಲ್ಲಿದೆ ನೋಡಿ.

 

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 3:54 pm, Sun, 26 March 23