AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2024: ಮನೆಯಲ್ಲಿಯೇ ನೈಸರ್ಗಿಕ ಬಣ್ಣಗಳನ್ನು ತಯಾರಿಸುವುದು ಹೇಗೆ?

ಹೋಳಿ ಎಂದರೆ ಬಣ್ಣಗಳ ಹಬ್ಬ. ಬಣ್ಣಗಳಿಲ್ಲದೇ ಹೋಳಿಯನ್ನು ಆಚರಿಸಲು ಸಾಧ್ಯವಿಲ್ಲ. ಬಣ್ಣಗಳ ಹಬ್ಬ ಹೋಳಿ ಹಬ್ಬಕ್ಕೆ ಬೇಕಾದ ತಯಾರಿಯು ಜೋರಾಗಿಯೇ ನಡೆಯುತ್ತಿದೆ. ಹಬ್ಬಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದೇ ಈ ಕಲರ್ ಫುಲ್ ಬಣ್ಣಗಳು. ಈ ಬಣ್ಣಗಳ ಎರಚಾಟದ ಸಂಭ್ರಮದ ನಡುವೆ ಈ ರಾಸಾಯನಿಕ ಬಣ್ಣಗಳು ಚರ್ಮ ಹಾಗೂ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಹೀಗಾಗಿ ನೈಸರ್ಗಿಕ ಬಣ್ಣಗಳನ್ನು ಮನೆಯಲ್ಲೇ ತಯಾರಿಸಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಬಹುದಾಗಿದೆ.

Holi 2024: ಮನೆಯಲ್ಲಿಯೇ ನೈಸರ್ಗಿಕ ಬಣ್ಣಗಳನ್ನು ತಯಾರಿಸುವುದು ಹೇಗೆ?
TV9 Web
| Edited By: |

Updated on: Mar 14, 2024 | 10:07 AM

Share

ಭಾರತದಲ್ಲಿ ವಿಶೇಷವಾಗಿ ಆಚರಿಸುವ ಹಬ್ಬಗಳಲ್ಲಿ ಒಂದು ಈ ಹೋಳಿ. ಬಣ್ಣಗಳೇ ಹೋಳಿ ಹಬ್ಬವನ್ನು ಇನ್ನಷ್ಟು ಕಲರ್ ಫುಲ್ ಆಗಿಸುತ್ತದೆ. ಯಾವುದೇ ಜಾತಿ ಮತ, ಬೇಧ ಭಾವವಿಲ್ಲದೇ ಓಕುಳಿಯಾಟವನ್ನು ಆಡಿ ಸಂಭ್ರಮಿಸುವ ಹಬ್ಬವಾಗಿದೆ. ಮನೆಯಲ್ಲಿ ಹಬ್ಬದಡುಗೆಯ ರುಚಿ, ಮೈ ತುಂಬಾ ಬಣ್ಣಗಳ ರಂಗು ಇದೇ ಬಣ್ಣಗಳ ಹಬ್ಬವನ್ನು ವಿಶೇಷವನ್ನಾಗಿಸುತ್ತದೆ. ಈ ಹಿಂದೆ ಹೋಳಿ ಹಬ್ಬಕ್ಕೆ ಬಣ್ಣಗಳನ್ನು ಮನೆಯಲ್ಲೇ ತಯಾರಿಸುತ್ತಿದ್ದರು. ಆದರೆ ಇದೀಗ ಮಾರುಕಟ್ಟೆಯಲ್ಲಿರುವ ಸಿಗುವ ರಾಸಾಯನಿಕ ಬಣ್ಣಗಳ ಬಳಕೆ ಮಾಡುವವರೇ ಹೆಚ್ಚಾಗಿದ್ದಾರೆ.

* ಹಳದಿ ಬಣ್ಣ: ಹಳದಿ ಬಣ್ಣವನ್ನು ಮಾಡಿಕೊಳ್ಳಲು ಕಡಲೆಹಿಟ್ಟು ಮತ್ತು ಅರಿಶಿನವನ್ನು ಬಳಸಬಹುದು. ಕಡಲೆಹಿಟ್ಟಿಗೆ ಒಣಗಿದ ಅರಶಿನ ಕೊಂಬನ್ನು ಕುಟ್ಟಿ ಪುಡಿ ಮಾಡಿ ಸೇರಿಸಿದರೆ ಈ ಬಣ್ಣವು ಸಿದ್ಧವಾಗುತ್ತದೆ. ಇಲ್ಲವಾದರೆ ಮನೆಯ ತೋಟದಲ್ಲಿರುವ ಹಳದಿ ಬಣ್ಣದ ಹೂವುಗಳನ್ನು ಪುಡಿ ಮಾಡಿ ಒಣಗಿಸಿ ಹಳದಿ ಬಣ್ಣವನ್ನು ತಯಾರಿಸಬಹುದು.

* ಕೆಂಪು ಬಣ್ಣ: ಕೆಂಪು ಬಣ್ಣಕ್ಕಾಗಿ ಕೆಂಬಣ್ಣದ ದಾಸವಾಳ ಹೂವುಗಳು ಹಾಗೂ ಗುಲಾಬಿ ಹೂವುಗಳ ಎಸಳನ್ನು ಬಳಸಬಹುದು. ಈ ಹೂವಿನ ಎಸಳನ್ನು ಒಣಗಿಸಿ ಪುಡಿ ಮಾಡಿ ಇದಕ್ಕೆ ಅಕ್ಕಿ ಹಿಟ್ಟನ್ನು ಬೆರೆಸಿದರೆ ಕೆಂಪು ಬಣ್ಣವು ಸಿದ್ಧವಾಗುತ್ತದೆ. ಇಲ್ಲವಾದರೆ ಅರಶಿನಕ್ಕೆ ನಿಂಬೆ ರಸವನ್ನು ಸೇರಿಸಿ ಒಣಗಿಸಿದರೆ ಕೆಂಪು ಬಣ್ಣವು ಸಿದ್ಧವಾಗುತ್ತದೆ.

* ಕೆನ್ನೆರಳೆ ಬಣ್ಣ : ಬೀಟ್ ರೂಟ್ ಚೂರುಗಳನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ ಕೆನ್ನೆರಳೆ ಬಣ್ಣದ ನೀರನ್ನು ತಯಾರಿಸಬಹುದು. ಇಲ್ಲವಾದರೆ ಈ ಬೀಟ್ ರೂಟ್ ಚೂರುಗಳನ್ನು ಕತ್ತರಿಸಿ ಪುಡಿ ಮಾಡಿಕೊಂಡು ಅಕ್ಕಿ ಹಿಟ್ಟಿನೊಂದಿಗೆ ಬೆರೆಸಿ ಒಣಗಿಸಿದರೆ ಕೆನ್ನೆರಳೆ ಬಣ್ಣವಾಗುತ್ತದೆ.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿ ದೇಸಿ ಪಾನೀಯ ತಯಾರಿಸಿ

* ಹಸಿರು ಬಣ್ಣ : ನೈಸರ್ಗಿಕವಾಗಿ ಸಿಗುವ ಮದರಂಗಿ ಎಲೆ ಅಥವಾ ಹಸಿರು ಎಲೆಗಳನ್ನು ಒಣಗಿಸಿ ಪುಡಿಮಾಡಿ ಬಣ್ಣಗಳ ಎರಚಾಟಕ್ಕೆ ಈ ಹಸಿರು ಬಣ್ಣವನ್ನು ಬಳಸಬಹುದು.

* ಕಂದು ಬಣ್ಣ: ಮರದ ತೊಗಟೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು, ಇದಕ್ಕೆ ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟನ್ನು ಸೇರಿಸಿದರೆ ಕಂದುಬಣ್ಣ ರೆಡಿಯಾದಂತೆಯೇ. ಇಲ್ಲವಾದರೆ ಮನೆಯಲ್ಲಿ ಕಾಫಿ ಪುಡಿಯಿದ್ದರೆ ನೀರಿಗೆ ಹಾಕಿ ಕುದಿಸಿ ಅದಕ್ಕೆ ರೋಸ್ ವಾಟರ್ ಸೇರಿದಂತೆ ನೈಸರ್ಗಿಕವಾಗಿ ತಯಾರಾದ ಈ ಕಂದು ಬಣ್ಣವನ್ನು ಹೋಳಿ ಹಬ್ಬಕ್ಕೆ ಬಳಸಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್
ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್
ಜಮ್ಮು ಕಾಶ್ಮೀರದಲ್ಲಿ ಜೆಸಿಬಿ ಮೂಲಕ ಹಿಮಪಾತದ ತೆರವು
ಜಮ್ಮು ಕಾಶ್ಮೀರದಲ್ಲಿ ಜೆಸಿಬಿ ಮೂಲಕ ಹಿಮಪಾತದ ತೆರವು
15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶಿವಂ ದುಬೆ
15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶಿವಂ ದುಬೆ
ಪತಿ, ಸಹೋದರ ಮಾವ ಆತ್ಮಹತ್ಯೆ: ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಅರೆಸ್ಟ್
ಪತಿ, ಸಹೋದರ ಮಾವ ಆತ್ಮಹತ್ಯೆ: ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಅರೆಸ್ಟ್
ಅಜಿತ್ ಪವಾರ್​ ಸಾವಿಗೂ ಮುಂಚಿನ ಕೊನೆಯ ವಿಡಿಯೋ ಇಲ್ಲಿದೆ
ಅಜಿತ್ ಪವಾರ್​ ಸಾವಿಗೂ ಮುಂಚಿನ ಕೊನೆಯ ವಿಡಿಯೋ ಇಲ್ಲಿದೆ
ರಾಜಕೀಯಕ್ಕೆ ಬರಲು ಜೈ ಭೀಮ್ ಎನ್ನುತ್ತೀರಾ? ಉತ್ತರಿಸಿದ ದುನಿಯಾ ವಿಜಯ್
ರಾಜಕೀಯಕ್ಕೆ ಬರಲು ಜೈ ಭೀಮ್ ಎನ್ನುತ್ತೀರಾ? ಉತ್ತರಿಸಿದ ದುನಿಯಾ ವಿಜಯ್
ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣ ಬಿಚ್ಚಿಟ್ಟ ತಾಯಿ
ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣ ಬಿಚ್ಚಿಟ್ಟ ತಾಯಿ
ಉಡುಪಿ: ಅವಮಾನವಾದ ನಿವೃತ್ತ ಯೋಧನಿಗೆ ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ
ಉಡುಪಿ: ಅವಮಾನವಾದ ನಿವೃತ್ತ ಯೋಧನಿಗೆ ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ
ಬಾಲ್ಯದಲ್ಲಿ ಪಟ್ಟ ಕಷ್ಟಗಳ ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ
ಬಾಲ್ಯದಲ್ಲಿ ಪಟ್ಟ ಕಷ್ಟಗಳ ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ
ನನ್ನ 32 ವರ್ಷದ ಗಳಿಕೆಯನ್ನೆಲ್ಲ ದೋಚಿಬಿಟ್ಟರು ಸರ್​​, ಮನೆ ಮಾಲೀಕ ಭಾವುಕ
ನನ್ನ 32 ವರ್ಷದ ಗಳಿಕೆಯನ್ನೆಲ್ಲ ದೋಚಿಬಿಟ್ಟರು ಸರ್​​, ಮನೆ ಮಾಲೀಕ ಭಾವುಕ