Summer Healthy Drinks :ಅಡುಗೆ ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿ ದೇಸಿ ಪಾನೀಯ ತಯಾರಿಸಿ
ಬೇಸಿಗೆಯು ಆರಂಭವಾಗಿದ್ದು, ಸೂರ್ಯನು ತನ್ನ ತೀವ್ರವಾದ ಕಿರಣಗಳಿಂದ ಮೈ ಸುಡುತ್ತಿದ್ದಾನೆ. ಈ ತಾಪಮಾನದಲ್ಲಿ ಎಷ್ಟೇ ನೀರು ಕುಡಿದರೂ ಬಾಯಾರಿಕೆಯು ನೀಗುತ್ತಿಲ್ಲ. ಈ ಸಮಯದಲ್ಲಿ ತಂಪು ಪಾನೀಯಗಳನ್ನು ನೀಡಿದರೆ ಬೇಡ ಎನ್ನಲು ಮನಸ್ಸಾದರೂ ಹೇಗೆ ಬರುತ್ತದೆ ಹೇಳಿ. ಬಿಸಿಲಿನ ಧಗೆಯ ನಡುವೆ ತಂಪಾದ ಪಾನೀಯವನ್ನು ಕುಡಿದರೆ ಮನಸ್ಸು ಹಾಗೂ ದೇಹಕ್ಕೂ ಖುಷಿಯ ಅನುಭವವಾಗುತ್ತದೆ. ಅಂಗಡಿಗಳಲ್ಲಿ ಸಿಗುವ ಪಾನೀಯಕ್ಕಿಂತ ಮನೆಯಲ್ಲೇ ಮೆಂತ್ಯೆ ಕಾಳು, ನಿಂಬೆ ಹಣ್ಣು ಹಾಗೂ ಹೆಸರುಕಾಳುಗಳಿಂದ ಪಾನೀಯ ಮಾಡಿ ಸೇವಿಸಿದರೆ ದೇಹಕ್ಕೆ ಹಿತಕರ.
ಬೇಸಿಗೆಯಲ್ಲಿ ವಿಪರೀತ ಬಾಯಾರಿಕೆಯಾಗುವುದು ಸಹಜ. ಮೈ ಸುಡುವ ಬಿಸಿಲಿನಲ್ಲಿ ತಣ್ಣನೆಯ ಏನಾದರೂ ಸಿಕ್ಕರೆ ಮುಖದಲ್ಲಿ ಸಣ್ಣದೊಂದು ಗು ಮೂಡುತ್ತದೆ. ಈ ತಂಪು ಪಾನೀಯಗಳು ಬಾಯಾರಿಕೆ, ಸುಸ್ತು, ದಣಿವನ್ನು ನೀಗಿಸಿ ಮನಸ್ಸು ಹಾಗೂ ದೇಹವನ್ನು ಆರಾಮದಾಯಕವನ್ನಾಗಿಸುತ್ತದೆ. ಅದಲ್ಲದೇ, ದಾಹವಾದಾಗ ಅಂಗಡಿಗಳಲ್ಲಿ ಸಿಗುವ ಕೃತಕ ಜ್ಯೂಸ್‌ಗಳ ಮೊರೆ ಹೋಗುವುದೇ ಹೆಚ್ಚು. ಈ ಕೃತಕ ಜ್ಯೂಸ್ ಗಳಲ್ಲಿ ರಾಸಾಯನಿಕಯುಕ್ತ ಅಂಶಗಳು ಹೇರಳವಾಗಿದ್ದು ಆರೋಗ್ಯ ಸಮಸ್ಯೆಗಳು ಬಂದದ್ದೇ ತಿಳಿಯಲು. ಹೀಗಾಗಿ ಮನೆಯಲ್ಲೇ ದೇಸಿ ಪಾನೀಯಗಳನ್ನು ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ.
ಮೆಂತ್ಯೆ ಬೆಲ್ಲ ಪಾನೀಯ:
ಬೇಕಾಗುವ ಸಾಮಗ್ರಿಗಳು :
- ಮೆಂತ್ಯೆ ಕಾಳು
- ಬೆಲ್ಲ
- ನೀರು
ಮೆಂತ್ಯೆ ಬೆಲ್ಲ ಪಾನೀಯ ಮಾಡುವ ವಿಧಾನ :
- ಮೊದಲಿಗೆ ಸುಮಾರು ಒಂದೆರಡು ಗಂಟೆ ನೆನೆಸಿಟ್ಟುಕೊಳ್ಳಬೇಕು.
- ಆ ಬಳಿಕ ಈ ಮೆಂತ್ಯೆಯನ್ನು ನುಣ್ಣಗೆ ರುಬ್ಬಿಕೊಂಡು ಬೆಲ್ಲ ಹಾಗೂ ನೀರು ಬೆರೆಸಿದರೆ ಕೂಲ್ ಕೂಲ್ ಪಾನೀಯ ಸವಿಯಲು ಸಿದ್ಧ.
- ಮೆಂತ್ಯೆ ಕಾಳು ಪಾನೀಯ ಮಾಡಿದ ತಕ್ಷಣ ಕುಡಿಯಿರಿ. ಹಾಗೆ ಇಟ್ಟರೆ ಈ ಪಾನೀಯ ಗಟ್ಟಿಯಾಗುತ್ತದೆ.
ಹೆಸರುಕಾಳಿನ ಜ್ಯೂಸ್:
ಬೇಕಾಗುವ ಸಾಮಗ್ರಿಗಳು:
- ಹೆಸರು ಕಾಳು
- ತೆಂಗಿನ ತುರಿ
- ಏಲಕ್ಕಿ ಪುಡಿ
- ಬೆಲ್ಲ
ಇದನ್ನೂ ಓದಿ: ರೋಗ ದೂರ ಮಾಡುವಲ್ಲಿ ದೊಡ್ಡ ಪತ್ರೆಯ ಗುಣ ಬಹುದೊಡ್ಡದು
ಹೆಸರುಕಾಳಿನ ಜ್ಯೂಸ್ ಮಾಡುವ ವಿಧಾನ :
- ಮೊದಲಿಗೆ ಕಾಲು ಕಪ್ ನಷ್ಟು ಹೆಸರುಕಾಳನ್ನು ತೆಗೆದುಕೊಂಡು ಬಾಣಲೆಯಲ್ಲಿ ಚೆನ್ನಾಗಿ ಹುರಿಯಿರಿ. ಈ ಕಾಳು ಕಂದು ಬಣ್ಣಕ್ಕೆ ತಿರುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.
- ಹುರಿದ ಹೆಸರುಕಾಳು, ಬೆಲ್ಲ ಹಾಗೂ ತೆಂಗಿನ ತುರಿ ಹಾಗೂ ಏಲಕ್ಕಿಯನ್ನು ಸೇರಿಸಿ ನೀರು ಹಾಕಿ ರುಬ್ಬಿಕೊಳ್ಳಿ. ಅಗತ್ಯವಿದ್ದರೆ ನೀರು ಬೆರೆಸಿಕೊಂಡರೆ ಹೆಸರು ಕಾಳು ಪಾನೀಯ ಸವಿಯಲು ಸಿದ್ಧ.
ನಿಂಬೆ ಪಾನಕ:
ಬೇಕಾಗುವ ಸಾಮಗ್ರಿಗಳು :
- ನಿಂಬೆ ಹಣ್ಣು
- ಸಕ್ಕರೆ
- ಉಪ್ಪು
- ಐಸ್ ಕ್ಯೂಬ್
ಮಾಡುವ ವಿಧಾನ :
- ಮೊದಲಿಗೆ ನಿಂಬೆ ರಸವನ್ನು ಹಿಂಡಿಕೊಳ್ಳಿ. ಇದಕ್ಕೆ ನೀರು, ಸಕ್ಕರೆ ಹಾಗೂ ಚಿಟಿಕೆಯಷ್ಟು ಉಪ್ಪು ಹಾಕಿ ಕಲಸಿಕೊಳ್ಳಿ.
- ಇದಕ್ಕೆ ಐಸ್ ಕ್ಯೂಬ್ ಹಾಕಿದರೆ ನಿಂಬೆ ಪಾನಕ ಸವಿಯಲು ಸಿದ್ಧವಾಗಿರುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ