Holi 2024: ಬಣ್ಣದೋಕುಳಿ ಆಡುವ ಮುನ್ನ ಚರ್ಮ ಹಾಗೂ ಕೂದಲಿನ ಕಡೆಗೂ ಇರಲಿ ಗಮನ, ಈ ಟಿಪ್ಸ್ ಪಾಲಿಸಿ

ದೇಶದೆಲ್ಲೆಡೆ ಈಗ ಹೋಳಿ ಹಬ್ಬದ ಸಂಭ್ರಮಕ್ಕೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಹಿಂದೂಗಳು ಸಂಭ್ರಮ ಹಾಗೂ ಸಡಗರದಿಂದ ಆಚರಿಸುವ ವರ್ಣರಂಜಿತ ಹಬ್ಬವಾಗಿದೆ. ಈಗಾಗಲೇ ದೇಶದೆಲ್ಲೆಡೆ ಹಬ್ಬಕ್ಕೆ ತಯಾರಿಯು ಜೋರಾಗಿಯೇ ನಡೆಯುತ್ತಿದೆ. ಈ ದಿನದಂದು ಎಲ್ಲರೂ ಜೊತೆ ಸೇರಿ ಬಣ್ಣಗಳನ್ನು ಎರಚಾಡುವ ಮೂಲಕ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ವೇಳೆಯಲ್ಲಿ ಕೆಲವು ವಿಚಾರಗಳು ನಿಮ್ಮ ತಲೆಯಲ್ಲಿದ್ದರೆ ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Holi 2024: ಬಣ್ಣದೋಕುಳಿ ಆಡುವ ಮುನ್ನ ಚರ್ಮ ಹಾಗೂ ಕೂದಲಿನ ಕಡೆಗೂ ಇರಲಿ ಗಮನ, ಈ ಟಿಪ್ಸ್ ಪಾಲಿಸಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 21, 2024 | 5:40 PM

ಹೋಳಿ ಹಬ್ಬವು ಬಣ್ಣಗಳ ಜೊತೆಗೆ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದೆ. ಹೋಳಿ ಹಬ್ಬವನ್ನು ಪ್ರತೀ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಹೋಳಿ ಹಬ್ಬವು ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಭಾರತದಾದಂತ್ಯ ಹೋಳಿ ಹಬ್ಬವನ್ನು ಬಹಳಷ್ಟು ಸಂಭ್ರಮದಿಂದ ಹಾಗೂ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಬಣ್ಣಗಳೇ ಪ್ರಮುಖವಾದ ಆಕರ್ಷಣೆ. ಕಲರ್ ಫುಲ್ ಬಣ್ಣಗಳ ಎರಚಾಟದ ನಡುವೆ ಕೂದಲು ಹಾಗೂ ಚರ್ಮದ ಕಾಳಜಿಯು ಬಹಳ ಮುಖ್ಯವಾಗುತ್ತದೆ. ಹೋಳಿ ಆಚರಿಸುವಾಗ ಈ ಕೆಲವು ಸಲಹೆಗಳನ್ನು ಪಾಲಿಸುವುದು ಅಗತ್ಯ.

ಹೋಳಿಯಾಟಕ್ಕೂ ಮುನ್ನ ಈ ಟಿಪ್ಸ್ ಪಾಲಿಸಿ

  • ನೀರು ಕುಡಿಯುವ ಅಭ್ಯಾಸವಿರಲಿ : ಹೋಳಿ ಹಬ್ಬದ ಸಂಭ್ರಮಕ್ಕೆ ಕೆಲವು ಕೆಲವು ದಿನಗಳಿದ್ದು ದಿನನಿತ್ಯ ನೀರು ಕುಡಿಯುವುದನ್ನು ತಪ್ಪಿಸಬೇಡಿ. ನೀರು ಕುಡಿದರೆ ಚರ್ಮವು ತೇವಾಂಶ ಭರಿತವಾಗಿರುತ್ತದೆ. ಅದಲ್ಲದೇ ಚರ್ಮವು ಬಣ್ಣಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಶುಷ್ಕತೆಯನ್ನು ತಡೆಯುತ್ತದೆ.
  • ಮುಖಕ್ಕೆ ಐಸ್ ಕ್ಯೂಬ್ ಹಚ್ಚುವುದನ್ನು ಮರೆಯದಿರಿ : ಹೋಳಿ ಹಬ್ಬದ ದಿನ ಆಟ ಆಡಲು ಹೋಗುವ ಮುಂಚೆ ಚರ್ಮಕ್ಕೆ ಐಸ್‌ ಕ್ಯೂಬ್‌ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಇದು ಚರ್ಮದ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡಿ ಚರ್ಮದೊಳಗೆ ಬಣ್ಣಗಳು ಸೇರದಂತೆ ತಡೆಯುತ್ತವೆ.
  • ಮಾಯಿಶ್ಚರೈಸರ್ ಬಳಕೆಯಿರಲಿ : ಚರ್ಮದ ಆರೈಕೆಯಲ್ಲಿ ಮಾಯಿಶ್ಚರೈಸರ್ ಬಹುಮುಖ್ಯ ಪಾತ್ರವಹಿಸುತ್ತವೆ. ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಿ, ಬಣ್ಣದ ಹಾನಿಕಾರಕ ಅಂಶಗಳು ಚರ್ಮವನ್ನು ಸೇರಿಕೊಳ್ಳದಂತೆ ಮಾಯ್ಚರೈಸರ್ ನೋಡಿಕೊಳ್ಳುತ್ತವೆ. ಹೀಗಾಗಿ ಹೋಳಿ ಆಡಲು ಹೊರಡುವ ಮುನ್ನ ಮಾಯ್ಚರೈಸರ್ ಬಳಕೆ ಮಾಡುವುದನ್ನು ತಪ್ಪಿಸಬೇಡಿ.
  • ಚರ್ಮಕ್ಕೆ ಎಣ್ಣೆಯನ್ನು ಅನ್ವಯಿಸಿಕೊಳ್ಳಿ: ಹೋಳಿ ಆಡಲು ಹೊರಡುವ ಮುನ್ನವೇ, ಚರ್ಮ ಮತ್ತು ಕೂದಲಿಗೆ ಎಣ್ಣೆಯನ್ನು ಹಚ್ಚುವುದು ಒಳ್ಳೆಯದು. ಈ ತೈಲವು ರಕ್ಷಣಾತ್ಮಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.
  • ಫೇಸ್ ಮಾಸ್ಕ್ ಅನ್ನು ಅನ್ವಯಿಸಿ : ಬಣ್ಣಗಳು ಮುಖದ ಚರ್ಮವನ್ನು ಒರಟಾಗಿಸಬಹುದು. ಹೀಗಾಗಿ ನೈಸರ್ಗಿಕವಾಗಿರುವ ಫೇಸ್ ಮಾಸ್ಕ್ ಬಳಕೆ ಮಾಡಿದರೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಚರ್ಮವನ್ನು ಪೋಷಿಸಲು ಮತ್ತು ಹೈಡ್ರೇಟ್ ಆಗಿಸಲು ಜೇನುತುಪ್ಪ, ಮೊಸರು ಮತ್ತು ಅರಿಶಿನದಿಂದ ಮಾಡಿದ ಫೇಸ್ ಮಾಸ್ಕನ್ನು ಬಳಸಬಹುದು.
  • ನಿಮ್ಮ ಕೂದಲನ್ನು ಕವರ್ ಮಾಡಿ: ಹೋಳಿ ಹಬ್ಬದಂದು ಕೂದಲಿನ ಹಾನಿಯನ್ನು ತಡೆಗಟ್ಟಲು ಹಾಗೂ ಸ್ವಚ್ಛಗೊಳಿಸುವಿಕೆಯನ್ನು ಸುಲಭಗೊಳಿಸಲು ಬಣ್ಣಗಳಿಂದ ನಿಮ್ಮ ಕೂದಲನ್ನು ರಕ್ಷಿಸುವುದು ಅತ್ಯಗತ್ಯ. ನಿಮ್ಮ ಕೂದಲನ್ನು ಮತ್ತೆ ಬನ್ ಬಳಸಿ ಕಟ್ಟಿಕೊಳ್ಳಿ ಇಲ್ಲವಾದರೆ ಸ್ಕಾರ್ಫ್ ನಿಂದ ಮುಚ್ಚಿಕೊಳ್ಳಿ.
  • ಮೇಕಪ್ ನಿಂದ ದೂರವಿರಿ: ಹಬ್ಬದಂದು ಸಹಜವಾಗಿ ಎಲ್ಲರಿಗೂ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಇರುತ್ತದೆ. ಹೀಗಾಗಿ ಹೆಚ್ಚಿನವರು ಮೇಕಪ್ ಮಾಡಿಕೊಳ್ಳುತ್ತಾರೆ. ಹೋಳಿ ಆಡುವ ವೇಳೆ ಬಳಸುವ ಬಣ್ಣಗಳು ಮೇಕಪ್ ನೊಂದಿಗೆ ಸೇರಿ ಮುಖದ ಸೌಂದರ್ಯವು ಹಾಳಾಗಬಹುದು. ಮೊಡವೆಗಳು ಮೂಡುವ ಸಾಧ್ಯತೆಯು ಹೆಚ್ಚಿರುತ್ತದೆ. ಹೀಗಾಗಿ ಮೇಕಪ್ ನಿಂದ ದೂರವಿಡುವುದು ಉತ್ತಮ.
  • ಸುಲಭವಾಗಿ ತೊಳೆಯಬಹುದಾದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ : ಬಣ್ಣಗಳ ಎರಚಾಟದ ನಡುವೆ ದುಬಾರಿ ಬೆಲೆಯ ಬಟ್ಟೆಗಳು ಹಾಳಾಗಬಹುದು. ಹೀಗಾಗಿ ಆರಾಮದಾಯಕವಾಗಿರುವ ಸರಳ ಉಡುಗೆಯನ್ನು ಆಯ್ದುಕೊಳ್ಳುವುದು ಹಿತಕರ.

ಹೋಳಿಯಾಡಿದ ಬಳಿಕ ಈ ವಿಚಾರವು ನೆನಪಿನಲ್ಲಿರಲಿ

  • ಹೋಳಿ ಆಡಿದ ಬಳಿಕ ಸ್ಕಿನ್ ಕೇರ್ ಮಾಡಿ : ಹೋಳಿ ಹಬ್ಬದ ಬಣ್ಣಗಳ ಎರಚಾಟದ ಬಳಿಕ ನೀರು ಮತ್ತು ಫೇಸ್​ ವಾಶ್​ ಬಳಸಿ ಮುಖವನ್ನು ಸ್ವಚ್ಛ ಮಾಡುವುದನ್ನು ಮರೆಯಬೇಡಿ.
  • ಕೂದಲು ಸ್ವಚ್ಛಗೊಳಿಸುವತ್ತ ಗಮನ ಕೊಡಿ : ಹೋಳಿಯಾಟದ ಬಳಿಕ ಕೂದಲಿನ ಆರೈಕೆಯತ್ತ ಗಮನ ಕೊಡಬೇಕಾಗುತ್ತದೆ. ಕೂದಲಿಗೆ ಎಣ್ಣೆಯನ್ನು ಹಚ್ಚಿ 30 ನಿಮಿಷಗಳು ಬಿಟ್ಟು ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿ. ತಲೆಸ್ನಾನದ ವೇಳೆ ಶ್ಯಾಂಪೂ ಹಾಗೂ ನೈಸರ್ಗಿಕ ಕ್ಲೆನ್ಸರ್ ಬಳಸುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ