ಸಾಂದರ್ಭಿಕ ಚಿತ್ರ
ಶಿವನಿಗೆ ಪ್ರಿಯವಾದ ಬಿಲ್ವೆ ಪತ್ರೆ ಸರ್ವ ಶೇಷ್ಟ್ರ ಔಷಧೀಯ ಸಸ್ಯವಾಗಿದೆ. ಶಿವ ದೇವಾಲಯಗಳ ಸುತ್ತ ಹೆಚ್ಚಾಗಿ ಕಾಣ ಸಿಗುವ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ಬಾಯಿಯ ಮೇಲೆ ಬೆರಳಿಡುತ್ತೀರಾ. ಹೀಗಾಗಿ ನಮ್ಮ ಹಿರಿಯರು ಇದರ ಎಲೆಯಿಂದ ರೋಗಗಳನ್ನು ದೂರ ಮಾಡಿಕೊಳ್ಳುತ್ತಿದ್ದರು. ಆಯುರ್ವೇದದಲ್ಲಿ ಹೇರಳವಾಗಿ ಬಳಕೆ ಆಗುವ ಈ ಬಿಲ್ವ ಪತ್ರೆಯ ನಾನಾ ರೀತಿಯ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಬಿಲ್ವೆ ಪತ್ರೆಯ ಮನೆ ಮದ್ದುಗಳು :
- ಊಟದ ನಂತರ ಬಿಲ್ವದ ಹಣ್ಣಿಗೆ ಸ್ವಲ್ಪ ಸಕ್ಕರೆ ಮತ್ತು ಜೇನು ತುಪ್ಪ ಸೇರಿಸಿ ಸೇವಿಸಿದರೆ ಕಫದ ಸಮಸ್ಯೆಯು ದೂರವಾಗುತ್ತದೆ.
- ನೆಗಡಿಯಾಗಿದ್ದರೆ ಬಿಲ್ವಪತ್ರೆಯ ರಸವನ್ನು ನಿಯಮಿತವಾಗಿ ಸೇವಿಸುವುದು ಪರಿಣಾಮಕಾರಿಯಾದ ಔಷಧವಾಗಿದೆ.
- ಬಿಲ್ವೆ ಪತ್ರೆಯ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಕಾಯಿಲೆಯು ನಿಯಂತ್ರಣಕ್ಕೆ ಬರುತ್ತದೆ.
- ಎಲೆಯನ್ನು ಅರೆದು ಪೇಸ್ಟ್ ಮಾಡಿ ಕಣ್ಣಿನ ಮೇಲೆ ಹಚ್ಚಿ ಸ್ವಲ್ಪ ಹೊತ್ತು ಹಾಗೆ ಬಿಟ್ಟರೆ ಕಣ್ಣು ಉರಿ ಗುಣ ಮುಖವಾಗುತ್ತದೆ.
- ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಬೆಳಗ್ಗೆ ಒಂದು ಬಿಲ್ವದ ಎಲೆಯನ್ನು ಎರಡು ಮೂರು ಕಾಳುಮೆಣಸಿನೊಂದಿಗೆ ಬಾಯಿಗೆ ಹಾಕಿಕೊಂಡು ಚೆನ್ನಾಗಿ ಜಗಿದು ತಿನ್ನುವುದು ಒಳ್ಳೆಯದು.
- ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಿಕೊಂಡರೆ ತಲೆಹೊಟ್ಟಿನ ಸಮಸ್ಯೆಯು ಬಹುದೂರವಾಗುತ್ತದೆ.
- ನಿಯಮಿತವಾಗಿ ಬಿಲ್ವೆ ಪತ್ರೆಯ ಬೇರಿನ ಕಷಾಯ ಮಾಡಿ ಸೇವಿಸುವುದರಿಂದ ವಾತದ ಸಮಸ್ಯೆಯು ಕಡಿಮೆಯಾಗುತ್ತದೆ
- ಬಿಲ್ವದ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆ ನೋವು ಮತ್ತು ಭೇದಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ. ಹಾಗೂ ಜೀರ್ಣ ಕ್ರಿಯೆಯಂತಹ ಸಮಸ್ಯೆಗಳು ಶಮನವಾಗುತ್ತದೆ.
- ಹಣ್ಣುಗಳನ್ನು ತಿರುಳು ತೆಗೆದು ಒಣಗಿಸಿ ಕಾಲು ಚಮಚ ಪುಡಿಯನ್ನು ಹಾಲು ಅಥವಾ ನೀರಿನೊಂದಿಗೆ ಸೇರಿಸಿ ಕುಡಿದರೆ ಆರೋಗ್ಯವಂತರಾಗಬಹುದು.
- ಈ ಬಿಲ್ವೆ ಪತ್ರೆ ಮರದ ಅಂಟನ್ನು ಪಾನಕ ಮಾಡಿ ಕುಡಿಯುವುದರಿಂದ ಅತಿಸಾರ ಸಮಸ್ಯೆಯು ಕಡಿಮೆಯಾಗುತ್ತದೆ.
- ಕಾಲರ ಸಮಸ್ಯೆಯಿರುವವರು ಬಿಲ್ವೆ ಪತ್ರೆಯ ಅಂಟನ್ನು ಕೊತ್ತಂಬರಿ ಹಾಗೂ ಕಲ್ಲು ಸಕ್ಕರೆಯೊಂದಿಗೆ ಸೇರಿಸಿ ಕಷಾಯ ಮಾಡಿ ಸೇವಿಸುವುದು ಉತ್ತಮ ಮನೆ ಮದ್ದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ