ಒತ್ತಡದ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ಬಿಟ್ಟಿದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಮುಖದ ಆರೈಕೆಯ ಬಗ್ಗೆ ಕಾಳಜಿ ವಹಿಸುವಷ್ಟು, ಸಂಪೂರ್ಣದ ದೇಹದ ಆರೈಕೆಯ ಬಗ್ಗೆ ಗಮನ ಕೊಡುವುದಿಲ್ಲ. ಕಾಂತಿಯುತವಾದ ಮುಖವನ್ನು ಪಡೆಯಲು ಜನರು ಅನೇಕ ರೀತಿಯ ಫೇಸ್ ಪ್ಯಾಕ್ ಮತ್ತು ಸ್ಕ್ರಬ್ ಗಳನ್ನು ಬಳಸುತ್ತಾರೆ. ಸಂಪೂರ್ಣ ತ್ವಚೆಯ ಆರೈಕೆಯನ್ನು ಮಾಡುವಲ್ಲಿ ಗಮನ ನೀಡದೇ, ಬರೀ ಸೋಪ್ ಅಥವಾ ಬಾಡಿ ವಾಶ್ ನಿಂದ ದೇಹವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ನಿಮಗೆ ಗೊತ್ತಾ?, ತ್ವಚೆಯ ಆರೈಕೆಯಲ್ಲಿ ಬಾಡಿ ವಾಶ್ ಮಾತ್ರವಲ್ಲ, ಬಾಡಿ ಸ್ಕ್ರಬ್ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಸ್ಕ್ರಬ್ಬಿಂಗ್ ತ್ವಚೆಯ ಆರೈಕೆಯ ಒಂದು ಹಂತವಾಗಿದ್ದು, ಇದು ದೇಹವನ್ನು ಸ್ವಚ್ಛವಾಗಿರಿಸುವುದರೊಂದಿಗೆ, ಸತ್ತ ಜೀವಕೋಶಗಳನ್ನು ಹೊರಹಾಕುವ ಮೂಲಕ ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹಾಗಾಗಿ ವಾರದಲ್ಲಿ ಒಂದು ಅಥವಾ ಎರಡು ಬಾರಿ ತ್ವಚೆಯನ್ನು ಸ್ಕ್ರಬ್ ಮಾಡುವುದು ಅವಶ್ಯಕ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಾಡಿ ಸ್ಕ್ರಬ್ ಗಳು ನಿಮಗೆ ದುಬಾರಿ ಎನಿಸಿದರೆ, ನೀವು ಅದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.
ಆಯಾಸ ಮತ್ತು ಒತ್ತಡವನ್ನು ನಿವಾರಿಸುವಲ್ಲಿ ಕಾಫಿ ಪರಿಣಾಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ತ್ವರಿತ ಶಕ್ತಿಯನ್ನು ಪಡೆಯಲು ಜನರು ಕಾಫಿಯನ್ನು ಕುಡಿಯುತ್ತಾರೆ. ಮಾತ್ರವಲ್ಲದೆ ಕಾಫಿ ಚರ್ಮಕ್ಕೂ ತುಂಬಾ ಪ್ರಯೋಜಕಾರಿಯಾಗಿದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕಾಫಿ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ. ಅಲ್ಲದೆ ಇದು ಉರಿಯೂತ ವಿರೋಧಿ ಗುಣಲಕ್ಷಣವನ್ನು ಹೊಂದಿದ್ದು, ಇದು ತ್ವಚೆಯ ಸುಕ್ಕುಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಮನೆಯಲ್ಲಿ ಬಾಡಿ ಸ್ಕ್ರಬ್ ಮಾಡಲು ಬೇಕಾಗುವ ಸಾಮಾಗ್ರಿಗಳು:
ಈ ಎಲ್ಲಾ ವಸ್ತುಗಳನ್ನು ಒಂದು ಗಾಜಿನ ಬೌಲ್ ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಈ ಬಾಡಿ ಸ್ಕ್ರಬ್ ನಿಂದ ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸಿದರೆ ತ್ವಚೆಯು ಕಾಂತಿಯುತವಾಗಿ ಕಾಣಿಸಲು ಪ್ರಾರಂಭಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: