ಹೇರ್‌ ಫಾಲ್‌ ಸಮಸ್ಯೆಯಿಂದ ಮುಕ್ತಿ ಪಡೆಯಲು ತಲೆಸ್ನಾನಕ್ಕೂ ಮುನ್ನ ಕೂದಲಿಗೆ ಈ ಒಂದು ವಸ್ತುವನ್ನು ಹಚ್ಚಿ

ಬದಲಾಗುತ್ತಿರುವ ಜೀವನಶೈಲಿ, ಅನಾರೋಗ್ಯಕರ ಆಹಾರಪದ್ಧತಿ, ಧೂಳು, ಮಾಲಿನ್ಯ, ರಾಸಾಯನಿಕ ಉತ್ಪನ್ನಗಳ ಅತಿಯಾದ ಬಳಕೆ ಇವೆಲ್ಲವೂ ಕೂದಲನ್ನು ದುರ್ಬಲಗೊಳಿಸುತ್ತಿವೆ. ಈ ಕಾರಣದಿಂದ ಅನೇಕರು ಕುದಲು ಉದುರುವಿಕೆಯ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಪಡೆಯಲು ಹಲವರು ದುಬಾರಿ ಶಾಂಪೂ ಮತ್ತು ಚಿಕಿತ್ಸೆಗಳ ಮೊರೆ ಹೋಗ್ತಾರೆ. ಇದರ ಬದಲು ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಈ ಒಂದು ವಸ್ತುವನ್ನು ಸ್ನಾನಕ್ಕೂ ಮುನ್ನ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವಿಕೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಹೇರ್‌ ಫಾಲ್‌ ಸಮಸ್ಯೆಯಿಂದ ಮುಕ್ತಿ ಪಡೆಯಲು ತಲೆಸ್ನಾನಕ್ಕೂ ಮುನ್ನ ಕೂದಲಿಗೆ ಈ ಒಂದು ವಸ್ತುವನ್ನು ಹಚ್ಚಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: May 20, 2026 | 8:31 PM

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ (hair fall), ತಲೆಹೊಟ್ಟು, ದುರ್ಬಲ ಕೂದಲಿನ  ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿ, ಧೂಳು, ಮಾಲಿನ್ಯ, ಕೂದಲಿಗೆ ಅತಿಯಾದ ರಾಸಾಯನಿಕ ಉತ್ಪನ್ನಗಳ ಬಳಕೆ ಇವೆಲ್ಲವೂ ಕೂದಲು ಉದುರಲು ಪ್ರಮುಖಖ ಕಾರಣವಾಗಿದೆ. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಅನೇಕರು ದುಬಾರಿ ಶಾಂಪೂ, ಚಿಕಿತ್ಸೆಗಳ ಮೊರೆ ಹೋಗ್ತಾರೆ. ಇವುಗಳ ಬದಲು ಆರೋಗ್ಯಕ ಆಹಾರವನ್ನು ಸೇವನೆ ಮಾಡುವ ಮೂಲಕ ಹಾಗೂ ರಾಸಾಯನಿಕ ಉತ್ಪನ್ನಗಳ ಬದಲು ಸ್ನಾನಕ್ಕೂ ಮುನ್ನ ಕೂದಲಿಗೆ ಮೊಸರನ್ನು ಹಚ್ಚುವ ಮೂಲಕ ಕೂದಲು ಉದುರುವಿಕೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದು ಕೂದಲನ್ನು ಪೋಷಿಸುವುದು ಮಾತ್ರವಲ್ಲದೆ ಆರೋಗ್ಯಕರ ನೆತ್ತಿಯನ್ನು ಕಾಪಾಡಿಕೊಳ್ಳಲು, ಕೂದಲನ್ನು ಮೃದು ಮತ್ತು ಬಲವಾಗಿಸಲು ಸಹಾಯ ಮಾಡುತ್ತದೆ. ಕೂದಲಿಗೆ ಮೊಸರು ಹಚ್ಚುವುರಿಂದಾಗುವ ಪ್ರಯೋಜನಗಳು ಮತ್ತು ಅದನ್ನು ಬಳಸುವ ಸರಿಯಾದ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಕೂದಲಿಗೆ ಮೊಸರು ಹಚ್ಚುವುರಿಂದ ಏನಾಗುತ್ತದೆ?

ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 5 ಮತ್ತು ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳು ಇದ್ದು, ಇವು ನೆತ್ತಿ ಮತ್ತು ಕೂದಲಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ನೆತ್ತಿಯನ್ನು ತೇವಗೊಳಿಸಲು, ಶುಷ್ಕತೆ ಮತ್ತು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಸರು ಕೂದಲನ್ನು ನೈಸರ್ಗಿಕವಾಗಿ ಮೃದು ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಮೊಸರು ನೆತ್ತಿಯಿಂದ ಕೊಳಕು ಮತ್ತು ಹೆಚ್ಚುವರಿ ಎಣ್ಣೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಮೊಸರು ನೆತ್ತಿಯನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ, ಕೂದಲಿನ ಬೇರುಗಳು ಬಲವಾಗಿಸುತ್ತದೆ.  ಈ ಮನೆಮದ್ದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಸಾಯನಿಕ ಶಾಂಪೂಗಳ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಹಾರ್ಮೋನುಗಳ ಬದಲಾವಣೆಗಳು, ಒತ್ತಡ, ಪೌಷ್ಟಿಕಾಂಶದ ಕೊರತೆಗಳು ಮತ್ತು ವೈದ್ಯಕೀಯ ಕಾರಣಗಳಿಂದಲೂ ಕೂದಲು ಉದುರುತ್ತವೆ. ಆದ್ದರಿಂದ, ಕೂದಲು ಉದುರುವಿಕೆ ಅತಿಯಾಗಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಕೂದಲಿಗೆ ಮೊಸರು ಹಚ್ಚುವುದರಿಂದ ಏನು ಪ್ರಯೋಜನ?

ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ: ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ನೆತ್ತಿಯಿಂದ ಕೊಳಕು, ಬೆವರು ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ರಂಧ್ರಗಳನ್ನು ತೆರೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಸ್ವಚ್ಛವಾದ ನೆತ್ತಿಯು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

ಕೂದಲನ್ನು ಬಲಪಡಿಸುತ್ತದೆ ಮತ್ತು ದಪ್ಪವಾಗಿಸುತ್ತದೆ: ಮೊಸರಿನಲ್ಲಿರುವ ಪ್ರೋಟೀನ್‌ಗಳು ಮತ್ತು ವಿಟಮಿನ್‌ಗಳು ಕೂದಲಿನ ಬೇರುಗಳನ್ನು ಪೋಷಿಸುತ್ತವೆ. ಇದು ಕೂದಲು ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಇದರಲ್ಲಿರುವ ಬಯೋಟಿನ್, ಸತು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ, ಇದರಿಂದಾಗಿ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಪ್ರತಿದಿನ ದೇವಸ್ಥಾನಕ್ಕೆ ಹೋಗೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ

ತಲೆಹೊಟ್ಟು ಮತ್ತು ತುರಿಕೆಯನ್ನು ನಿವಾರಿಸುತ್ತದೆ: ನೀವು ದೀರ್ಘಕಾಲದವರೆಗೆ ತಲೆಹೊಟ್ಟು ಮತ್ತು ತುರಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸ್ನಾನಕ್ಕೂ ಮುನ್ನ ನೆತ್ತಿಗೆ ಕೆಲ ಹೊತ್ತು ಮೊಸರನ್ನು ಹಚ್ಚಿ. ಇದರ ಉರಿಯೂತ ನಿವಾರಕ ಗುಣಗಳು ನೆತ್ತಿಯ ಕಿರಿಕಿರಿಯನ್ನು ಶಮನಗೊಳಿಸಲು ಮತ್ತು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೈಸರ್ಗಿಕ ಕಂಡಿಷನರ್: ಕೂದಲಿಗೆ ಮೊಸರು ಹಚ್ಚುವುದರಿಂದ  ಮೃದು ಮತ್ತು  ಹೊಳೆಯುವ ಹೊಳೆಯುವ ಕೂದಲನ್ನು ನೀವು ಪಡೆಯಬಹುದು. ಇದರ ನಿಯಮಿತ ಬಳಕೆಯು ಕೂದಲಿನ ವಿನ್ಯಾಸವನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ.

ಕೂದಲಿಗೆ ಮೊಸರನ್ನು ಹಚ್ಚುವ ಸರಿಯಾದ ಮಾರ್ಗ ಯಾವುದು?

ಮೊದಲು, ಒಂದು ಬಟ್ಟಲಿನಲ್ಲಿ ತಾಜಾ ಮೊಸರನ್ನು ತೆಗೆದುಕೊಳ್ಳಿ. ನೀವು ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಅಥವಾ ಮೆಂತ್ಯ ಪುಡಿಯನ್ನು ಕೂಡ ಸೇರಿಸಬಹುದು. ಈ ಮಿಶ್ರಣವನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ ಸುಮಾರು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಅಗತ್ಯವಿದ್ದರೆ, ಸೌಮ್ಯವಾದ ಶಾಂಪೂ ಬಳಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us