AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ? ಇದರಲ್ಲಿ ಪೋಷಕರ ಪಾತ್ರವೇನು? ಇಲ್ಲಿದೆ ಸಲಹೆ

ಬೆಳೆಯುತ್ತಿರುವ ವಯಸ್ಸಿನಲ್ಲಿ ಮಕ್ಕಳು ಸರಿ ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಈ ವಯಸ್ಸಿನಲ್ಲಿ ತಪ್ಪು ಕೆಲಸಗಳು ಮಕ್ಕಳನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಹೀಗಿರುವಾಗ ನಿಮ್ಮ ಮಕ್ಕಳ ಕೆಲವು ನಡವಳಿಕೆಗಳು ಮತ್ತು ಮನಸ್ಥಿತಿಯ ಬದಲಾವಣೆಗಳನ್ನು ಗುರುತಿಸುವ ಮೂಲಕ ನಿಮ್ಮ ಮಗು ತಪ್ಪು ದಾರಿಯಲ್ಲಿ ಸಾಗುತ್ತಿದೆಯೇ ಎಂದು ಗಮನಿಸಿ, ಆ ನಡವಳಿಕೆಗಳನ್ನು ಬದಲಾಯಿಸುವ ಮೂಲಕ ಮಕ್ಕಳನ್ನು ಸರಿ ದಾರಿಗೆ ತರಬಹುದು.

ನಿಮ್ಮ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ? ಇದರಲ್ಲಿ ಪೋಷಕರ ಪಾತ್ರವೇನು? ಇಲ್ಲಿದೆ ಸಲಹೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 01, 2023 | 7:23 PM

Share

ಪ್ರತಿಯೊಬ್ಬ ಪೋಷಕರು ನಮ್ಮ ಮಗು ಒಬ್ಬ ಉತ್ತಮ ಮನುಷ್ಯನಾಗಿ ಬೆಳೆಯಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಸಣ್ಣ ವಯಸ್ಸಿನಿಂದಲೇ ಹಲವಾರು ಸದ್ಗುಣಗಳನ್ನು ಮಕ್ಕಳಿಗೆ ಕಲಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ತಂದೆ ತಾಯಿ ಹೇಳಿಕೊಟ್ಟ ಈ ಎಲ್ಲಾ ನೀತಿಗಳನ್ನು ಕಲಿಯುತ್ತಾರೆ. ಆದರೆ ಮಕ್ಕಳು ಬೆಳೆಯುತ್ತಾ ಹೋದಂತೆ, ಕಲಿಕೆಯ ಜೊತೆಜೊತೆಗೆ ಹೊರಗಿನ ಪ್ರಪಂಚಕ್ಕೂ ಅವರು ತೆರೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಸ್ನೇಹ ಸಂಬಂಧಗಳು ಬೆಳೆಯುವುದು ಸಹಜ ಮತ್ತು ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಿಗೆ ಕೆಲವು ಕೆಟ್ಟ ಅಭ್ಯಾಸಗಳೇ ಹೆಚ್ಚು ಆಕರ್ಷಣೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬೆಳೆಯುತ್ತಿರುವ ಮಕ್ಕಳು ಆಗಾಗ್ಗೆ ತಪ್ಪು ಸಹವಾಸಕ್ಕೆ ಬೀಳುತ್ತಾರೆ. ಅವರ ನಡವಳಿಕೆಗಳು ಬದಲಾವಣೆಯಾಗುತ್ತದೆ, ಕೆಲವೊಮ್ಮೆ ಮಕ್ಕಳು ಕೆಟ್ಟ ಪದಗಳನ್ನು ಕಲಿಯುತ್ತಾರೆ, ಧೂಮಪಾನದಂತಹ ಕೆಟ್ಟ ಅಭ್ಯಾಸಗಳನ್ನು ಶುರುಮಾಡಿಕೊಳ್ಳುತ್ತಾರೆ. ಇದು ಮಕ್ಕಳ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸಬಹುದು. ಆದ್ದರಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ತಿಳಿದ ತಕ್ಷಣ ಅವರನ್ನು ಸರಿದಾರಿಗೆ ತರುವುದು ಪೋಷಕರ ಕರ್ತವ್ಯವಾಗಿರುತ್ತದೆ. ಹಾಗಿದ್ದರೆ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ತಿಳಿಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಕೆಟ್ಟ ಪದಗಳ ಬಳಕೆ:

ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರದಿಂದ ಬೇಗನೆ ಪ್ರಭಾವಿತರಾಗುತ್ತಾರೆ. ಕೆಲವೊಮ್ಮೆ ಕೆಲವು ವಿಷಯಗಳನ್ನು ನೊಡುವುದರ ಮೂಲಕ ಕಲಿಯುತ್ತಾರೆ. ಯಾರಾದರೂ ಕೆಟ್ಟ ಪದಗಳನ್ನು ಬಳಸಿ ನಿಂದಿಸುವುದನ್ನು ಮಕ್ಕಳು ಕೇಳಿದ್ದರೆ, ಅವರು ಕೂಡಾ ಅ ಅಭ್ಯಾಸವನ್ನು ಕಲಿಯುತ್ತಾರೆ. ಆಗಾ ಅವರು ಕೂಡ ಆ ಕೆಟ್ಟ ಪದಗಳನ್ನು ಬಳಸಿ ಒಡಹುಟ್ಟಿದವರಿಗೆ ಅಥವಾ ಸ್ನೇಹಿತರಿಗೆ ಬೈಯಲು ಪ್ರಾರಂಭಿಸುತ್ತಾರೆ. ಹಾಗಾಗಿ ನಿಮ್ಮ ಮಗುವಿನ ಪದ ಬಳಕೆಯ ಬಗ್ಗೆ ನೀವು ಗಮನ ಕೊಡಬೇಕು. ಮಗು ಕೆಟ್ಟ ಪದಗಳ ಬಳಕೆ ಮಾಡಿದರೆ, ತಕ್ಷಣವೇ ಅಭ್ಯಾಸವನ್ನು ಬದಲಿಸುವಂತೆ ಬುದ್ಧಿ ಮಾತು ಹೇಳಿ. ಮತ್ತು ಮಗು ಅಂತಹ ಪದಗಳನ್ನು ಎಲ್ಲಿಂದ ಕಲಿತಿದೆ ಎಂದು ನೋಡಿ ಅಂತಹ ಕೆಟ್ಟ ಸಹವಾಸದಿಂದ ಅವರನ್ನು ಹೊರತರಲು ಪ್ರಯತ್ನಿಸಿ.

ಹೆಚ್ಚಾಗಿ ಮಗು ಇತರರಿಗೆ ಕೀಟಲೆ ಮಾಡುತ್ತಿದ್ದರೆ:

ಮಕ್ಕಳು ಕೀಟಲೆ ಮಾಡುವುದು ಸಹಜ, ಆದರೆ ಅದು ಮಿತಿಮೀರಿ ವಿಪರೀತವಾಗಿ ಕೀಟಲೆ ಮಾಡುವಂತಹದ್ದು, ಇತರ ಮಕ್ಕಳನ್ನು ಬೆದರಿಸುವಂತಹದ್ದು ಮಾಡಿದರೆ, ತೊಂದರೆ ಕೊಡುವುದನ್ನು ಆ ಮಗು ತನ್ನ ಖುಷಿ ಎಂದು ಭಾವಿಸಿದರೆ, ನಿಮ್ಮ ಮಗುವಿನ ನಡವಳಿಕೆ ಸರಿಯಿಲ್ಲ ಎಂದರ್ಥ. ಈ ರೀತಿಯ ಅಭ್ಯಾಸ ನಿಮ್ಮ ಮಕ್ಕಳಿಗಿದ್ದರೆ ತಕ್ಷಣ ಅವರಿಗೆ ಬುದ್ಧಿಮಾತು ಹೇಳುವ ಮೂಲಕ ಮಗುವನ್ನು ಸರಿ ದಾರಿಗೆ ತನ್ನಿ.

ಇದನ್ನೂ ಓದಿ:  ನಿಮ್ಮ ಮಕ್ಕಳಲ್ಲಿ ಈ 5 ಪೋಷಣಾ ತತ್ವಗಳನ್ನು ಬೆಳೆಸಿ 

ಆಗಾಗ್ಗೆ ಜಗಳ ಮಾಡುವ ಅಭ್ಯಾಸ:

ಕುಟುಂಬದಲ್ಲಿ ಮಕ್ಕಳ ನಡುವೆ ಜಗಳ ನಡೆಯುವುದು ಸಾಮಾನ್ಯ. ಆದರೆ ಮಗು ತನ್ನ ಒಡಹುಟ್ಟಿದವರ ಜೊತೆ ಆಗಾಗ್ಗೆ ಜಗಳ ಮಾಡುತ್ತಿದ್ದರೆ, ಅಥವಾ ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರೆ, ಇದೇ ರೀತಿ ನೆರೆಹೊರೆಯ ಮಕ್ಕಳೊಂದಿಗೆ ಹಾಗೂ ಶಾಲೆಯಲ್ಲಿಯೂ ಇತರ ಮಕ್ಕಳೊಂದಿಗೆ ಜಗಳವಾಡುವುದನ್ನು ಕಲಿಯುತ್ತದೆ. ಮತ್ತು ಇದೇ ಅಭ್ಯಾಸವನ್ನು ರೂಢಿಸಿಕೊಳ್ಳುತ್ತದೆ. ಇದು ಕೂಡ ಮಗು ತಪ್ಪು ದಾರಿಯನ್ನು ಹಿಡಿಯುವ ಅಭ್ಯಾಸವಾಗುತ್ತದೆ. ಈ ಗುಣವನ್ನು ಸಾಧ್ಯವಾದಷ್ಟು ಸರಿಪಡಿಸಲು ಪ್ರಯತ್ನಿಸಿ.

ಕದಿಯುವ ಗುಣ:

ನಿಮ್ಮ ಮಗು ಶಾಲೆಯಿಂದ ಏನನ್ನಾದರೂ ಮನೆಗೆ ತಂದರೆ ಅಥವಾ ಮನೆಯಿಂದ ವಸ್ತುಗಳು ಮತ್ತು ಹಣ ಕಣ್ಮರೆಯಾಗಲು ಪ್ರಾರಂಭಿಸಿದರೆ, ಮಗುವು ತಪ್ಪು ದಾರಿಯಲ್ಲಿ ಹೋಗುತ್ತಿದೆ ಎಂದರ್ಥ. ಅವನು ಕಳ್ಳತನವನ್ನು ಕಲಿಯುತ್ತಿದ್ದಾನೆ, ಇದು ಹೀಗೆ ಮುಂದುವರೆದರೆ ಕಳ್ಳತನವು ಒಂದು ಚಾಳಿಯಾಗಿ ಬದಲಾಗಬಹುದು. ಅದಕ್ಕಾಗಿ ಮಕ್ಕಳ ನಡವಳಿಕೆಯ ಮೇಲೆ ಗಮನಕೊಡಿ.

ಹೊಸ ಸ್ನೇಹಿತರ ಸಹವಾಸ

ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಒಳ್ಳೆಯದು. ಆದರೆ ಮಕ್ಕಳು ತಮ್ಮ ಹಿಂದಿನ ಸ್ನೇಹಿತರ ಗುಂಪನ್ನು ತೊರೆದು ಸಂಪೂರ್ಣವಾಗಿ ಹೊಸ ಜನರೊಂದಿಗೆ ಬೆರೆಯಲು ಪ್ರಾರಂಭಿಸಿದಾಗ ಇದರ ಬಗ್ಗೆ ಪೋಷಕರು ಸ್ವಲ್ಪ ಗಮನಹರಿಸಬೇಕಾಗುತ್ತದೆ. ಹಳೆಯ ಸ್ನೇಹಿತರನ್ನು ತೊರೆದು ಹೊಸ ಸ್ನೇಹಿತರ ಸ್ನೇಹ ಮಾಡಿಕೊಳ್ಳಲು ಕಾರಣ ಏನೆಂಬುದನ್ನು ಪೋಷಕರು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ಮಕ್ಕಳು ತಪ್ಪು ಸಹವಾಸಕ್ಕೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕಾಗಿಯೇ ಮಗುವಿನ ಕಾರ್ಯಗಳಿಗೆ ಗಮನ ನೀಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!