
ಪ್ರತಿಯೊಬ್ಬರೂ ಅಡುಗೆ ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಪಾತ್ರೆ ತೊಳೆಯುವುದರಿಂದ ಹಿಡಿದು ಗ್ಯಾಸ್ ಸ್ಟೌವ್ ಕ್ಲೀನ್ ಮಾಡುವುದರವರೆಗೆ ಪ್ರತಿಯೊಂದರ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದ್ರೆ ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್‌ಗಳ (sponges) ಬಗ್ಗೆ ಯಾರೂ ಸಹ ಗಮನಹರಿಸುವುದಿಲ್ಲ. ಒಂದೇ ಸ್ಪಾಂಜ್ ಅನ್ನು ತಿಂಗಳಾನುಗಟ್ಟಲೆ ಬಳಸುತ್ತಿರುತ್ತಾರೆ. ಈ ಒಂದು ಸಣ್ಣ ತಪ್ಪು ಸಹ ಕಾಯಿಲೆ ಹರಡಲು ಕಾರಣವಾಗಬಹುದು. ಹಾಗಿದ್ರೆ ಪಾತ್ರೆ ತೊಳೆಯಲು ಹೆಚ್ಚು ಸಮಯ ಒಂದೇ ಸ್ಪಾಂಜ್ ಅನ್ನು ಬಳಸುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ, ಸ್ಪಾಂಜ್, ಸ್ಕ್ರಬ್ಬರ್‌ಗಳನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು ಎಂಬುದನ್ನು ತಿಳಿಯಿರಿ.
ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್ ಚಿಕ್ಕದಾಗಿ ಕಾಣಬಹುದು ಆದರೆ ಅದು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಬಹುದು. ಹೌದು ಪಾತ್ರೆ ತೊಳೆಯುವ ಸ್ಪಂಜುಗಳು ಅಥವಾ ಸ್ಕ್ರಬ್ ಬ್ರಷ್‌ಗಳು ಹೆಚ್ಚಿನ ಸಮಯ ಒದ್ದೆಯಾಗಿರುತ್ತವೆ. ಅವುಗಳನ್ನು ದಿನಕ್ಕೆ 3 ರಿಂದ ನಾಲ್ಕು ಬಾರಿ ಬಳಸುವುದರಿಂದ, ಅವು ಒಣಗಲು ಅವಕಾಶ ಸಿಗುವುದಿಲ್ಲ, ಅಲ್ಲದೆ ಸ್ಪಂಜಿನ ಸಣ್ಣ ರಂಧ್ರಗಳಲ್ಲಿ ಆಹಾರದ ಕಣಗಳು ಹಿಡಿದಿಟ್ಟುಕೊಳ್ಳುತ್ತವೆ. ಇದು ತೇವಾಂಶ ಮತ್ತು ಕೊಳಕು ಬ್ಯಾಕ್ಟೀರಿಯಾಗಳು ಬೆಳೆಯಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ. ನಂತರದಲ್ಲಿ ಅಪಾಯಕಾರಿ ಸೂಕ್ಷ್ಮಜೀವಿಗಳು ಬೆಳೆದು ರೋಗಗಳನ್ನು ಹರಡುತ್ತವೆ. ಕೊಳಕು ಸ್ಪಾಂಜ್‌ಗಳಲ್ಲಿ ಟಾಯ್ಲೆಟ್ ಸೀಟ್ ಗಿಂತ ಹೆಚ್ಚು ಬ್ಯಾಕ್ಟೀರಿಯಾಗಳು ಇರುತ್ತವಂತೆ. ಅದಕ್ಕಾಗಿ ಆಗಾಗ್ಗೆ ಸ್ಪಾಂಜ್‌ಗಳನ್ನು ಬದಲಾಯಿಸುತ್ತಿರಬೇಕು.
ಸ್ಪಾಂಜ್‌ಗಳಲ್ಲಿರುವ ಬ್ಯಾಕ್ಟೀರಿಯಾಗಳು ಪಾತ್ರೆಗಳಿಗೆ ವರ್ಗಾಯಿಸಲ್ಪಟ್ಟು, ಇದು ಅತಿಸಾರ ಮತ್ತು ವಾಂತಿ, ತೀವ್ರ ಹೊಟ್ಟೆ ನೋವು ಮತ್ತು ಕರುಳಿನ ಸೋಂಕುಗಳಿಗೆ ಕಾರಣವಾಗಬಹುದು. ಇನ್ನೂ ಈ ಬ್ಯಾಕ್ಟೀರಿಯಾಗಳು ಕೈಗಳ ಮೂಲಕ ದೇಹವನ್ನು ಪ್ರವೇಶಿಸಬಹುದು, ಇದು ಇಡೀ ಕುಟುಂಬಕ್ಕೆ ಅನಾರೋಗ್ಯವನ್ನುಂಟುಮಾಡುತ್ತದೆ. ಅಲ್ಲದೆ ಒಂದೇ ಸ್ಪಾಂಜ್ ಅನ್ನು ದೀರ್ಘಕಾಲದವರೆಗೆ ಬದಲಾಯಿಸದಿದ್ದರೆ, ಅದು ಶಿಲೀಂಧ್ರವನ್ನು ಬೆಳೆಸಿಕೊಳ್ಳಬಹುದು ಮತ್ತು ಇದು ವಿಚಿತ್ರ ಮತ್ತು ಕೆಟ್ಟ ವಾಸನೆಯನ್ನು ಉಂಟು ಮಾಡುತ್ತದೆ.
ಇದನ್ನೂ ಓದಿ: ಕೊಳೆಗಟ್ಟಿದ ಗ್ಯಾಸ್ ಸ್ಟೌವ್ ಬರ್ನರ್ ಕ್ಲೀನ್ ಮಾಡಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ತಜ್ಞರು ಹೇಳುವಂತೆ ಪಾತ್ರೆ ತೊಳೆಯುವ ಸ್ಪಾಂಜ್ ಅನ್ನು ಪ್ರತಿ 7 ರಿಂದ 10 ದಿನಗಳಿಗೊಮ್ಮೆ ಬದಲಾಯಿಸಬೇಕು. ನೀವು ಪ್ರತಿದಿನ ಬಹಳಷ್ಟು ಪಾತ್ರೆಗಳನ್ನು ತೊಳೆಯುತ್ತಿದ್ದರೆ, ಪ್ರತಿ 7 ದಿನಗಳಿಗೊಮ್ಮೆ ಅದನ್ನು ಬದಲಾಯಿಸಬೇಕು. ನೀವು ಅದನ್ನು ವಿರಳವಾಗಿ ಬಳಸಿದರೂ ಸಹ, ಅದನ್ನು 2 ವಾರಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳಬೇಡಿ. ಹಳೆಯ ಸ್ಪಾಂಜ್ ಸ್ವಚ್ಛವಾಗಿ ಕಂಡರೂ ಸಹ, ಅದು ಬ್ಯಾಕ್ಟೀರಿಯಾಗಳ ಆಶ್ರಯತಾಣವಾಗಿರಬಹುದು. ಆದ್ದರಿಂದ 7 ರಿಂದ 10 ದಿನಗಳಿಗೊಮ್ಮೆ ಪಾತ್ರೆ ತೊಳೆಯುವ ಸ್ಪಾಂಜ್ ಬದಲಾಯಿಸಿ. ಸ್ಟೀಲ್ ಅಥವಾ ಸಿಲಿಕೋನ್ ಸ್ಕ್ರಬ್ಬರ್‌ಗಳು 1-2 ತಿಂಗಳುಗಳವರೆಗೆ ಬಾಳಿಕೆ ಬರಬಹುದು. ಸ್ಕ್ರಬ್ಬರ್ ವಾಸನೆ, ಬಿರುಕುಗಳು ಅಥವಾ ಬಣ್ಣ ಬದಲಾದರೆ, ಅದನ್ನು ತಕ್ಷಣ ಬದಲಾಯಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ