ಯಾರೂ ಪರಿಪೂರ್ಣರಲ್ಲ, ಪ್ರತಿಯೊಬ್ಬರಲ್ಲೂ ಒಳ್ಳೆಯತನ ಕೆಟ್ಟತನ ಎರಡೂ ಅಡಕವಾಗಿರುತ್ತದೆ. ಕೆಲವೊಮ್ಮೆ ಅವರು ಹೀಗೆ ಎಂದು ಜಡ್ಜ್ ಮಾಡುವುದು ಅಥವಾ ಕಾಮೆಂಟ್ ಮಾಡುವುದು ನಿಮಗೆ ಸಂತಸ ತಂದರೂ ಅದರಿಂದ ಬೇರೆಯವರ ಮನಸ್ಸಿಗೆ ನೋವಾಗುತ್ತದೆ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು.
ಬೇರೆಯವರ ಬಗ್ಗೆ ಸಾಧ್ಯವಾದಷ್ಟು ಸಹಾನುಭೂತಿ, ಒಳ್ಳೆಯ ಭಾವನೆ ಬೆಳೆಸಿಕೊಳ್ಳಿ, ನಿಮ್ಮ ಒಳ್ಳೆಯತನ ಕೆಲವೊಮ್ಮೆ ಕೆಟ್ಟವರನ್ನೂ ಬದಲಾಯಿಸಿಬಿಡುತ್ತದೆ.
ಬೇರೆಯವರ ಬಗ್ಗೆ ಸುಖಾಸುಮ್ಮನೆ ಕಾಮೆಂಟ್ ಮಾಡೋದು, ಅವರ ಬಗ್ಗೆ ಒಂದು ಅಭಿಪ್ರಾಯ ನಾವೇ ಹುಟ್ಟುಹಾಕುವುದು, ನಮ್ಮ ವ್ಯಕ್ತಿತ್ವದ ಕೆಟ್ಟ ಅಂಶಗಳಲ್ಲಿ ಒಂದಾಗಿದೆ.
ಎಂದೂ ಬೇರೆಯವರ ಆಚಾರ-ವಿಚಾರವಾಗಿರಲಿ, ಉಡುಗೆ-ತೊಡುಗೆಯಾಗಿರಲಿ, ಹಾವ-ಭಾವವಾಗಿರಲಿ ಯಾವುದರ ಬಗ್ಗೆಯೂ ಕಾಮೆಂಟ್ ಮಾಡಬಾರದು.
ಎಲ್ಲರೂ ಅವರವರ ಅಭಿರುಚಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಕೆಲವೊಮ್ಮೆ ನಮ್ಮಲ್ಲಿರುವ ಕೊರತೆಯನ್ನು ಮುಚ್ಚಿಡಲು ಬೇರೆಯವರನ್ನು ಬೇರೆಯವರನ್ನು ಜಡ್ಜ್ ಮಾಡುತ್ತೇವೆ.
ಪ್ರತಿಯೊಬ್ಬರೂ ವಿಭಿನ್ನವಾಗಿರುತ್ತಾರೆ
ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸಲು ಸಾಧ್ಯವಿಲ್ಲ, ಪ್ರತಿಯೊಬ್ಬರೂ ತಮ್ಮದೇ ಆದ ಭಾವನೆ, ತಮ್ಮದೇ ದೃಷ್ಟಿಕೋನವನ್ನು ಹೊಂದಿರುತ್ತಾರೆ, ಅದನ್ನು ಗೌರವಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ಅನನ್ಯ ಮತ್ತು ವಿಭಿನ್ನ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಅವರನ್ನು ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು.
ಭಿನ್ನವಾಗಿರುವ ಜನರೊಂದಿಗೆ ಬೆರೆಯಿರಿ
ನಿಮಗಿಂತ ಭಿನ್ನವಾದ ಜನರು ಸುತ್ತಲೂ ನೀವು ಹಾಕಿಕೊಂಡಿರುವ ನಿಮ್ಮ ಕಂಫರ್ಟ್ ವಲಯದಿಂದ ಹೊರಗೆ ಬಂದು ಬೇರೆಯವರ ಜತೆ ಬೆರೆಯಿರಿ, ಇದು ನಿಮ್ಮನ್ನು ಹೆಚ್ಚು ಮಂದಿ ಒಪ್ಪಿಕೊಳ್ಳುವಂತೆ ಮಾಡುತ್ತದೆ.
ಯಾರ ಮುಂದೆಯೂ ನಿಮ್ಮ ಉದಾಹರಣೆ ಕೊಡಬೇಡಿ
ಯಾವುದೇ ವಿಚಾರಕ್ಕೂ ಯಾರ ಮುಂದೆಯೂ ನಿಮ್ಮದೇ ಉದಾಹರಣೆ ಕೊಡಬೇಡಿ, ನಿಮಗಿಂತಲೂ ಉತ್ತಮ ಮನಸುಳ್ಳವರು ಇರುತ್ತಾರೆ ಎಂದು ಅರ್ಥ ಮಾಡಿಕೊಳ್ಳಿ.
ನಿಮಗೆ ಹೋಲಿಕೆ ಮಾಡಿಕೊಳ್ಳಿ
ಒಂದೊಮ್ಮೆ ಬೇರೆಯವರನ್ನು ಅವರು ಹೀಗೆಂದು ಜಡ್ಜ್ ಮಾಡುವಾಗ ಆ ಸ್ಥಾನದಲ್ಲಿ ನಾನಿದ್ದರೆ ನನಗೇನಾಗುತ್ತಿತ್ತು, ಬೇರೆಯವರು ನನ್ನ ಬಗ್ಗೆ ಏನು ಯೋಚನೆ ಮಾಡುತ್ತಿದ್ದರು ಎಂಬುದರ ಬಗ್ಗೆ ಒಮ್ಮೆ ಯೋಚಿಸಿ.
ವ್ಯಕ್ತಿಯ ಭಾವನೆಗಳನ್ನು ಗೌರವಿಸಿ
ಯಾವುದೇ ವಿಚಾರ ಕುರಿತು ನೀವು ಪ್ರತಿಕ್ರಿಯಿಸುವ ಮೊದಲು, ನೀವು ಯಾರ ಜತೆ ಮಾತನಾಡುತ್ತಿದ್ದೀರೋ ಅವರನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ, ಆಗ ಮಾತ್ರ ಲೆಸ್ ಜಡ್ಜ್ ಮಾಡಲು ಸಾಧ್ಯವಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ