Switch Board Cleaning Tips : ಕಪ್ಪಾಗಿರುವ ಸ್ವಿಚ್ ಬೋರ್ಡ್ ಬಿಳಿಯಾಗಿಸಲು ಈ ವಸ್ತುಗಳಿದ್ದರೆ ಸಾಕು, ಒಮ್ಮೆ ಟ್ರೈ ಮಾಡಿ
ಗೃಹಿಣಿಯರು ಎಂದ ಮೇಲೆ ಮನೆ ಸ್ವಚ್ಛತೆ ಹಾಗೂ ಅಡುಗೆ ಕೆಲಸವೆಂದು ಸದಾ ಬ್ಯುಸಿಯಾಗಿರುತ್ತಾರೆ. ಆದರೆ ಹೊರಗಡೆ ದುಡಿಯುವ ಮಹಿಳೆಯರು ಆಗಲ್ಲ. ಮನೆ ಹಾಗೂ ಉದ್ಯೋಗ ಎರಡನ್ನು ನಿಭಾಯಿಸಿಕೊಂಡು ಹೋಗಬೇಕು. ಹೀಗಾಗಿ ವೀಕೆಂಡ್ ನಲ್ಲಿ ಮನೆಯ ಸ್ವಚ್ಛತೆಯ ಕಡೆಗೆ ಗಮನ ಕೊಡುತ್ತಾರೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ವೇಳೆ ಸ್ವಿಚ್ ಬೋರ್ಡ್ ಗಳನ್ನು ಮರೆತು ಬಿಡುವುದೇ ಹೆಚ್ಚು. ಈ ಕೆಲವು ವಸ್ತುಗಳಿದ್ದರೆ ನಿಮ್ಮ ಮನೆಯ ಸ್ವಿಚ್ ಬೋರ್ಡನ್ನು ಫಳಫಳನೇ ಹೊಳೆಯುವಂತೆ ಮಾಡಬಹುದು.
Switch Board
Follow us on
ವಾರಾಂತ್ಯ ಬಂದು ಬಿಟ್ಟರೆ ಮನೆಯನ್ನು ಸ್ವಚ್ಛಗೊಳಿಸುವುದರಲ್ಲೇ ಉದ್ಯೋಗದಲ್ಲಿರುವ ಮಹಿಳೆಯರ ರಜಾದಿನ ಕಳೆದುಬಿಡುತ್ತದೆ. ಎಲ್ಲವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಹಿಳೆಯರು, ಸ್ವಿಚ್ ಬೋರ್ಡ್ ಕ್ಲೀನ್ ಮಾಡುವುದೇ ಇಲ್ಲ. ಇದರಿಂದಾಗಿ ಬೆಳ್ಳಗೆ ಇರುವ ಸ್ವಿಚ್ ಬೋರ್ಡ್ ಗಳು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಐದೇ ಐದು ನಿಮಿಷದಲ್ಲಿ ಸ್ವಿಚ್ ಬೋರ್ಡ್ ಬಿಳಿ ಬಣ್ಣಕ್ಕೆ ತಿರುಗುವಂತೆ ಮಾಡಬಹುದು.
ಮೊದಲಿಗೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸ್ವಿಚ್ ಬೋರ್ಡ್ ಸ್ವಚ್ಛತೆಗೊಳಿಸಲು ರೆಡಿಯಾಗಿ.
ಒಂದು ಕಪ್ ನೀರಿಗೆ ಎರಡು ಚಮಚ ವಿನೆಗರ್, ಚಮಚ ನಿಂಬೆ ರಸವನ್ನು ಸೇರಿಸಿ ಈ ಮಿಶ್ರಣಕ್ಕೆ ಹಳೆಯ ಬ್ರಷ್ ಅದ್ದಿ ಸ್ವಿಚ್ ಬೋರ್ಡ್ ಮೇಲೆ ಉಜ್ಜಿದರೆ ಕಪ್ಪು ಕಲೆಗಳು ಹೋಗಿ ಸ್ವಚ್ಛವಾಗುತ್ತದೆ.
ಸ್ವಿಚ್‌ಬೋರ್ಡ್‌ಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾವನ್ನು ಸಹ ಬಳಸಬಹುದು.
ಸ್ವಿಚ್ ಬೋರ್ಡ್ ಕಪ್ಪು ಬಣ್ಣಕ್ಕೆ ತಿರುಗಿದರೆ ನೇಲ್ ಪೇಂಟ್ ರಿಮೂವರ್ ಬಳಸಿದರೆ ಕಲೆಗಳು ಇಲ್ಲವಾಗುತ್ತದೆ.
ಆಲ್ಕೋಹಾಲ್ ನಿಂದಲೂ ಸ್ವಿಚ್‌ಬೋರ್ಡ್‌ಗಳಲ್ಲಿರುವ ಕೊಳೆಯನ್ನು ತೆಗೆದು ಹಾಕಬಹುದು.
ಸ್ವಲ್ಪ ಪ್ರಮಾಣದಲ್ಲಿ ಟೂತ್ ಪೇಸ್ಟ್ ತೆಗೆದುಕೊಂಡು, ಅದಕ್ಕೆ ಒಂದು ಚಮಚ ಅಡುಗೆ ಸೋಡಾ ಹಾಗೂ ಅರ್ಧ ಚಮಚ ನಿಂಬೆರಸ ಸೇರಿಸಿ ಈ ಮಿಶ್ರಣವನ್ನು ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸಲು ಬಳಸಬಹುದು.
ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸಿದ 30 ರಿಂದ 40 ನಿಮಿಷಗಳ ಕಾಲ ಬೋರ್ಡ್ ಅನ್ನು ಆನ್ ಮಾಡಬೇಡಿ. ಪೂರ್ಣ ಪ್ರಮಾಣದಲ್ಲಿ ಒಣಗಿದ ನಂತರ ಸ್ವಿಚ್ ಆನ್ ಮಾಡಿ.