ಮನೆ ಮೇಲಿರುವ ನೀರಿನ ಟ್ಯಾಂಕ್ ಸ್ಪಚ್ಛಗೊಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಪ್ರತಿಯೊಬ್ಬರ ಮನೆಯಲ್ಲಿಯೂ ನೀರಿನ ಟ್ಯಾಂಕ್ ಇದ್ದೆ ಇರುತ್ತದೆ. ಆದರೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು ಒಂದು ದೊಡ್ಡ ಕೆಲಸ. ನಾಳೆ ಮಾಡಿದರಾಯಿತು ಎಂದು ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಸಮಸ್ಯೆ ಬರುತ್ತದೆ. ಹೌದು, ಟ್ಯಾಂಕ್ ಸ್ವಚ್ಛವಾಗಿಲ್ಲದೇ ಹೋದರೆ ಆ ನೀರಿನಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಬೆಳೆಯುತ್ತವೆ. ಆ ನೀರನ್ನು ಅಡುಗೆ, ಕುಡಿಯಲು ಸೇರಿದಂತೆ ಇನ್ನಿತರ ಕೆಲಸಗಳಿಗೆ ಬಳಸುವುದರಿಂದ ರೋಗಗಳು ಉಂಟಾಗುತ್ತವೆ. ಹೀಗಾಗಿ ನೀರಿನ ಟ್ಯಾಂಕನ್ನು ಕನಿಷ್ಠ ಒಂದು ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕಾಗುತ್ತದೆ. ಈ ಕುರಿತಾದ ಕೆಲವು ಟಿಪ್ಸ್ ಇಲ್ಲಿದೆ.

ಮನೆ ಮೇಲಿರುವ ನೀರಿನ ಟ್ಯಾಂಕ್ ಸ್ಪಚ್ಛಗೊಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Edited By:

Updated on: Feb 21, 2025 | 5:12 PM

ಬಹುತೇಕರ ಮನೆಯ ಮೇಲೆ ನೀರಿನ ಟ್ಯಾಂಕ್ ಇರುತ್ತದೆ. ಮನೆಯ ವಿನ್ಯಾಸವನ್ನು ಅವಲಂಬಿಸಿ ಎರಡು ಅಥವಾ ಮೂರು ಟ್ಯಾಂಕ್ ಗಳನ್ನು ಅಳವಡಿಸಲಾಗುತ್ತದೆ. ದಿನನಿತ್ಯದ ಕೆಲಸಗಳಿಂದ ಹಿಡಿದು ಅಡುಗೆ ಹಾಗೂ ಕುಡಿಯಲು ಈ ನೀರನ್ನೇ ಬಳಸುತ್ತಾರೆ. ಹೀಗಾಗಿ ನೀರಿನ ಟ್ಯಾಂಕನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ನೀರಿನ ಟ್ಯಾಂಕ್ ಒಳಗೆ ಸ್ವಚ್ಛಗೊಳಿಸಲು ತುಂಬಾನೇ ಸಮಯ ತಗಲುತ್ತದೆ, ಆದರೆ ಈ ಕೆಲವು ಸಲಹೆಗಳನ್ನು ಪಾಲಿಸಿದ್ರೆ ಸುಲಭವಾಗಿ ಟ್ಯಾಂಕ್ ಸ್ವಚ್ಛಗೊಳಿಸಬಹುದು.

  • ವಿನೆಗರ್ ಮತ್ತು ಅಡುಗೆ ಸೋಡಾ ಬಳಸಿ : ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸುತ್ತೀರಿ ಎಂದಾದರೆ ವಿನೆಗರ್ ಮತ್ತು ಅಡುಗೆ ಸೋಡಾ ಬಳಸಬಹುದು. ಎರಡು ಕಪ್ ಬಿಳಿ ವಿನೆಗರ್ ಮತ್ತು ಅರ್ಧ ಕಪ್ ಅಡುಗೆ ಸೋಡಾವನ್ನು ಮಿಶ್ರಣ ಮಾಡಿ. ಅದನ್ನು ಬ್ರಷ್ ಅಥವಾ ಸ್ಕ್ರಬ್‌ನಿಂದ ಟ್ಯಾಂಕ್ ಗೋಡೆಗಳಿಗೆ ಚೆನ್ನಾಗಿ ಉಜ್ಜಿಕೊಂಡು ಆ ಬಳಿಕ ಶುದ್ಧ ನೀರಿನಿಂದ ತೊಳೆದರೆ ಫಳಫಳನೆ ಹೊಳೆಯುತ್ತದೆ.
  • ಸುಣ್ಣ ಬಳಸಿ ಸ್ವಚ್ಛಗೊಳಿಸಿ : ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಬಿಳಿ ಸುಣ್ಣ ಬಳಸಬಹುದು. ಮೊದಲಿಗೆ ಸ್ವಲ್ಪ ನೀರಿಗೆ ಸುಣ್ಣವನ್ನು ಬೆರೆಸಿ ನೀರಿನ ಟ್ಯಾಂಕಿನ ಗೋಡೆಗಳಿಗೆ ಹಚ್ಚಿ ಎರಡರಿಂದ ಮೂರು ಗಂಟೆಗಳ ಕಾಲ ಹಾಗೆ ಬಿಡಿ. ಈ ಸುಣ್ಣವು ಕೊಳೆಯನ್ನು ತೆಗೆದುಹಾಕುವುದಲ್ಲದೆ, ರೋಗಾಣುಗಳನ್ನು ಕೊಲ್ಲುತ್ತದೆ.
  • ಬ್ಲೀಚಿಂಗ್ ಪೌಡರ್ : ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು 10-15 ಲೀಟರ್ ನೀರಿನಲ್ಲಿ 200 ಗ್ರಾಂ ಬ್ಲೀಚಿಂಗ್ ಪೌಡರ್ ಮಿಶ್ರಣ ಮಾಡಿ. ಈ ದ್ರಾವಣವನ್ನು ಟ್ಯಾಂಕ್‌ಗೆ ಸುರಿಯಿರಿ. ಸ್ಕ್ರಬರ್ ಸಹಾಯದಿಂದ ಗೋಡೆಗಳ ಮೇಲೆ ಉಜ್ಜಿ, ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.
  • ಕ್ಲೋರಿನ್ ಮಾತ್ರೆಗಳು : ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಲು ಕ್ಲೋರಿನ್ ಮಾತ್ರೆಗಳನ್ನು ಬಳಸಬಹುದು. ಇದು ಟ್ಯಾಂಕಿನಲ್ಲಿರುವ ಕೊಳೆಗಳನ್ನು ತೆಗೆದು ಹಾಕಿ, ಸ್ವಚ್ಛಗೊಳಿಸುತ್ತದೆ.
  • ಟ್ಯಾಂಕ್ ಮುಚ್ಚಳ ಮುಚ್ಚಿಡುವ ಅಭ್ಯಾಸವಿರಲಿ : ಧೂಳು ಮತ್ತು ಸೂರ್ಯನ ಬೆಳಕಿನಿಂದ ರಕ್ಷಿಸಲು ನೀರಿನ ಟ್ಯಾಂಕ್ ಅನ್ನು ಯಾವಾಗಲೂ ಮುಚ್ಚಿಡಿ, ಇದು ಬ್ಯಾಕ್ಟೀರಿಯಾಗಳು ಬೆಳೆಯುವುದನ್ನು ತಡೆಯುತ್ತದೆ. ಅದಲ್ಲದೇ, ಪ್ರತಿದಿನ ಟ್ಯಾಂಕ್‌ನಿಂದ ನೀರನ್ನು ಬಳಸಿ, ನೀರು ತುಂಬಿ ತುಳುಕದಂತೆ ನೋಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ