ಸಂಬಂಧಗಳಲ್ಲಿ ವಿವಿಧ ವಿಧಾನಗಳು ಇರುತ್ತವೆ. ಅದರಲ್ಲಿ ಡೇಟಿಂಗ್ ಕೂಡ ಪ್ರೀತಿ ಲೋಕದ ಒಂದು ಸಾಧನವಾಗಿದೆ, ಬೇರೆ ಬೇರೆ ರೀತಿಯ ಡೇಟಿಂಗ್ಗಳು ಇರುತ್ತದೆ. ಸಾಫ್ಟ್ ಲಾಂಚ್ ರಿಲೇಷನ್ಶಿಪ್ (Soft Launch) ಬಗ್ಗೆ ನೀವು ಕೇಳಿರಬಹುದು. ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಪರಸ್ಪರ ಸಾಫ್ಟ್ ಲಾಂಚ್ ಸಂಬಂಧವನ್ನು ಹೊಂದಿದರು. ಅವರ ಸಂಬಂಧದ ಬಗ್ಗೆ ಯಾರಿಗೂ ಕೂಡ ಗೊತ್ತಿರಲಿಲ್ಲ. ಕೊನೆಯಲ್ಲಿ ಮದುವೆ ಹಂತಕ್ಕೆ ಬಂದ್ಮೇಲೆ ಎಲ್ಲರಿಗೂ ತಿಳಿಯಿತು. ಹೀಗೆ ನೀವು ನಿಮ್ಮ ಸಂಗಾತಿಯನ್ನು ಯಾರಿಗೂ ಪರಿಚಯ ಮಾಡದೇ, ಇಬ್ಬರು ಕೂಡ ಸ್ನೇಹದಲ್ಲಿದ್ದು, ನಾವು ರಿಲೇಷನ್ಶಿಪ್ನಲ್ಲಿದ್ದೇನೆ ಎಂಬುದನ್ನು ಎಲ್ಲರ ಮುಂದೆ ತೋರಿಸಿಕೊಳ್ಳುವುದನ್ನು ಸಾಫ್ಟ್ ಲಾಂಚ್ ರಿಲೇಷನ್ಶಿಪ್ ಎಂದು ಹೇಳಲಾಗುತ್ತದೆ. ಸಾಫ್ಟ್ ಲಾಂಚ್ ರಿಲೇಷನ್ಶಿಪ್ನಲ್ಲಿ ನೀವು ಪ್ರೀತಿಸಿದ ವ್ಯಕ್ತಿಯನ್ನು ಯಾರಿಗೂ ತೋರಿಸುವಂತಿಲ್ಲ. ಆದರೆ ಅವರ ಕೈ, ಭುಜ ಅಥವಾ ತಲೆ ಭಾಗಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಬಹುದು. ಆದರೆ ಅವರ ಮುಖವನ್ನು ಯಾರಿಗೂ ಪ್ರದರ್ಶಿಸುವಂತಿಲ್ಲ. ಹಾಗಾದರೆ ಸಾಫ್ಟ್ ಲಾಂಚ್ ರಿಲೇಷನ್ಶಿಪ್ನ್ನು ಹೇಗಿರುತ್ತದೆ? ಯಾವೆಲ್ಲ ವಿಚಾರಗಳನ್ನು ಮರೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಮಸುಕು ಫೋಟೋ: ನಿಮ್ಮ ಸಂಗಾತಿಯನ್ನು ಯಾರಿಗೂ ತೋರಿಸದೇ ನಾವು ರಿಲೇಷನ್ಶಿಪ್ನಲ್ಲಿದ್ದೇವೆ ಎಂದು ತೋರಿಸಲು ಸೋಶಿಯಲ್ ಮೀಡಿಯಾದಲ್ಲಿ ಮಸುಕು ಹಾಕಿದ ಫೋಟೋಗಳನ್ನು ಹಂಚಿಕೊಳ್ಳುವುದು. ಈ ರೀತಿ ಮಾಡಿದ್ರೆ ಯಾರಿಗೂ ಕೂಡ ನಿಮ್ಮ ಸಂಗಾತಿ ಕಾಣಿಸುವುದಿಲ್ಲ. ಹಾಗೂ ಇದನ್ನು ಸಾಫ್ಟ್ ಲಾಂಚ್ ರಿಲೇಷನ್ಶಿಪ್ ಎಂದು ಹೇಳಬಹುದು. ಜತೆಗೆ ಈ ಫೋಟೋಗೆ ಒಂದು ಶೀರ್ಷಿಕೆಯನ್ನು ಕೂಡ ನೀಡಬಹುದು.
ತಬ್ಬಿಕೊಂಡಿರುವ ಫೋಟೋ: ನಿಮ್ಮ ಸಂಗಾತಿಯನ್ನು ತಬ್ಬಿಕೊಂಡು ನೀವು ಒಟ್ಟಿಗೆ ಫೋಟೋ ತೆಗೆದುಕೊಳ್ಳಬಹುದು. ನಿಮ್ಮ ಮುಖವನ್ನು ಕ್ಯಾಮೆರಾದ ಕಡೆಗೆ ಮತ್ತು ನಿಮ್ಮ ಸಂಗಾತಿಯ ಮುಖವನ್ನು ಇನ್ನೊಂದು ಬದಿಗೆ ಇರಿಸಿ, ಈ ರೀತಿಯಾಗಿ ಮಾಡಿದ್ರೆ ನಿಮ್ಮ ಸಂಗಾತಿಯ ಮುಖ ಯಾರಿಗೂ ಗೋಚರಿಸುವುದಿಲ್ಲ. ಆದರೆ ನೀವು ರಿಲೇಷನ್ಶಿಪ್ನಲ್ಲಿ ಇದ್ದೀರಾ ಎಂದು ಎಲ್ಲರಿಗೂ ತಿಳಿಯುತ್ತದೆ.
ಕೈ ಹಿಡಿದು ನಡೆಯುವ ಫೋಟೋ: ಈ ರೀತಿಯ ಫೋಟೋ ಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು. ಉದ್ಯಾನವನದಲ್ಲಿ ಏಕಾಂತದಲ್ಲಿ ಇಬ್ಬರು ನಡೆದುಕೊಂಡು ಹೋಗುವ ವಿಡಿಯೋ ಮಾಡಿ. ಆದರೆ ಅದರಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಯ ಮುಖ ಬರಬಾರದು.
ಇಬ್ಬರು ಊಟ ಮಾಡುವ ಟೇಬಲ್: ಡೇಟಿಂಗ್‌ಗೆ ಹೊರಗೆ ಹೋದರೆ, ಊಟದ ಮೇಜಿನ ಬಳಿ ಕೈ ಹಿಡಿದು ಕುಳಿತಿರುವ ಅಥವಾ ನಿಮ್ಮ ಸಂಗಾತಿ ಬೇರೆ ದಿಕ್ಕಿನತ್ತ ನೋಡುತ್ತಿರುವ ಫೋಟೋ ತೆಗೆದುಕೊಂಡು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ. ಮುಖ ಸ್ವಲ್ಪವಾದರೂ ಗೋಚರಿಸುತ್ತಿದ್ದರೆ, ನೀವು ಮುಖದ ಮೇಲೆ ಹೂವು ಅಥವಾ ಹಾರ್ಟ್ ಎಮೋಜಿ ಹಾಕಿಕೊಳ್ಳಬಹುದು.
ಭುಜದ ಮೇಲೆ ತಲೆ ಇಡುವುದು; ಹುಡುಗಿಯರು ತಮ್ಮ ಸಂಗಾತಿಯನ್ನು ಈ ರೀತಿಯೂ ಸಾಫ್ಟ್ ಲಾಂಚ್ ಮಾಡಬಹುದು. ನಿಮ್ಮ ಗೆಳೆಯನ ಭುಜದ ಮೇಲೆ ನಿಮ್ಮ ತಲೆಯನ್ನು ಇರಿಸಿ ಫೋಟೋ ಪೋಸ್ಟ್ ಮಾಡಬಹುದು. ಇಲ್ಲಿ ನಿಮ್ಮ ಹುಡುಗನ ಫೋಟೋ ಯಾರಿಗೂ ಕಾಣುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Mon, 23 June 25