ಪ್ರತಿ ದಿನ ಹಲ್ಲುಜ್ಜಿದರ ಕೂಡ ಹಳದಿಗಟ್ಟಿದ ಹಲ್ಲುಗಳು ಮಾತ್ರ ಹಾಗೆ ಇರುತ್ತದೆ. ಹೆಚ್ಚಿನವರು ಈ ಬಗ್ಗೆ ಗಮನ ಹರಿಸುವುದೇ ಇಲ್ಲ. ಆದರೆ, ಹಳದಿ ಹಲ್ಲುಗಳಿಂದ ಎಷ್ಟೋ ಸಲ ನಗುವುದಕ್ಕೂ ಮುಜುಗರವಾಗುತ್ತದೆ. ಈ ಸಮಸ್ಯೆಗೆ ಮನೆಯಲ್ಲೇ ಸರಳವಾದ ಪರಿಹಾರ ಕಂಡುಕೊಳ್ಳುವ ಮೂಲಕ ಕಳೆಗುಂದಿದ ಹಲ್ಲನ್ನು ಫಳಫಳನೇ ಹೊಳೆಯುವಂತೆ ಮಾಡಬಹುದು.
Follow us on
ನೀವು ನಕ್ಕಾಗ ಬಾಯಲ್ಲಿರುವ ದಾಳಿಂಬೆಯಂತಿರುವ ಹಲ್ಲುಗಳು ಎದ್ದು ಕಾಣುತ್ತದೆ. ಈ ಹಲ್ಲುಗಳು ಬಿಳಿಯಾಗಿದ್ದು ಸ್ವಚ್ಛವಾಗಿಟ್ಟುಕೊಂಡಿದ್ದರೆ ಏನು ಅನಿಸುವುದಿಲ್ಲ. ಅದೇ ಹಳದಿಗಟ್ಟಿದ ಹಲ್ಲು ನಿಮ್ಮದಾಗಿದ್ದರೆ ಬಾಯಿ ಮೇಲೆ ಕೈಇಟ್ಟು ಕೊಂಡೇ ನಗಬೇಕಾಗುತ್ತದೆ. ಈ ಸಮಸ್ಯೆಗೆ ಮನೆಯಲ್ಲಿರುವ ಈ ವಸ್ತುಗಳಿಂದಲೇ ಶೀಘ್ರವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.
ಹಳದಿ ಹಲ್ಲುಗಳನ್ನು ಬಿಳಿಯಾಗಿಸುವ ಸರಳ ಮನೆ ಮದ್ದುಗಳು
ಹಲ್ಲುಗಳನ್ನು ಬಿಳುಪಾಗಿಸುವಲ್ಲಿ ಲವಂಗ ತುಂಬಾ ಪರಿಣಾಮಕಾರಿಯಾಗಿದೆ. ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಗೆ ಸ್ವಲ್ಪ ಲವಂಗದ ಪುಡಿಯನ್ನು ಸೇರಿಸಿ. ಪ್ರತಿದಿನ ಬೆಳಗ್ಗೆ ಈ ಪುಡಿಯಿಂದ ಹಲ್ಲುಜ್ಜುವುದರಿಂದ ಹಲ್ಲುಗಳ ಮೇಲಿನ ಹಳದಿ ಬಣ್ಣವನ್ನು ಹೋಗಲಾಡಿಸಿ ಬಿಳಿಯಾಗುತ್ತದೆ.
ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ, ಅವುಗಳ ಮೇಲೆ ನಿಂಬೆ ಹಚ್ಚಿ ಚೆನ್ನಾಗಿ ತಿಕ್ಕುವುದರಿಂದ ಹಳದಿ ಹಲ್ಲುಗಳು ಬಿಳಿ ಬಣ್ಣಕ್ಕೆ ಮರಳುತ್ತದೆ.
ಅಡುಗೆ ಸೋಡಾವನ್ನು ಪೇಸ್ಟ್ ರೀತಿ ತಯಾರಿಸಿ, ಇದರಿಂದ ವಾರಕೊಂದು ಬಾರಿ ಹಲ್ಲುಜ್ಜುವುದದರಿಂದ ಹಳದಿ ಹಲ್ಲುಗಳು ಕ್ರಮೇಣವಾಗಿ ಬಿಳಿ ಬಣ್ಣಕ್ಕೆ ಮರಳುತ್ತದೆ.
ತುಳಸಿ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಇದು ಹಲ್ಲಿನ ಮೇಲಿರುವ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದು ಹಾಕಲು ಸಹಕಾರಿಯಾಗಿದೆ. ಹೀಗಾಗಿ ತುಳಸಿ ಎಲೆಗಳನ್ನು ಪುಡಿ ಮಾಡಿ ನಿಂಬೆರಸ ಬೆರೆಸಿ ಹಲ್ಲುಗಳ ಮೇಲೆ ಉಜ್ಜಿದರೆ ಹಲ್ಲುಗಳ ಮೇಲಿರುವ ಹಳದಿ ಬಣ್ಣವು ಹೋಗುತ್ತದೆ.
ತೆಂಗಿನ ಎಣ್ಣೆಯೊಂದಿಗೆ ಅರಿಶಿನವನ್ನು ಮಿಶ್ರಣ ಮಾಡಿ, ಇದನ್ನು ಹಲ್ಲುಗಳ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಹಲ್ಲುಜ್ಜಿದರೆ ಹಲ್ಲುಗಳ ಮೇಲಿನ ಹಳದಿ ಬಣ್ಣವನ್ನು ಹೋಗಲಾಡಿಸುತ್ತದೆ.
ಅಲೋವೆರಾವು ನಿಮ್ಮ ಹಲ್ಲುಗಳು ಬೆಳ್ಳಗಾಗುವಂತೆ ಮಾಡುತ್ತದೆ. ಹೀಗಾಗಿ ಬೇಕಿಂಗ್ ಸೋಡಾದ ಜೊತೆಗೆ ಅಲೋವೆರಾವನ್ನು ಸೇರಿಸಿ ಟೂತ್ ಪೇಸ್ಟ್ನಂತೆ ಮಾಡಿಕೊಂಡು ದಿನನಿತ್ಯ ಹಲ್ಲುಜ್ಜುವುದು ಪರಿಣಾಮಕಾರಿ ಮನೆ ಮದ್ದಾಗಿದೆ.
ಬೆಳಗ್ಗೆ ಎದ್ದ ಕೂಡಲೆ ನಿಮ್ಮ ಹಲ್ಲುಗಳಿಗೆ ಆಲೀವ್ ಮತ್ತು ಬಾದಾಮಿ ಎಣ್ಣೆಯ ಮಿಶ್ರಣವನ್ನು ಹಚ್ಚಿ ತಿಕ್ಕಿ ತೊಳೆದರೆ ಕ್ರಮೇಣವಾಗಿ ಹಲ್ಲುಗಳು ಫಳಫಳನೇ ಹೊಳೆಯುತ್ತದೆ.
ಒಂದು ಹಿಡಿ ಬೇವಿನ ಎಲೆಗಳನ್ನು ಜಜ್ಜಿ ರಸವನ್ನು ಹಾಲಿನೊಂದಿಗೆ ಬೆರೆಸಿ, ದಪ್ಪವಾದ ಪೇಸ್ಟ್ ನಂತೆ ಮಾಡಿಕೊಂಡು, ಹಲ್ಲಿಗೆ ಲೇಪಿಸಿ ಉಜ್ಜಿದರೆ ಕಳೆಗುಂದಿದ ಹಲ್ಲುಗಳು ಬಿಳಿ ಬಣ್ಣಕ್ಕೆ ಮರಳುತ್ತದೆ.