AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Midnight Hunger : ಊಟ ಮಾಡಿ ಮಲಗಿದ್ರೂ, ಮಧ್ಯರಾತ್ರಿ ಹಸಿವಾಗುತ್ತಾ? ಇಲ್ಲಿದೆ ಸರಳ ಸಲಹೆಗಳು

ಇಂದಿನ ಜನರ ಜೀವನ ಶೈಲಿಯ ಬದಲಾವಣೆಯೂ ಊಟ ತಿಂಡಿ ಮಾಡಲು ಸಮಯವಿಲ್ಲ. ಹೀಗಾಗಿ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಅದಲ್ಲದೇ ಕೆಲವರು ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುತ್ತಿಲ್ಲ. ಹೀಗಾಗಿ ರಾತ್ರಿ ಊಟ ಮಾಡಿದ್ರು, ಮಧ್ಯರಾತ್ರಿ ಹಸಿವಾಗುತ್ತದೆ. ಹೀಗಾಗಿ ನಡುರಾತ್ರಿಯಲ್ಲಿ ಇದ್ದು ಏನಾದರೂ ಸೇವಿಸದೇ ಇದ್ದರೆ ನಿದ್ದೆಯೇ ಬರುವುದಿಲ್ಲ. ಈ ಅಭ್ಯಾಸದಿಂದ ಮುಕ್ತರಾಗಲು ಈ ಸರಳ ಟಿಪ್ಸ್ ಅನುಸರಿಸುವುದು ಉತ್ತಮ.

Midnight Hunger : ಊಟ ಮಾಡಿ ಮಲಗಿದ್ರೂ, ಮಧ್ಯರಾತ್ರಿ ಹಸಿವಾಗುತ್ತಾ? ಇಲ್ಲಿದೆ ಸರಳ ಸಲಹೆಗಳು
ಸಾಯಿನಂದಾ
| Edited By: |

Updated on: Jun 10, 2024 | 3:22 PM

Share

ನಮ್ಮ ಹಿರಿಯರು ಬೇಗ ಮಲಗಿ ಬೇಗ ಏಳು ಎನ್ನುವ ಜೀವನ ಶೈಲಿಯನ್ನು ಅನುಸರಿಸುತ್ತಿದ್ದರು. ಪೌಷ್ಟಿಕಾಂಶಯುಕ್ತ ಹಾಗೂ ಸಮತೋಲಿತ ಆಹಾರ ಸೇವನೆಯತ್ತ ಹೆಚ್ಚು ಗಮನ ಕೊಡುತ್ತಿದ್ದರು. ಆದರೆ ಇಂದಿನವರ ಜೀವನ ಶೈಲಿ ಹಾಗೂ ಆಹಾರ ಕ್ರಮ ಎಲ್ಲವು ಬದಲಾಗಿದೆ. ಕೆಲವರಿಗೆ ರಾತ್ರಿ ಮಲಗುವ ಮುನ್ನ ಊಟ ಮಾಡಿದ್ರೂ, ಮಧ್ಯರಾತ್ರಿ ಹಸಿವಾಗುತ್ತದೆ. ಎದ್ದು ಏನಾದರೂ ತಿಂದರೇನೇ ಸಮಾಧಾನ. ಆಹಾರ ಪದ್ಧತಿಯಲ್ಲಿನ ಅಸಮತೋಲನ, ದೈಹಿಕ ಚಟುವಟಿಕೆಗಳಲ್ಲಿ ಏರುಪೇರು, ಒತ್ತಡ ಹಾಗೂ ಆತಂಕ ಈ ರೀತಿಯಾಗಲು ಕಾರಣ ಎನ್ನಲಾಗಿದೆ.

ಮಧ್ಯರಾತ್ರಿ ಹಸಿವಾದ್ರೆ ಈ ಸಲಹೆಗಳನ್ನು ಅನುಸರಿಸಿ

  • ಪ್ರೋಟೀನ್, ಕೊಬ್ಬುಗಳು, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ರಾತ್ರಿ ಸೇವಿಸುವುದು ಒಳ್ಳೆಯದು. ಇದು ಸಕ್ಕರೆಯಲ್ಲಿನ ಮಟ್ಟವನ್ನು ಸ್ಥಿರಗೊಳಿಸಿ, ರಾತ್ರಿಯಲ್ಲಿ ಹಸಿವಿನಿಂದ ಎಚ್ಚರಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  • ಒತ್ತಡವನ್ನು ಕಡಿಮೆ ಮಾಡಲು ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ಮಲಗುವ ಮುನ್ನ ಆಳವಾದ ಉಸಿರಾಟ, ಧ್ಯಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಉತ್ತಮ. ಹೀಗಾಗಿ ನಿದ್ದೆಯ ನಡುವೆ ಎಚ್ಚರವಾಗುವುದಿಲ್ಲ.
  • ಬ್ರೆಡ್​ ಸ್ಯಾಂಡ್​ವಿಚ್​​ ಕೂಡ ಮಧ್ಯರಾತ್ರಿ ಹೊಟ್ಟೆ ಹಸಿವು ಆಗದಂತೆ ತಡೆಯುತ್ತದೆ. ಹೀಗಾಗಿ ರಾತ್ರಿ ಮಲಗುವ ಮುನ್ನ ಎರಡು ಬ್ರೆಡ್​ ತುಂಡಿಗೆ ಟೊಮೆಟೊ, ಸ್ವಲ್ಪ ಚೀಸ್​ ಹಾಕಿ ತಿನ್ನುವುದರಿಂದ ರಾತ್ರಿ ಎಚ್ಚರವಾಗುವುದನ್ನು ತಪ್ಪಿಸಬಹುದು.
  • ಸಿಹಿ ಗೆಣಸನ್ನು ಬೇಯಿಸಿ ಸೇವಿಸುವುದರಿಂದ ಹೊಟ್ಟೆ ತುಂಬುತ್ತದೆ. ಇದರಲ್ಲಿಯೂ ಫೈಬರ್​ ಮತ್ತು ಪ್ರೋಟಿನ್​ಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡಿ ನಿದ್ರೆ ಭಂಗವಾಗದಂತೆ ತಡೆಯುತ್ತದೆ.
  • ಸಾಕಷ್ಟು ಪ್ರಮಾಣದ ನೀರನ್ನು ಸೇವಿಸುವ ಮೂಲಕ ದಿನವಿಡೀ ಸರಿಯಾದ ಜಲಸಂಚಯನವನ್ನು ಕಾಪಾಡಿಕೊಳ್ಳಬಹುದಾಗಿದೆ. ರಾತ್ರಿಯ ಬಾಯಾರಿಕೆಯನ್ನು ನೀಗಿಸಲು ನಿಮ್ಮ ಹಾಸಿಗೆಯ ಪಕ್ಕದಲ್ಲಿ ಒಂದು ಲೋಟ ನೀರನ್ನು ಸುಲಭವಾಗಿ ಇರಿಸಿಕೊಳ್ಳಲು. ಸಾಕಷ್ಟು ನೀರು ಕುಡಿಯುವ ಈ ಸರಳ ಅಭ್ಯಾಸವು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರಬಹುದು. ರಾತ್ರಿಯ ವೇಳೆ ಹಸಿವಾಗುವುದನ್ನು ತಡೆಯಲು ಸಹಕಾರಿಯಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: