ಒಡೆದ ತೆಂಗಿನಕಾಯಿಯನ್ನು ಕೆಡದಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್

ಅಡುಗೆಗಾಗಿ ಒಡೆದ ತೆಂಗಿನ ಕಾಯಿಯನ್ನು ಒಂದೇ ದಿನಕ್ಕೆ ಖಾಲಿ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಕೆಡದಂತೆ ಕಾಪಾಡಿಕೊಳ್ಳಲು ಟಿಪ್ಸ್​ಗಳು ಇಲ್ಲಿವೆ.

ಒಡೆದ ತೆಂಗಿನಕಾಯಿಯನ್ನು ಕೆಡದಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್
Coconut
TV9kannada Web Team

| Edited By: Nayana Rajeev

Jul 25, 2022 | 5:02 PM

ಅಡುಗೆಗಾಗಿ ಒಡೆದ ತೆಂಗಿನ ಕಾಯಿಯನ್ನು ಒಂದೇ ದಿನಕ್ಕೆ ಖಾಲಿ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಕೆಡದಂತೆ ಕಾಪಾಡಿಕೊಳ್ಳಲು ಟಿಪ್ಸ್​ಗಳು ಇಲ್ಲಿವೆ. ಸಾಮಾನ್ಯವಾಗಿ ಇಂದು ಒಡೆದ ಕಾಯಿಯನ್ನು ನಾಳೆಗೆ ಬಳಸುತ್ತೇವೆ, ಆದರೆ ಹಬ್ಬ, ಅಥವಾ ನೆಂಟರು ಬಂದ ಸಂದರ್ಭದಲ್ಲಿ ಅನಿವಾರ್ಯವಾಗಿ ಹೆಚ್ಚು ಕಾಯಿಗಳನ್ನು ಒಡೆಯಬೇಕಾಗುತ್ತದೆ. ಆಗ ಅಡುಗೆ ಮುಗಿದ ಮೇಲೂ ಕೆಲವು ಕಾಯಿಗಳು ಬಳಕೆಯಾಗದೆ ಹಾಗೆಯೇ ಉಳಿದಿರುತ್ತದೆ. ಅದನ್ನು ಕೆಡದಂತೆ ಕಾಪಾಡುವುದು ಕೂಡ ಸವಾಲಿನ ಕೆಲಸವೇ.

ಬಿಸಿಲಿದ್ದರೆ ಒಣಗಿಸಿ: ಬಿಸಿಲಿದ್ದರೆ ಕಾಯಿಯನ್ನು ಒಣಗಿಸಿ ಮರುದಿನ ಅಡುಗೆಗೆ ಬಳಸಬಹುದು.

ಕಾಯಿ ತುರಿಯನ್ನು ಬೆಚ್ಚಗೆ ಮಾಡಿ ಇರಿಸಬಹುದು: ಕಾಯಿ ತುರಿಯನ್ನು ಫ್ರಿಜ್​ನಲ್ಲಿ ಇಡಬಹುದು, ಇಲ್ಲವಾದಲ್ಲಿ ಕಾಯಿ ತುರಿಯನ್ನು ಪಾತ್ರೆಗಾಗಿ ಒಲೆಯ ಮೇಲಿಟ್ಟು ಸ್ವಲ್ಪ ಬೆಚ್ಚಗೆ ಮಾಡಿಟ್ಟರೆ ನಂತರ ಅಡುಗೆಗೆ ಬಳಸಬಹುದು.

ಉಪ್ಪಿನ ಪಾತ್ರೆಯಲ್ಲಿ ಹಾಕಿಡಬಹುದು: ಒಡೆದ ಕಾಯಿಯನ್ನು ಉಪ್ಪಿನ ಪಾತ್ರೆಯಲ್ಲಿ ಇಟ್ಟರೆ ಒಂದೆರಡು ದಿನಗಳು ಕೆಡುವುದಿಲ್ಲ.

ಅರಿಶಿನ ಹಚ್ಚಿಡಿ: ಒಡೆದ ಕಾಯಿಗೆ ಸ್ವಲ್ಪ ಅರಿಶಿನವನ್ನು ಹಚ್ಚಿಡುವುದರಿಂದ ಹಾಳಾಗದಂತೆ ತಡೆಯಬಹುದಾಗಿದೆ.

ಭತ್ತದ ಹುಲ್ಲಿನೊಳಗೆ ಇಡಬಹುದು: ಭತ್ತದ ಹುಲ್ಲಿನೊಳಗೆ ಕಾಯಿಯನ್ನು ಇಡುವುದರಿಂದ ಹುಲ್ಲಿನಲ್ಲಿರುವ ಉಷ್ಣಾಂಶವು ಕಾಯಿ ಹಾಳಾಗದಂತೆ ನೋಡಿಕೊಳ್ಳುತ್ತದೆ.

ಅಂಗಡಿಯಲ್ಲಿ ತೆಂಗಿನ ಕಾಯಿ ರಕ್ಷಣೆ ಹೇಗೆ ?  ಅಂಗಡಿಗಳಲ್ಲಿ ತೆಂಗಿನಕಾಯಿಯನ್ನು  ತುಂಬಾ ಜಾಗ್ರತೆಯಲ್ಲಿ ಇಡುತ್ತಾರೆ. ಇಲ್ಲಿ ತೆಂಗಿನ ಕಾಯಿಗಳನ್ನು ನೈಸರ್ಗಿಕ ಗುಣಮಟ್ಟಕ್ಕೆ ಅನುಗುಣಕ್ಕಾಗಿ ಸರಿಯಾಗಿ ಶೇಖರಣೆ ಮಾಡುತ್ತಾರೆ. ಅಂದರೆ ತೆಂಗಿನ ಕಾಯಿಯನ್ನು ಹೆಚ್ಚು  ಬಿಸಿಯು ಅಲ್ಲದ ತಂಪು ಅಲ್ಲದ ಪ್ರದೇಶದಲ್ಲಿ ಇಡುತ್ತಾರೆ.

ಕಾಯಿಯ ಕಣ್ಣಿನ ಬಳಿ ಸುಣ್ಣವನ್ನು ಹಚ್ಚಿಡುತ್ತಾರೆ ಕಾಯಿಯ ಕಣ್ಣಿನ ಸಮೀಪ ಸುಣ್ಣವನ್ನು ಹಚ್ಚಿಡುತ್ತಾರೆ, ಇದರಿಂದ ಹಲವು ಸಮಯದವರೆಗೆ ಕಾಯಿ ಹಾಳಾಗುವುದಿಲ್ಲ.

Follow us on

Related Stories

Most Read Stories

Click on your DTH Provider to Add TV9 Kannada