Monsoon Recipe: ಮಳೆಗಾಲಕ್ಕೆ ಹೇಳಿ ಮಾಡಿಸಿದ ಘರಂ ಕಾಳುಮೆಣಸಿನ ಸಾರು; ರೆಸಿಪಿ ಇಲ್ಲಿದೆ
ಕೇವಲ 5 ನಿಮಿಷಗಳಲ್ಲಿ ಕಡಿಮೆ ಪದಾರ್ಥಗಳೊಂದಿಗೆ ನೀವು ಈ ರುಚಿಕರ ಹಾಗೂ ಆರೋಗ್ಯಕರ ಘರಂ ಕಾಳುಮೆಣಸಿನ ಸಾರನ್ನು ತಯಾರಿಸಬಹುದು. ಪಾಕ ವಿಧಾನ ಇಲ್ಲಿದೆ.
ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು, ಜೊತೆಗೆ ಶೀತ, ಕೆಮ್ಮು, ನೆಗಡಿ ಮುಂತಾದ ಸಾಕಷ್ಟು ಸೋಂಕುಗಳು ಬಂದು ಬಿಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಈ ಎಲ್ಲಾ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡಲು ಮನೆಯಲ್ಲಿಯೇ ರುಚಿಕರ ಕಾಳುಮೆಣಸಿನ ಸಾರು ತಯಾರಿಸಿ. ಕೇವಲ 5 ನಿಮಿಷಗಳಲ್ಲಿ ಕಡಿಮೆ ಪದಾರ್ಥಗಳೊಂದಿಗೆ ನೀವು ಈ ರುಚಿಕರ ಹಾಗೂ ಆರೋಗ್ಯಕರ ಘರಂ ಕಾಳುಮೆಣಸಿನ ಸಾರನ್ನು ತಯಾರಿಸಬಹುದು. ಯಾವ ರೀತಿ ತಯಾರಿಸುವುದು ಎಂಬುದರ ಕುರಿತು ಭಟ್ ಆ್ಯಂಡ್ ಭಟ್ ಇನ್ಟ್ಸಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಕೇವಲ 5 ನಿಮಿಷಗಳಲ್ಲಿ ಈ ಆರೋಗ್ಯಕರ ಸಾರು ತಯಾರಿಸಿ. ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ.
ಘರಂ ಕಾಳುಮೆಣಸಿನ ಸಾರು:
ಬೇಕಾಗುವ ಪದಾರ್ಥಗಳು:
- ಕಾಳು ಮೆಣಸು
- ಜೀರಿಗೆ
- ಉಪ್ಪು
- ಬೆಲ್ಲ
- ಹುಳಿ
- ಸಾಸಿವೆ
- ಒಗ್ಗರಣೆ ಸೊಪ್ಪು(ಕರಿಬೇವು)
View this post on Instagram
ಇದನ್ನೂ ಓದಿ: ಮಕ್ಕಳಿಗೆ ಮಾತ್ರವಲ್ಲ ಹಿರಿಯರ ಬಾಯಲ್ಲೂ ನೀರು ಬರಿಸುತ್ತದೆ ಈ ಲೌಕಿ ಚಿಲ್ಲಾ! ಮಾಡುವ ವಿಧಾನ ಇಲ್ಲಿದೆ
ಘರಂ ಕಾಳುಮೆಣಸಿನ ಸಾರು ಮಾಡುವ ವಿಧಾನ:
- ಮೊದಲಿಗೆ ಕಾಳುಮೆಣಸು, ಜೀರಿಗೆಯಲ್ಲಿ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಇದಾದ ಬಳಿಕ ಇವೆರಡನ್ನು ಕುಟ್ಟಾನಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ.
- ನಂತರ ಒಂದು ಪಾತ್ರೆಯಲ್ಲಿ ಸಾರಿಗೆ ಬೇಕಾದಷ್ಟು ನೀರು ಹಾಕಿ, ನೀರನ್ನು ಕುದಿಯಲು ಬಿಡಿ. ನೀರು ಕುದಿ ಬರುತ್ತಿದ್ದಂತೆ ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು, ಹುಳಿ, ಬೆಲ್ಲ ಸೇರಿಸಿ. ನಂತರ ಈಗಾಗಲೇ ಪುಡಿ ಮಾಡಿ ಇಟ್ಟ ಕಾಳುಮೆಣಸು, ಜೀರಿಗೆಯ ಪುಡಿಯನ್ನು ಹಾಕಿ. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ.
- ಇದೀಗಾ ಘರಂ ಕಾಳುಮೆಣಸಿನ ಸಾರು ರೆಡಿಯಾಗಿದೆ. ಕೊನೆಯಲ್ಲಿ ಇದಕ್ಕೆ ಸಾಸಿವೆ, ಒಣ ಮೆಣಸು ಹಾಗೂ ಕರಿಬೇವು ಎಲೆಗಳ ಒಗ್ಗರಣೆ ಹಾಕಿ.
ಮಳೆಗಾಲದಲ್ಲಿ ಬಿಸಿ ಬಿಸಿ ಅನ್ನದೊಂದಿಗೆ ಹೇಳಿ ಮಾಡಿಸಿದ ಜೋಡಿ. ರುಚಿಯ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಘರಂ ಕಾಳುಮೆಣಸಿನ ಸಾರನ್ನು ನೀವು ನಿಮ್ಮ ಮನೆಯಲ್ಲಿ ಪ್ರಯತ್ನಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: