Vitamin B12 Deficiency: ವಿಟಮಿನ್ ಬಿ 12 ಕೊರತೆಯಿಂದ ಭಾದಿಸುವ ಆರೋಗ್ಯ ಸಮಸ್ಯೆಗಳಾವುವು?

ಉತ್ತಮ ಆರೋಗ್ಯಕ್ಕಾಗಿ ನಮ್ಮ ದೇಹಕ್ಕೆ ಅನೇಕ ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿದೆ. ಆದರೆ ಈ ಪೋಷಕಾಂಶಗಳ ಕೊರತೆಯು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅದೇ ರೀತಿ ವಿಟಮಿನ್ ಬಿ12 ಜೀವಸತ್ವದ ಕೊರತೆಯಿಂದಲೂ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಬಿ12 ಜೀವಸತ್ವ ಕೊರತೆಯ ಲಕ್ಷಣಗಳು ಯಾವುವು, ಆ ಕೊರತೆಯನ್ನು ತಡೆಗಟ್ಟುವ ಮಾರ್ಗಗಳು ಯಾವುವು ಎಂಬುದನ್ನು ತಿಳಿಯೋಣ.

Vitamin B12 Deficiency: ವಿಟಮಿನ್ ಬಿ 12 ಕೊರತೆಯಿಂದ ಭಾದಿಸುವ ಆರೋಗ್ಯ ಸಮಸ್ಯೆಗಳಾವುವು?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 25, 2023 | 4:07 PM

ಜೀವಸತ್ವಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಯಾವುದೇ ರೀತಿಯ ಪೋಷಕಾಂಶದ ಕೊರತೆಯು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಂತೆ ವಿಟಮಿನ್ ಬಿ12 (Vitamin B12) ಕೂಡಾ ನಮ್ಮ ದೇಹ ಸದೃಢವಾಗಿಡಲು ಬಹಳ ಮುಖ್ಯ. ಈ ಜೀವಸತ್ವದ ಕೊರತೆಯು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್ ಬಿ12 ಕೊರತೆಯಿಂದ ಏನಾಗುತ್ತದೆ, ಅದರ ಲಕ್ಷಣಗಳು ಯಾವುವು ಮತ್ತು ಆ ಕೊರತೆಯನ್ನು ಹೇಗೆ ತಡೆಗಟ್ಟಬಹುದು ಎಂಬ ಮಾಹಿತಿ ಇಲ್ಲಿದೆ.

ವಿಟಮಿನ್ ಬಿ12 ನಮ್ಮ ದೇಹಕ್ಕೆ ಏಕೆ ಮುಖ್ಯವಾಗಿದೆ:

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹಕ್ಕೆ ಅನೇಕ ಜೀವಸತ್ವಗಳು ಮತ್ತು ಪೋಷಕಾಂಶಗಳು ಬೇಕಾಗುತ್ತವೆ. ಈ ಪೋಷಕಾಂಶಗಳ ಕೊರತೆಯು ವ್ಯಕ್ತಿಯಲ್ಲಿ ಸಣ್ಣ ಪ್ರಮಾಣದ ಅಥವಾ ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು. ಅದರಂತೆ ವಿಟಮಿನ್ ಬಿ12 ಆರೋಗ್ಯಕರ ಕೆಂಪು ರಕ್ತಕಣಗಳ ಉತ್ಪಾದನೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಈ ಕೊರತೆಯು ಹಲವಾರು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು

ದೀರ್ಘಕಾಲದ ವಿಟಮಿನ್ ಬಿ12 ಕೊರತೆಯಿಂದ ಏನಾಗುತ್ತದೆ:

ದೀರ್ಘಕಾಲದ ವಿಟಮಿನ್ ಬಿ12 ಕೊರತೆಯು ಆರೋಗ್ಯಕ್ಕೆ ಅಪಾಯಕಾರಿ. ಇದು ನರ ಹಾನಿ, ಹೃದಯ ವೈಫಲ್ಯ ಮತ್ತು ಕರುಳಿನ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಈ ಪೋಷಕಾಂಶದ ಕೊರತೆಯಿರುವುದನ್ನು ಪತ್ತೆ ಹಚ್ಚಿ, ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಯನ್ನು ಪಡೆಯಬೇಕು.

ವಿಟಮಿನ್ ಬಿ12 ಕೊರತೆಯಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಚಿಹ್ನೆಗಳು:

• ನಾಲಿಗೆ ಮೇಲೆ ದದ್ದು ಮತ್ತು ಬಾಯಿಯಲ್ಲಿ ಹುಣ್ಣು

• ಉಸಿರಾಟದ ತೊಂದರೆ

• ಕೈ ಮತ್ತು ಕಾಲುಗಳ ಮರಗಟ್ಟುವಿಕೆ

• ತೂಕನಷ್ಟ

• ತಲೆನೋವು

• ಹಸಿವಿನ ಕೊರತೆ

• ಮೂಳೆಗಳು ದುರ್ಬಲವಾಗುವುದು

ಇದನ್ನೂ ಓದಿ:ವಿಟಮಿನ್ ಬಿ 12 ಕೊರತೆಯು ದೇಹದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತವೆ

ವಿಟಮಿನ್ ಬಿ12 ಕೊರತೆಯ ಇತರ ಲಕ್ಷಣಗಳು:

ಕೆಂಪು ರಕ್ತಕಣಗಳು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುವ ಕೆಲಸವನ್ನು ಮಾಡುತ್ತದೆ. ಅವುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ವಿಟಮಿನ್ ಬಿ12 ಅತ್ಯವಶ್ಯಕವಾಗಿದೆ. ಹೀಗಿರುವಾಗ ಬಿ12 ಜೀವಸತ್ವದ ಕೊರತೆಯಿದ್ದರೆ ರಕ್ತದಲ್ಲಿ ಆಮ್ಲಜನಕವನ್ನು ಸಾಗಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ, ಇದು ಆಯಾಸಕ್ಕೆ ಕಾರಣವಾಗಬಹುದು. ಈ ಪರಿಸ್ಥಿತಿಯನ್ನು ಮೆಗಾಲೋಬ್ಲಾಸ್ಟಿಕ್ ರಕ್ತಹೀನತೆ ಎಂದು ಕರೆಯಲಾಗುತ್ತದೆ. ಆಯಾಸದ ಜೊತೆಗೆ ಉಸಿರಾಟದ ತೊಂದರೆ, ಅಜೀರ್ಣ, ಹೆದರಿಕೆ, ದೃಷ್ಟಿ ಸಮಸ್ಯೆಗಳು, ಮುಂತಾದ ರೋಗಲಕ್ಷಣಗಳನ್ನು ಉಂಟುಮಾಡಬಹುದು.

ವಿಟಮಿನ್ ಬಿ12 ಕೊರತೆಯನ್ನು ಈ ರೀತಿಯಲ್ಲಿ ನಿವಾರಿಸಬಹುದು:

ವಿಟಮಿನ್ ಬಿ 12 ಪೋಷಕಾಂಶವು ಮಾಂಸ, ಮೀನು, ಚೀಸ್ ಮೊಟ್ಟೆ ಮತ್ತು ಬೆಣ್ಣೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಅಲ್ಲದೆ ಅಣಬೆ, ಆಲೂಗಡ್ಡೆ, ಮತ್ತು ಬೀಟ್ರೂಟ್ ಸೇವಿಸುವ ಮೂಲಕ ವಿಟಮಿನ್ ಬಿ 12 ಕೊರತೆಯನ್ನು ನೀಗಿಸಬಹುದು. ಆರೋಗ್ಯ ತಜ್ಞರ ಪ್ರಕಾರ ಈ ಆಹಾರಗಳು ಸಾಕಷ್ಟು ಪ್ರಮಾಣದಲ್ಲಿ ಮಿಟಮಿನ್ ಬಿ12 ನ್ನು ಒದಗಿಸುವುದಿಲ್ಲ. ಆದ್ದರಿಂದ ಈ ಕೊರತೆ ಕಂಡು ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: