Curd : ಮೊಸರನ್ನು ಹುಳಿಯಾಗದಂತೆ ದೀರ್ಘಕಾಲ ಸಂಗ್ರಹಿಸಿಡುವುದೇಗೆ? ಈ ಟಿಪ್ಸ್ ಫಾಲೋ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 04, 2024 | 3:31 PM

ಮೊಸರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೆಚ್ಚಿನವರಿಗೆ ಮಧ್ಯಾಹ್ನದ ಊಟಕ್ಕೆ ಮೊಸರಿರಲೇಬೇಕು. ಅದಲ್ಲದೇ ವೈದ್ಯರು ಕೂಡ ಆರೋಗ್ಯಕ್ಕೆ ಒಳ್ಳೆಯದೇನ್ನುವ ಕಾರಣಕ್ಕೆ ನಿಯಮಿತವಾಗಿ ಮೊಸರು ಸೇವಿಸಿ ಎಂದು ಸಲಹೆ ನೀಡುತ್ತಾರೆ. ಆದರೆ ನಾವು ಮಾಡುವ ಕೆಲವು ತಪ್ಪುಗಳಿಂದ ಮೊಸರನ್ನು ದೀರ್ಘಕಾಲ ಸಂಗ್ರಹಿಸಿಡುವುದು ಕಷ್ಟವಾಗುತ್ತದೆ. ಹಾಗಾದ್ರೆ ಈ ಕೆಲವು ವಿಧಾನಗಳನ್ನು ಅನುಸರಿಸಿದರೆ ಮೊಸರು ಹುಳಿಯಾಗದಂತೆ ತಡೆಯಬಹುದು.

Curd : ಮೊಸರನ್ನು ಹುಳಿಯಾಗದಂತೆ ದೀರ್ಘಕಾಲ ಸಂಗ್ರಹಿಸಿಡುವುದೇಗೆ? ಈ ಟಿಪ್ಸ್ ಫಾಲೋ ಮಾಡಿ
Follow us on

ಯಾವ ಋತುವಾದರೂ ಸರಿಯೇ, ಕೆಲವರಿಗೆ ಮಧ್ಯಾಹ್ನದ ಊಟಕ್ಕೆ ಮೊಸರು ಇದ್ದರೇನೇ ಊಟವು ಪೂರ್ಣವಾಗುವುದು. ಹೌದು, ಈ ಹುಳಿ ಮೊಸರನ್ನು ನಿತ್ಯವೂ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆಯಂತೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮೊಸರು ಅಷ್ಟೇನು ಹುಳಿಯಿಲ್ಲದಿದ್ದರೂ ಆದರೆ ಕೆಲವೊಮ್ಮೆ ಸಂಗ್ರಹಿಸಿಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಮೊಸರು ಬೇಗನೇ ಹುಳಿಯಾಗುತ್ತದೆ.

ಮೊಸರು ಹುಳಿಯಾಗದಂತೆ ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

* ಹಾಲಿಗೆ ಮೊಸರು ಹಾಕುವಾಗ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ತೆಗೆದುಕೊಂಡು ಮಿಶ್ರಣ ಮಾಡಿಕೊಳ್ಳಿ.

* ಹಾಲಿಗೆ ಮೊಸರು ಹಾಕಿದ ಬಳಿಕ ಚೆನ್ನಾಗಿ ಮಿಶ್ರಣ ಮಾಡುವುದನ್ನು ಮರೆಯಬೇಡಿ.ಇದರಿಂದ ಹಾಲು ಶೀಘ್ರದಲ್ಲಿ ಮೊಸರಾಗಿ, ತುಂಬಾ ದಿನಗಳವರೆಗೆ ಹಾಳಾಗದಂತೆ ಇಡಬಹುದು.

* ಮೊಸರಿನಲ್ಲಿರುವ ಹುಳಿಯನ್ನು ಕಡಿಮೆ ಮಾಡಲು ಅದರಲ್ಲಿರುವ ಹೆಚ್ಚಿನ ನೀರನ್ನು ತೆಗೆದುಹಾಕುವುದು ಉತ್ತಮ.

ಇದನ್ನೂ ಓದಿ: ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ರೆ, ಈ ಆಹಾರಗಳನ್ನು ಅಪ್ಪಿತಪ್ಪಿಯು ಸೇವಿಸಲೇಬೇಡಿ

* ಮೊಸರನ್ನು ಬಿಸಿಯಾದ ಸ್ಥಳದಲ್ಲಿ ಸಂಗ್ರಹಿಸಿಟ್ಟರೆ ಹುಳಿಯಾಗುವ ಸಾಧ್ಯತೆಯೂ ಅಧಿಕ. ಕೋಣೆಯ ಉಷ್ಣಾಂಶಕ್ಕಿಂತ ತಂಪಾಗಿರುವ ಸ್ಥಳದಲ್ಲಿ ಅಥವಾ ರೆಫ್ರಿಜರೇಟರ್‌ನಲ್ಲಿ ಇರಿಸಿದರೆ ಹೆಚ್ಚು ದಿನಗಳವರೆಗೆ ಹಾಳಾಗದಂತೆ ಇಡಬಹುದು.

* ಮೊಸರಿನ ಪಾತ್ರೆಯನ್ನು ಮಣ್ಣಿನ ಮಡಕೆಯಲ್ಲಿ ಇರಿಸಿದರೆ ಮೊಸರು ಬೇಗನೇ ಹುಳಿಯಾಗುವುದನ್ನು ತಪ್ಪಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: