ಬೇಸಿಗೆ ಆರಂಭವಾಗುತ್ತಿದ್ದಂತೆ ಮಾರುಕಟ್ಟೆ ತುಂಬೆಲ್ಲಾ ಕಲ್ಲಂಗಡಿ ಹಣ್ಣುಗಳದ್ದೇ ಕಾರುಬಾರು ಶುರುವಾಗುತ್ತದೆ. ಕೆಂಪು ಮತ್ತು ರಸಭರಿತ ಕಲ್ಲಂಗಡಿ ಸಿಕ್ಕರೆ ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ ಹೆಚ್ಚು. ನೀರಿನಾಂಶ ಹೇರಳವಾಗಿರುವ ಈ ಕಲ್ಲಂಗಡಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು. ಇದರ ನಿಯಮಿತ ಸೇವನೆಯಿಂದ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಇಷ್ಟೆಲ್ಲಾ ಆರೋಗ್ಯ ಲಾಭವಿರುವ ಕಲ್ಲಂಗಡಿ ಹಣ್ಣು ಅಗ್ಗದ ಬೆಲೆಗೆ ಸಿಗುತ್ತದೆ ಎಂದಾದರೆ ಖರೀದಿ ಮಾಡಿ ತರುವವರೇ ಹೆಚ್ಚು. ಆದರೆ ರಸಭರಿತ ಹಾಗೂ ತಾಜಾ ಕಲ್ಲಂಗಡಿ ಖರೀದಿಸುವುದು ಹೇಗೆ? ಹಣ್ಣನ್ನು ಖರೀದಿಸುವಾಗ ಈ ಕೆಲವು ಟಿಪ್ಸ್ ಪಾಲಿಸುವುದು.
Ad
ಕಲ್ಲಂಗಡಿ
Follow us on
ಕಲ್ಲಂಗಡಿ (Watermelon) ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಬೇಸಿಗೆ ಬಂತೆಂದರೆ ಈ ಹಣ್ಣನ್ನು ಎಲ್ಲರೂ ತಪ್ಪದೇ ಖರೀದಿ ಮಾಡುತ್ತಾರೆ. ಈ ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಸೇರಿದಂತೆ ಇನ್ನಿತ್ತರ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲೇ ಇದೆ. ಸುಡುವ ಬಿಸಿಲಿನಲ್ಲಿ ದೇಹವನ್ನು ಡಿಹೈಡ್ರೇಟ್ ಮಾಡಲು ಈ ಕಲ್ಲಂಗಡಿ ಸಹಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಈ ಹಣ್ಣು ಸಿಗುತ್ತದೆ ಎಂದು ಖರೀದಿ ಮಾಡುವ ಮುನ್ನ ಈ ಹಣ್ಣು ಸಿಹಿಯಾಗಿದೆಯೇ ಎಂದು ತಿಳಿಯುವುದು ಮುಖ್ಯ. ಈ ಅಂಶಗಳನ್ನು ಗಮನಿಸಿದರೆ ಸಿಹಿ ಹಾಗೂ ರಸಭರಿತ ಕಲ್ಲಂಗಡಿ ಹಣ್ಣನ್ನು ಖರೀದಿಸಬಹುದಾಗಿದ್ದು, ಈ ಕುರಿತಾದ ಟಿಪ್ಸ್ ಇಲ್ಲಿದೆ.
ಕಲ್ಲಂಗಡಿ ಖರೀದಿಸುವಾಗ ಈ ಟಿಪ್ಸ್ ಪಾಲಿಸಿ
ಮೆಲ್ಲಗೆ ಬೆರಳಿನಿಂದ ಬಡಿಯಿರಿ : ಕಲ್ಲಂಗಡಿ ಖರೀದಿ ಮಾಡುವಾಗ ಅದನ್ನು ಒಮ್ಮೆ ಕೈಯಲ್ಲಿ ಎತ್ತಿಕೊಂಡು ಬೆರಳುಗಳ ಸಹಾಯದಿಂದ ಸಣ್ಣದಾಗಿ ಬಡಿಯಿರಿ. ಈ ವೇಳೆ ಜೋರಾಗಿ ಶಬ್ದ ಬಂದರೆ ಹಣ್ಣು ಸಿಹಿಯಾಗಿದೆ ಎಂದರ್ಥ.
ಸಣ್ಣ ರಂಧ್ರಗಳಿಲ್ಲದ ಹಣ್ಣನ್ನು ಆಯ್ಕೆ ಮಾಡಿ : ಕಲ್ಲಂಗಡಿ ಕೊಳ್ಳುವಾಗ ಗಮನಿಸಬೇಕಾದದ್ದು ರಂಧ್ರಗಳಿದೆಯೇ ಎಂದು. ಹಣ್ಣು ಬೇಗ ಬೆಳೆಯಲಿ ಎಂದು ಹಾನಿಕಾರಕ ಹಾರ್ಮೋನ್ ಗಳ ಚುಚ್ಚುಮದ್ದುಗಳನ್ನು ಇಂಜೆಕಕ್ಟ್ ಮಾಡುತ್ತಾರೆ. ರಂಧ್ರಗಳಿಲ್ಲದೇ ಇದ್ದರೆ ಆ ಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣು ಮಾಡಲಾಗಿದೆ ಎಂದರ್ಥ.
ಆಕಾರ ನೋಡಿ ಖರೀದಿ ಮಾಡಿ : ಕಲ್ಲಂಗಡಿ ಹಣ್ಣು ಖರೀದಿ ಮಾಡುವಾಗ ಮೊದಲು ನೋಡಬೇಕಾಗಿರುವುದು ಆಕಾರ. ಮೊಟ್ಟೆಯ ಆಕಾರದ ಕಲ್ಲಂಗಡಿಗಳನ್ನೇ ಖರೀದಿಸಿ, ಇದು ಹೆಚ್ಚು ಸಿಹಿಯಾಗಿರುತ್ತವೆ. ವೃತ್ತಾಕಾರದಲ್ಲಿರುವ ಕಲ್ಲಂಗಡಿ ಸಿಹಿಯಾಗಿ ಹಾಗೂ ರುಚಿಯಾಗಿರುವುದಿಲ್ಲ
ಹಣ್ಣು ಹಳದಿಯಾಗಿಯೇ ನೋಡಿ : ಹೆಚ್ಚಿನ ಜನರು ಕಲ್ಲಂಗಡಿ ಹಣ್ಣಿನ ಹೊರಭಾಗ ಹಸಿರು ಬಣ್ಣದಲ್ಲಿಯೇ ಎಂದು ನೋಡಿ ಅದನ್ನೇ ಖರೀದಿ ಮಾಡುತ್ತಾರೆ. ಆದರೆ ಈ ಹಣ್ಣನ್ನು ಖರೀದಿ ಮಾಡುವಾಗ ಆ ಹಣ್ಣಿನ ಹೊರಭಾಗವು ಹಳದಿ ಬಣ್ಣದಲ್ಲಿಯೇ ಇದೆಯೇ ಒಂದು ನೋಡುವುದು ಮುಖ್ಯ. ಹೊರಭಾಗವು ತಿಳಿ ಹಳದಿ ಬಣ್ಣದಲ್ಲಿದ್ದರೆ ಆ ಕಲ್ಲಂಗಡಿ ಸಿಹಿಯಾಗಿದ್ದು ಒಳಭಾಗವು ಕೆಂಪು ಬಣ್ಣದಲ್ಲಿರುತ್ತದೆ. ಈ ಹಣ್ಣಿನ ಕೆಳಭಾಗದಲ್ಲಿ ಹೆಚ್ಚು ಹಳದಿ ಕಲೆಗಳು ಇದ್ದರೆ, ಹಣ್ಣು ಸಿಹಿಯಾಗಿರುತ್ತದೆ.
ತೂಕದ ಬಗ್ಗೆ ಗಮನ ಕೊಡಿ : ಮಾಗಿದ ಕಲ್ಲಂಗಡಿ ಹಣ್ಣು ಗಾತ್ರಕ್ಕಿಂತ ಭಾರವಾಗಿರುತ್ತದೆ. ಈ ಹಣ್ಣಿನಲ್ಲಿ ನೀರಿನಾಂಶ ಅಧಿಕವಿರುತ್ತದೆ. ಹೆಚ್ಚು ಭಾರವಿರುವ ಹಣ್ಣನ್ನು ಖರೀದಿ ಮಾಡಿ, ಇದು ರಸಭರಿತ, ಸಿಹಿ ಹಾಗೂ ರುಚಿಕರವಾಗಿರುತ್ತದೆ.