ಸಾಮಾನ್ಯವಾಗಿ ಮಳೆಗಾಲಕ್ಕೂ ಮುನ್ನ ಹೆಚ್ಚಿನ ಪ್ರಮಾಣದಲ್ಲಿ ಬೇಳೆ ಕಾಳುಗಳನ್ನು ಶೇಖರಣೆ ಮಾಡಲಾಗುತ್ತದೆ. ಮಳೆಗಾಲದಲ್ಲಿ ಬೇಳೆ ಕಾಳುಗಳನ್ನು ಕೊಂಡರೆ ಅದನ್ನು ರಕ್ಷಣೆ ಮಾಡುವುದು ಕಷ್ಟ ಎಂದು. ಹೆಚ್ಚು ಖರ್ಚು ಮಾಡುವ ಅಗತ್ಯವೂ ಇಲ್ಲ. ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿದರೆ ಸಾಕು.
ಹಾಗಿದ್ದರೆ, ಬೇಳೆ ಕಾಳು ಗಳಲ್ಲಿ ಹುಳಗಳಾಗದಂತೆ ಬಹಳ ದಿನಗಳವರೆಗೆ ಕಾಪಾಡಲು ಏನು ಮಾಡಬೇಕು ನೋಡೋಣ.
ಆದರೆ ಅಂತಹ ಸಮಯದಲ್ಲೂ ಕೂಡ ಬೇಳೆಕಾಳುಗಳಿಗೆ ಹುಳು ಹಿಡಿಯುತ್ತದೆ, ಬೇಳೆ ಕಾಳುಗಳಲ್ಲಿ ಆಗುವ ಹುಳಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಮನೆಯಲ್ಲಿಯೇ ಸಿಗುವ ಈ ವಸ್ತುಗಳನು ಬಳಸಿಕೊಂಡು, ಬೆಲೆಯಲ್ಲಿ ಹುಳುಗಳಾಗದಂತೆ ಅದನ್ನು ಸಂರಕ್ಷಿಸಿ ಇಡಬಹುದು.
-ಬೇಳೆ ಕಾಳುಗಳನ್ನು ತಂದಾಗ ನೀರಿನಲ್ಲಿ ತೊಳೆದು ಎರಡು ದಿನಗಳ ಕಾಲ ಬಿಸಿಲಿನಲ್ಲಿಡಿ
-ಅರಿಶಿನದಿಂದ ಬೇಳೆಗಳಲ್ಲಿ ಹುಳು ಆಗದಂತೆ ನೋಡಿಕೊಳ್ಳಬಹುದಾಗಿದೆ. ಬೇಳೆ ಕಾಳುಗಳನ್ನು ಶೇಖರಿಸಿಡುವ ಡಬ್ಬಿಯಲ್ಲಿ ಅರಶಿನದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಇಡಿ. ಹೀಗೆ ಮಾಡುವುದರಿಂದ ದ್ವಿದಳ ಧಾನ್ಯಗಳು ಸುರಕ್ಷಿತವಾಗಿರುತ್ತದೆ.
-ಬೆಳ್ಳುಳ್ಳಿಯು ಕೂಡ ಧಾನ್ಯಗಳಲ್ಲಿ ಹುಳುಗಳು ಆಗದಂತೆ ನೋಡಿಕೊಳ್ಳುತ್ತವೆ. ಯಾವ ಡಬ್ಬದಲ್ಲಿ ಬೇಳೆ ಧಾನ್ಯ , ಕಾಳುಗಳನ್ನು ಹಾಕಿ ಇಡುತ್ತೇವೆಯೋ ಅದೇ ಡಬ್ಬದಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಹಾಕಿಡಿ, ಇದರಿಂದ ಹುಳುಗಳು ಹತ್ತಿರ ಬರುವುದಿಲ್ಲ.
-ಹುಳುಗಳನ್ನು ದೂರ ಇಡಲು ಸಾಸಿವೆ ಎಣ್ಣೆಯನ್ನು ಉಪಯೋಗಿಸಲಾಗುತ್ತದೆ. ಈ ಎಣ್ಣೆಯನ್ನು ಬೇಳೆ ಕಾಳುಗಳಲ್ಲಿ ಕೀಟಗಳಾಗದಂತೆ ತಡೆಯಲು ಕೂಡಾ ಬಳಸಲಾಗುತ್ತದೆ.
-ಬೇಳೆಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಬೆರೆಸಿ ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ನಂತರ ಬೇಳೆಯನ್ನು ಡಬ್ಬಿಯಲ್ಲಿ ಹಾಕಿಡಬೇಕು.
-ಬೇಳೆ ಕಾಳುಗಳನ್ನು ಹಾಕಿಡುವ ಡಬ್ಬದಲ್ಲಿ ಪಲಾವ್ ಎಲೆಗಳನ್ನು ಹಾಕಿಟ್ಟರೂ ಕೂಡಾ ಬೇಳೆ ಕಾಳುಗಳಲ್ಲಿ ಹುಳಗಳಾಗದಂತೆ ನೋಡಿಕೊಳ್ಳಬಹುದು. ಪಲಾವ್ ಎಲೆಗಳ ಪರಿಮಳಕ್ಕೆ ಹುಳುಗಳಾಗುವುದಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ