ಮನೆಯಲ್ಲಿ ಹಿರಿಯರಿದ್ದರೆ ಬೆಳಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಏಳುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಇಂದಿನ ಯುವಕ ಯುವತಿಯರು ಆಗಲ್ಲ ಬಿಡಿ, ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುತ್ತಾರೆ. ಕೆಲವೊಮ್ಮೆ ರಾತ್ರಿ ಮಲಗುವ ಮುಂಚೆ ನಾಳೆಯಿಂದ ಬೆಳಗ್ಗೆ ಎದ್ದೆಳ್ಬೇಕು ಅಂದುಕೊಳ್ತಾರೆ. ಎಷ್ಟೇ ಮನಸ್ಸು ಮಾಡಿದ್ರು ಬೆಳಗ್ಗೆ ಬೇಗನೇ ಎದ್ದೇಳುವುದಕ್ಕೆ ಆಗುವುದೇ ಇಲ್ಲ. ಸೂರ್ಯೋದಯಕ್ಕಿಂತ ಮುಂಚಿತವಾಗಿ ಏಳುವುದು ಆರೋಗ್ಯಕ್ಕೆ ಮಾತ್ರವಲ್ಲ ನಿಮ್ಮ ಇತರೆ ಕೆಲಸಕ್ಕೂ ಒಳ್ಳೆಯದು ಎನ್ನಲಾಗಿದೆ.
* ರಾತ್ರಿಯ ವೇಳೆ ಬೇಗ ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ.
* ಹಾಸಿಗೆ ಮೇಲೆ ಮಲಗಿದ ನಂತರದಲ್ಲಿ ಮೊಬೈಲ್ ಬಳಸುವುದನ್ನು ನಿಲ್ಲಿಸಿ.
* ಮಲಗುವ ಸಮಯಕ್ಕೆ ಸುಮಾರು ಮೂವತ್ತು ನಿಮಿಷ ಮೊದಲು ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್ ದೂರವಿದ್ದರೆ ಒಳ್ಳೆಯದು
* ತಡ ರಾತ್ರಿ ಊಟ ಮಾಡುವ ಅಭ್ಯಾಸವನ್ನು ತಪ್ಪಿಸಿ. ಬೇಗನೇ ಊಟ ಮಾಡುವ ಅಭ್ಯಾಸವಿರಲಿ.
* ರಾತ್ರಿಯಲ್ಲಿ ಊಟದ ಪ್ರಮಾಣವೂ ಕಡಿಮೆಯಿರಲಿ, ಎಣ್ಣೆಯುಕ್ತ ಆಹಾರ ಸಿಹಿ ತಿಂಡಿಗಳ ಸೇವನೆ ಮಾಡಬೇಡಿ.
ಇದನ್ನೂ ಓದಿ: ಆರೋಗ್ಯಕ್ಕೆ ಉಪಕಾರಿ ಈ ಸೈಕ್ಲಿಂಗ್, ಆರೋಗ್ಯ ಲಾಭಗಳು ಹಲವು!
* ಊಟದ ಬಳಿಕ ಕಾಫಿ ಹಾಗೂ ಟೀ ಸೇವನೆಯನ್ನು ಮಾಡಲೇಬೇಡಿ.
* ಮುಂಜಾನೆ ಏಳುವ 15 ನಿಮಿಷ ಮೊದಲೇ ಅಲಾರಾಂ ಹೊಂದಿಸಿಕೊಳ್ಳಿ.
* ಅಲಾರಾಂ ಆಫ್ ಮಾಡಿ ಮಲಗುವ ಅಭ್ಯಾಸ ಬೇಡ. ಎಚ್ಚರ ಆದ ತಕ್ಷಣ ಮಾಡಬೇಕಾದ ಕೆಲಸವನ್ನು ಒಮ್ಮೆ ನೆನಪಿಸಿಕೊಂಡು ಹಾಸಿಗೆಯಿಂದ ಮೇಲೆಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: