ಮನೆಯಲ್ಲೇ ರೇಷ್ಮೆ ಸೀರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಮದುವೆ, ಗೃಹಪ್ರವೇಶ, ನಾಮಕರಣ, ಹಬ್ಬ ಹರಿದಿನಗಳು ಸೇರಿದಂತೆ ಯಾವುದೇ ಶುಭ ಸಮಾರಂಭಗಳಿಗೆ ರೇಷ್ಮೆ ಸೀರೆಯೇ ಧರಿಸದೇ ಹೋದರೆ ಹೇಗೆ ಅಲ್ಲವೇ. ಎಲ್ಲರ ಮಹಿಳೆಯರ ಫೇವರಿಟ್ ಸೀರೆಯಲ್ಲಿ ಒಂದು ಈ ರೇಷ್ಮೆ ಸೀರೆ. ಎಷ್ಟೇ ಮಾಡ್ರನ್ ಉಡುಗೆಯನ್ನು ತೊಟ್ಟರೂ ಈ ರೇಷ್ಮೆ ಸೀರೆಯತ್ತ ಎಲ್ಲರಿಗೂ ಒಲವು ಇರುತ್ತದೆ. ಆದರೆ ದುಬಾರಿ ಬೆಲೆಯ ರೇಷ್ಮೆ ಸೀರೆಯ ಮೇಲೆ ಒಂದು ಸಣ್ಣ ಕಲೆಯಾದರೂ ಕೂಡ ಅದರ ಅಂದ ಹಾಳಾಗುತ್ತದೆ. ಹೀಗಾಗಿ ಹೆಚ್ಚಿನವರು ನಾಜೂಕಾದ ಈ ಸೀರೆ ಕೊಳೆಯಾಗಿದ್ದರೆ ಡ್ರೈಕ್ಲೀನ್ ಗೆ ಕೊಡುತ್ತಾರೆ. ಕೆಲವರು ಮನೆಯಲ್ಲೇ ರೇಷ್ಮೆ ಸೀರೆಯನ್ನು ತೊಳೆಯುತ್ತಾರೆ. ಆದರೆ ಈ ರೀತಿ ತೊಳೆದರೆ ಅದು ಬಣ್ಣ ಮಾಸದೇ, ಹೊಸ ಸೀರೆಯಂತೆ ಕಾಣುತ್ತದೆ, ಈ ಕುರಿತಾದ ಕೆಲವು ಟಿಪ್ಸ್ ಇಲ್ಲಿದೆ.

ರೇಷ್ಮೆ ಸೀರೆ
ರೇಷ್ಮೆ ಸೀರೆ (Silk Saree) ಗೂ ಹೆಣ್ಣು ಮಕ್ಕಳಿಗೂ ಅವಿನಾಭಾವ ನಂಟಿದೆ. ಎಷ್ಟೇ ಒಳ್ಳೆಯ ಸೀರೆಯಿದ್ದರೂ ಸರಿಯೇ ರೇಷ್ಮೆ ಸೀರೆಗೆ ಸರಿಸಾಟಿ ಯಾವುದು ಇಲ್ಲ. ಹೀಗಾಗಿ ಒಂದಾದರೂ ದುಬಾರಿ ಬೆಲೆಯ ರೇಷ್ಮೆ ಸೀರೆ ಖರೀದಿಸಬೇಕೆನ್ನುವ ಆಸೆ ಹೆಣ್ಣು ಮಕ್ಕಳಿಗೆ ಇರುತ್ತದೆ. ಹೀಗಾಗಿ ಅಲ್ಪ ಸ್ವಲ್ಪ ಹಣ ಕೂಡಿಸಿಟ್ಟು ಹಬ್ಬ ಹರಿದಿನಗಳು ಹತ್ತಿರ ಬರುತ್ತಿದ್ದಂತೆ ರೇಷ್ಮೆ ಸೀರೆ ಖರೀದಿ ಮಾಡುತ್ತಾರೆ. ಇಂತಹ ಸೀರೆಗಳನ್ನು ಅಷ್ಟೇ ಜೋಪಾನವಾಗಿಟ್ಟುಕೊಳ್ಳಬೇಕು. ಉಟ್ಟ ರೇಷ್ಮೆ ಸೀರೆಗಳನ್ನು ಈ ಕೆಲವು ಸಲಹೆ ಪಾಲಿಸಿದ್ರೆ ಸೀರೆಯೂ ಹೊಸದರಂತೆಯೇ ಇರುತ್ತದೆ.
ರೇಷ್ಮೆ ಸೀರೆ ತೊಳೆಯುವಾಗ ಈ ವಿಧಾನ ಅನುಸರಿಸಿ
- ತಣ್ಣೀರು ಬಳಸಿ : ರೇಷ್ಮೆ ಸೀರೆ ತೊಳೆಯುವಾಗ ಬಿಸಿ ನೀರಿನ ಬದಲು ತಣ್ಣೀರು ಬಳಸಿ. ಬಿಸಿ ನೀರನ್ನು ಬಳಸಿದರೆ ಇದು ರೇಷ್ಮೆ ನಾರಿನ ಗುಣಮಟ್ಟ ಕಡಿಮೆ ಮಾಡಿ ಹೊಳಪು ಕುಂದುತ್ತದೆ. ತಣ್ಣೀರು ಬಟ್ಟೆಗೆ ಸೂಕ್ಷ್ಮವಾಗಿದ್ದು, ಹೊಳಪನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ.
- ಹೆಚ್ಚು ರಾಸಾಯನಿಕವಲ್ಲದ ಡಿಟರ್ಜೆಂಟ್ ಬಳಸಿ : ಸೂಕ್ಷ್ಮ ಬಟ್ಟೆಗಳಿಗಾಗಿ ವಿಶೇಷವಾಗಿ ತಯಾರಿಸಿದ ರಾಸಾಯನಿಕವಲ್ಲದ ಡಿಟರ್ಜೆಂಟ್ ಬಳಸಿ. ಆದರಿಂದಲೇ ರೇಷ್ಮೆ ಸೀರೆ ತೊಳೆಯಿರಿ. ಒಂದು ವೇಳೆ ಕಠಿಣ ಡಿಟರ್ಜೆಂಟ್‌ಗಳು ರೇಷ್ಮೆ ನಾರುಗಳನ್ನು ಹಾನಿಗೊಳಿಸಿ, ಸೀರೆಯ ಬಣ್ಣ ಮಾಸುವಂತೆ ಮಾಡುತ್ತದೆ.
- ಬ್ಲೀಚಿಂಗ್ ಮಾಡುವುದು ಒಳ್ಳೆಯದಲ್ಲ : ಕೆಲವರು ಸೀರೆಗಳ ಮೇಲೆ ಕಲೆಗಳಿದ್ದರೆ ಬ್ಲೀಚ್ ಬಳಸುತ್ತಾರೆ. ಆದರೆ ರೇಷ್ಮೆ ಸೀರೆಗಳಿಗೆ ಬ್ಲೀಚಿಂಗ್ ಮಾಡುವುದು ಸೀರೆಗಳ ಬಣ್ಣವನ್ನು ಮಸುಕಾಗಿಸಿ, ಬಟ್ಟೆಯ ಗುಣಮಟ್ಟವನ್ನು ಹಾಳು ಮಾಡುತ್ತದೆ. ಒಂದು ವೇಳೆ ಎಷ್ಟೇ ತೊಳೆದರೂ ಹೋಗದಿದ್ದಲ್ಲಿ ವೃತ್ತಿಪರ ಕ್ಲೀನರ್ ಬಳಿ ಕೊಡುವುದು ಉತ್ತಮ
- ಗಟ್ಟಿಯಾಗಿ ಉಜ್ಜಬೇಡಿ : ಕೆಲವರು ಬಟ್ಟೆ ತೊಳೆಯುವಾಗ ಗಟ್ಟಿಯಾಗಿ ಉಜ್ಜುತ್ತಾರೆ. ಆದರೆ ರೇಷ್ಮೆ ಸೀರೆಗಳನ್ನು ತೊಳೆಯುವಾಗ ಆ ರೀತಿ ಮಾಡಬಾರದು. ಬ್ರಷ್ ಬಳಸದೇ ಸೌಮ್ಯ ಹಾಗೂ ನಯವಾಗಿ ತೊಳೆಯಬೇಕು. ಸೀರೆ ತೊಳೆದ ಬಳಿಕ ಸೀರೆಯಲ್ಲಿ ಸಾಬೂನು ಗುಳ್ಳೆಯಿದೆಯೇ ಎಂದು ಒಮ್ಮೆ ನೋಡಿ. ಯಾವುದೇ ಕಾರಣಕ್ಕೂ ಸೀರೆಯನ್ನು ಎತ್ತಿ ಒಗೆಯಬೇಡಿ, ಹೀಗೆ ಮಾಡಿದ್ರೆ ಸೀರೆಗಳಲ್ಲಿ ಸುಕ್ಕುಗಳು ಉಳಿದು ಸೀರೆಯ ಅಂದ ಹಾಳಾಗುತ್ತದೆ.
- ಸೀರೆ ಒಣಗಿಸಲು ಈ ವಿಧಾನ ಬೆಸ್ಟ್ : ಮನೆಯಲ್ಲಿ ರೇಷ್ಮೆ ಸೀರೆಯನ್ನು ತೊಳೆದ ನಂತರದಲ್ಲಿ ಗಾಳಿಯಲ್ಲಿ ಒಣಗಿಸಿ. ಸೀರೆಯನ್ನು ನೇರ ಸೂರ್ಯನ ಬೆಳಕಿನಿಂದ ದೂರವಿಡುವುದು ಉತ್ತಮ. ನೇರ ಸೂರ್ಯನ ಬೆಳಕು ಬೀಳುವಲ್ಲಿ ಒಣಗಲು ಹಾಕಿದ್ರೆ ಸೀರೆಯ ಬಣ್ಣ ಮಸುಕಾಗುತ್ತದೆ. ಹೀಗಾಗಿ ಗಾಳಿಯಲ್ಲಿಯೇ ಒಣಗಿಸಿ ಬೇಕಿದ್ದರೆ ಇಸ್ತ್ರಿ ಮಾಡಿ ಇಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ನ




