Personality Test : ನಿಮ್ಮ ಕಾಲ್ಬೆರಳುಗಳ ಆಕಾರವೇ ವ್ಯಕ್ತಿತ್ವ ರಿವೀಲ್ ಮಾಡುತ್ತೆ
ಪ್ರತಿಯೊಬ್ಬ ವ್ಯಕ್ತಿಯ ಜೀವನಶೈಲಿ, ಸ್ವಭಾವ ಮತ್ತು ನಡವಳಿಕೆಯಲ್ಲಿ ಇನ್ನೊಬ್ಬರಿಗಿಂತ ಭಿನ್ನನಾಗಿರುತ್ತದೆ. ಹೀಗಾಗಿ ವ್ಯಕ್ತಿಯ ಪರಿಚಯವಾದಾಗ ಆತ ಹೇಗೆ ಎಂದು ತಿಳಿದುಕೊಂಡು ಸ್ನೇಹವನ್ನು ಮುಂದುವರೆಸುತ್ತಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಗುಣಸ್ವಭಾವವು ಆ ವ್ಯಕ್ತಿಯೂ ಹೇಗೆಂದು ತಿಳಿಯಲು ಸಹಾಯ ಮಾಡುತ್ತದೆ. ಅದರ ಹೊರತಾಗಿಯೂ ದೇಹದ ಅಂಗಗಳ ಆಕಾರವು ಕೂಡ ವ್ಯಕ್ತಿತ್ವದ ಕುರಿತು ಬಹಳಷ್ಟು ಹೇಳುತ್ತವೆ. ಕಾಲ್ಬೆರಳು ಆಕಾರವು ವ್ಯಕ್ತಿ ಹೇಗೆಂದು ಬಹಿರಂಗ ಪಡಿಸುತ್ತದೆ. ಹೀಗಾಗಿ ನಿಮ್ಮ ಕಾಲ್ಬೆರಳು ಯಾವ ಆಕಾರದಲ್ಲಿದೆ ಎನ್ನುವ ಆಧಾರದ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದಾಗಿದ್ದು ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಎಲ್ಲರಿಗೂ ತಿಳಿದಿರುವಂತೆ ನಮ್ಮ ದೇಹದ ಅಂಗಗಳು ಹೇಗಿವೆ ಎಂಬುದರ ಮೇಲೆ ವ್ಯಕ್ತಿತ್ವ (Personality) ನಿರ್ಧಾರವಾಗುತ್ತದೆ. ಹೌದು, ನಾವು ನಡೆದಾಡುವ ರೀತಿ, ಕುಳಿತುಕೊಳ್ಳುವ ರೀತಿ, ಮಲಗುವ ರೀತಿ, ತುಟಿ, ಮೂಗು, ಕಣ್ಣು, ಹಣೆ, ಕಿವಿ ಹಾಗೂ ಗಲ್ಲದ ಆಕಾರದಿಂದಲೂ ವ್ಯಕ್ತಿತ್ವ ಸ್ವಭಾವ ತಿಳಿಯಲು ಸಹಕಾರಿಯಾಗಿದೆ. ಕಾಲ್ಬೆರಳು ಆಕಾರವು ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ನಿಮ್ಮ ಕಾಲಿನ ಬೆರಳು ಹೇಗಿದೆ, ಹೆಬ್ಬೆರಳಿಗಿಂತ ಎರಡನೇ ಬೆರಳು ಉದ್ದ ಇದ್ಯಾ ಹೀಗೆ ಬೆರಳಿನ ಆಕಾರ ಯಾವ ರೀತಿ ಎಂದು ನೋಡಿ, ನೈಜ ವ್ಯಕ್ತಿತ್ವ ತಿಳಿಯಬಹುದು.
- ಈಜಿಪ್ಟಿಯನ್ ಬೆರಳು : ಕಾಲಿನ ಹೆಬ್ಬೆರಳು ಉದ್ದವಾಗಿ ದೊಡ್ಡವಾಗಿದ್ದು, ಉಳಿದ ನಾಲ್ಕು ಬೆರಳುಗಳು ಕಿರುಬೆರಳಿನತ್ತ ವಾಲಿಕೊಂಡಿದ್ದರೆ ಇದನ್ನು ಈಜಿಪ್ಟಿಯನ್ ಬೆರಳು ಎಂದು ಕರೆಯುತ್ತಾರೆ. ಈ ರೀತಿಯಿದ್ದವರು ಶಕ್ತಿಯುತವಾದ ತೇಜಸ್ಸನ್ನು ಹೊಂದಿದ್ದು, ಎಲ್ಲರನ್ನು ಆಕರ್ಷಿಸುತ್ತಾರೆ. ಸಮಾಜದಲ್ಲಿ ಗುರುತಿಸಿಕೊಳ್ಳುವ ಕಾರಣ ಎಲ್ಲರೂ ಈ ವ್ಯಕ್ತಿಗಳನ್ನು ಗೌರವದಿಂದ ಕಾಣುತ್ತಾರೆ. ಮಾತಿನಲ್ಲಿ ಹಾಗೂ ಇನ್ನಿತ್ತರ ವಿಷಯಗಳಲ್ಲಿ ಇವರನ್ನು ಎದುರು ಹಾಕಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂಗೋಪಿಗಳಾಗಿದ್ದು ಕೋಪ ಬಂದರೆ ಯಾವುದರ ಬಗ್ಗೆಯೂ ಯೋಚಿಸದೇ ವರ್ತಿಸುತ್ತಾರೆ. ಎಷ್ಟು ಒಳ್ಳೆಯವರು ಕೋಪದ ವಿಷಯದಲ್ಲಿ ಅಷ್ಟೇ ಕೆಟ್ಟವರಾಗಿರುತ್ತಾರೆ.
- ರೋಮನ್ ಕಾಲ್ಬೆರಳು : ಹೆಬ್ಬೆರಳು ಸೇರಿದಂತೆ ಮೊದಲ ಮೂರು ಬೆರಳು ಒಂದೇ ಉದ್ದವಿದ್ದು, ಇನ್ನು ಉಳಿದ ಎರಡು ಬೆರಳು ಗಿಡ್ಡವಿದ್ದರೆ ಅದು ರೋಮನ್ ಕಾಲ್ಬೆರಳು. ಕಾಲ್ಬೆರಳುಗಳು ಈ ರೀತಿ ಆಕಾರವಿದ್ದರೆ ಶ್ರಮಜೀವಿಗಳು, ಜೀವನದಲ್ಲಿ ಪ್ರತಿಹಂತದಲ್ಲಿಯೂ ಕಷ್ಟ ಪಟ್ಟು ದುಡಿದು ಯಶಸ್ಸು ಕಾಣುತ್ತಾರೆ. ಆದರೆ ತಾನು ಅಂದುಕೊಂಡಂತೆ ಬದುಕಬೇಕೆನ್ನುವ ಛಲ ಇವರಲ್ಲಿ ಇರುತ್ತದೆ. ಇತತರಿಗಿಂತ ತಮ್ಮ ಮೇಲೆ ಹೆಚ್ಚಿನ ನಂಬಿಕೆ ಹೊಂದಿದ್ದು ಎದುರಾಗುವ ಕಷ್ಟಗಳನ್ನು ಒಬ್ಬಂಟಿಯಾಗಿಯೇ ಎದುರಿಸುತ್ತಾರೆ.
- ಗ್ರೀಕ್ ಕಾಲ್ಬೆರಳು : ಕಾಲಿನ ಮಧ್ಯದ ಬೆರಳು ಉಳಿದ ಬೆರಳುಗಳಿಗಿಂತ ಉದ್ದವಿದ್ದರೆ ಅದನ್ನು ಗ್ರೀಕ್ ಕಾಲ್ಬೆರಳು ಎಂದರ್ಥ. ಈ ರೀತಿಯಿದ್ದರೆ ಜೀವನ ಹಾಗೂ ಕೆಲಸಗಳ ನಡುವೆ ಸಮತೋಲನ ಕಾಯ್ದುಕೊಂಡು ತಮ್ಮದೇ ಹಾದಿಯಲ್ಲಿ ಸಾಗಿ ಯಶಸ್ಸು ಗಳಿಸುತ್ತಾರೆ. ನಿಖರ ಹಾಗೂ ತಾರ್ಕಿಕ ಚಿಂತನೆಯಿಂದಾಗಿ ಎಲ್ಲರನ್ನು ಬೆರಗು ಮೂಡಿಸುತ್ತಾರೆ. ವೃತ್ತಿ ಹಾಗೂ ವೈಯುಕ್ತಿಕ ಜೀವನದಲ್ಲಿ ಇವರ ಕಠಿಣ ಪರಿಶ್ರಮಕ್ಕೆ ಯಶಸ್ಸು ದೊರೆಯುತ್ತದೆ. ತನ್ನ ಸುತ್ತಮುತ್ತಲಿನವರಿಗೆ ಸಲಹೆ ನೀಡುವ ಮೂಲಕ ಅವರನ್ನು ಮುನ್ನಡೆಸಿಕೊಂಡು ಹೋಗುವ ಮನೋಭಾವವಿರುತ್ತದೆ.
- ಚೌಕಾಕಾರದ ಪಾದ : ಹೆಬ್ಬೆರಳು ಸೇರಿದಂತೆ ಎಲ್ಲಾ ಕಾಲ್ಬೆರಳುಗಳು ಸಮಾನವಾಗಿದ್ದರೆ ಅದು ಚೌಕಾಕಾರದ ಪಾದ. ಈ ರೀತಿ ಕಾಲ್ಬೆರಳುಗಳಿದ್ದರೆ ಈ ವ್ಯಕ್ತಿಗಳು ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ಹೆಚ್ಚು ಪ್ರಾಮಾಣಿಕರಾಗಿದ್ದು , ನಿರ್ಧಾರ ಕೈಗೊಳ್ಳುವ ಬಾರಿ ಜಾಗರೂಕರಾಗಿರುತ್ತಾರೆ. ನಿರ್ಧಾರ ತೆಗೆದುಕೊಳ್ಳುವಾಗ ಆಲೋಚಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಯಾವುದೇ ಕೆಲಸಕಾರ್ಯಗಳಲ್ಲಿ ಸಂಪೂರ್ಣ ಮನಸ್ಸಿನಿಂದ ತೊಡಗಿಕೊಳ್ಳುತ್ತಾರೆ. ಶಾಂತ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ. ಯಾರ ಪ್ರಭಾವಕ್ಕೂ ಅಷ್ಟು ಸುಲಭವಾಗಿ ಒಳಗಾಗುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




