AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Civil Defence Day 2025: ವಿಶ್ವ ನಾಗರಿಕ ರಕ್ಷಣಾ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

ನೈಸರ್ಗಿಕ ವಿಕೋಪಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಾಗರಿಕರಿಗೆ ಕಲಿಸುವ ಅಭ್ಯಾಸವಾಗಿದ್ದು, ಸಿವಿಲ್ ಡಿಫೆನ್ಸನ್ನು ನಾಗರಿಕ ರಕ್ಷಣೆ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಮಾರ್ಚ್ 1 ರಂದು ಜಾಗತಿಕ ಸಿವಿಲ್‌ ಡಿಫೆನ್ಸ್‌ ದಿನ ಅಥವಾ ವಿಶ್ವ ನಾಗರಿಕ ರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವು ನಾಗರಿಕ ರಕ್ಷಣಾ ಪಡೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಹಾಗಾದ್ರೆ ಈ ದಿನದ ಆಚರಣೆ ಯಾವಾಗ ಶುರುವಾದದ್ದು ಹೇಗೆ? ಈ ದಿನದ ಮಹತ್ವ ಸೇರಿದಂತೆ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.

World Civil Defence Day 2025: ವಿಶ್ವ ನಾಗರಿಕ ರಕ್ಷಣಾ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 28, 2025 | 5:35 PM

Share

ಕೆಲವೊಮ್ಮೆ ಆಕಸ್ಮಿಕವಾಗಿ ಅವಘಡಗಳು, ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತದೆ. ಈ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜೊತೆಗೆ ಬೇರೆಯವರನ್ನು ರಕ್ಷಿಸಿ ಅವರ ಜೀವವನ್ನು ಉಳಿಸುವುದು ಕೂಡ ಮುಖ್ಯ. ಆಕಸ್ಮಿಕವಾಗಿ ಸಂಭವಿಸುವ ಪ್ರಕೃತಿ ವಿಕೋಪ, ಅಗ್ನಿ ದುರಂತ, ರಸ್ತೆ ಅಪಘಾತ, ಕಟ್ಟಡ ಕುಸಿತ ಹೀಗೆ ಅನಾಹುತಗಳಾದಾಗ ಜನರನ್ನು ರಕ್ಷಿಸುವಲ್ಲಿ ಸಿವಿಲ್ ಡಿಫೆನ್ಸ್ ಸಿಬ್ಬಂದಿಗಳು ತಮ್ಮ ಪ್ರಾಣವನ್ನೇ ಪಣಕಿಡುತ್ತಾರೆ. ಹೀಗಾಗಿ ಅನಿರೀಕ್ಷಿತ ತುರ್ತು ಪರಿಸ್ಥಿತಿಗಳಿಂದ ವ್ಯಕ್ತಿಗಳು ಮತ್ತು ಅವರ ವಸ್ತುಗಳನ್ನು ರಕ್ಷಿಸುವಲ್ಲಿ ನಾಗರಿಕ ರಕ್ಷಣಾ ತಂತ್ರಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ವಿಶ್ವ ನಾಗರಿಕ ರಕ್ಷಣಾ ದಿನ (World Evil Defence Day) ವನ್ನು ಆಚರಿಸಲಾಗುತ್ತದೆ.

ವಿಶ್ವ ನಾಗರಿಕ ರಕ್ಷಣಾ ದಿನದ ಇತಿಹಾಸ

1931 ರಲ್ಲಿ ಸರ್ಜನ್ ಜನರಲ್ ಜಾರ್ಜ್ ಸೇಂಟ್ ಪಾಲ್ ಅವರು ಜಿನೀವಾ ವಲಯಗಳ ಸಂಘವನ್ನು ಸ್ಥಾಪಿಸಿದರು. ಆದರೆ ಈ ಸಂಘವು ಐಎಸ್‌ಡಿಒ (ಸಿವಿಲ್ ಡಿಫೆನ್ಸ್ ಅನ್ನು ನಾಗರಿಕ ರಕ್ಷಣೆ)ಯಾಗಿ ಬದಲಾಯಿತು. ಇತ್ತ ಐಎಸ್‌ಡಿಒ ದ ಪ್ರಸ್ತುತ ಸಂವಿಧಾನವನ್ನು 1972 ರಲ್ಲಿ ಸಂಸ್ಥೆಯ ಸದಸ್ಯ ರಾಜ್ಯಗಳಿಂದ ಅನುಮೋದನೆಯು ಸಿಕ್ಕಿತು. ವಿಶ್ವ ನಾಗರಿಕ ರಕ್ಷಣೆ ಪಡೆ ದಿನವನ್ನು 1990 ರಲ್ಲಿ ಇಂಟರ್‌ನ್ಯಾಷನಲ್ ಸಿವಿಲ್ ಡಿಫೆನ್ಸ್ ಆರ್ಗನೈಸೇಶನ್ ಜಾಗತಿಕ ರಜಾದಿನವೆಂದು ಘೋಷಣೆ ಮಾಡಿತ್ತು. ಆದರೆ ವಿಶ್ವ ನಾಗರಿಕ ಪಡೆ ದಿನವನ್ನು ಅಂತಾರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆ ಆರಂಭಿಸಿದ್ದು, ಹೀಗಾಗಿ ಪ್ರತಿ ವರ್ಷವೂ ಮಾರ್ಚ್ 1 ರಂದು ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: A to Z ವರೆಗಿನ ನಿಮ್ಮ ಹೆಸರಿನ ಮೊದಲ ಅಕ್ಷರದಲ್ಲಿದೆ ನಿಮ್ಮ ವ್ಯಕ್ತಿತ್ವ

984680, 984588, 984542, 984516

ವಿಶ್ವ ನಾಗರಿಕ ರಕ್ಷಣಾ ದಿನದ ಮಹತ್ವ

ಪ್ರಕೃತಿ ವಿಕೋಪ, ಅಗ್ನಿ ದುರಂತ, ರಸ್ತೆ ಅಪಘಾತ ಸೇರಿದಂತೆ ಇನ್ನಿತ್ತರ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಸ್ಪಂದಿಸುವಲ್ಲಿ ನಾಗರಿಕ ರಕ್ಷಣಾ ತಂಡವು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನೈಸರ್ಗಿಕ ವಿಕೋಪಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಾಗರಿಕರಿಗೆ ಕಲಿಸುವುದು. ಅದಲ್ಲದೇ ಈ ವಿಪತ್ತುಗಳ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ವ್ಯಕ್ತಿಗಳ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವಲ್ಲಿ ನಾಗರಿಕ ರಕ್ಷಣಾ ನಿರ್ವಹಿಸಿದ ನಿರ್ಣಾಯಕ ಪಾತ್ರವನ್ನು ಈ ದಿನ ಎತ್ತಿಹಿಡಿಯಲಾಗುತ್ತದೆಂ ತುರ್ತು ಪರಿಸ್ಥಿತಿಗಳಲ್ಲಿ ತಮ್ಮ ಆತ್ಮರಕ್ಷಣೆ ಜೊತೆಗೆ ವಿಪತ್ತು ತಡೆಗಟ್ಟುವಿಕೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ತರದ್ದಾಗಿದೆ. ಈ ದಿನದಂದು ಶಾಲಾ ಕಾಲೇಜುಗಳಲ್ಲಿ ವಿಪತ್ತುಗಳು ಸಂಭವಿಸಿದಾಗ ಯಾವ ರೀತಿಯಲ್ಲಿ ರಕ್ಷಿಸಿಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ಕಾರ್ಯಗಾರಗಳು ಹಾಗೂ ರಕ್ಷಣಾ ಸಿಬ್ಬಂದಿಗಳಿಂದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ