Idli Chaat: ನಿನ್ನೆ ಮಾಡಿದ ಇಡ್ಲಿ ಉಳಿದಿದ್ದರೆ ಬಿಸಾಡಬೇಡಿ, ಬದಲಾಗಿ ಈ ರೀತಿಯಾಗಿ ರುಚಿಯಾದ ಚಾಟ್​​ ತಯಾರಿಸಿ

|

Updated on: Mar 21, 2023 | 1:10 PM

ಅಯ್ಯೋ ನಂಗೆ ಇಡ್ಲಿ ಬೇಡ ಅನ್ನುವ ನಿಮ್ಮ ಮಕ್ಕಳಿಗೆ, ಇಡ್ಲಿಯನ್ನೇ ಚಾಟ್ಸ್​​​ ರೂಪದಲ್ಲಿ ನೀಡಿ. ನೀವು ಈ ರೀತಿಯಾಗಿ ನೀಡುವುದರಿಂದ ಖಂಡಿತವಾಗಿಯೂ ಇಷ್ಟ ಪಟ್ಟು ತಿನ್ನುತ್ತಾರೆ.

Idli Chaat: ನಿನ್ನೆ ಮಾಡಿದ ಇಡ್ಲಿ ಉಳಿದಿದ್ದರೆ ಬಿಸಾಡಬೇಡಿ, ಬದಲಾಗಿ ಈ ರೀತಿಯಾಗಿ ರುಚಿಯಾದ ಚಾಟ್​​ ತಯಾರಿಸಿ
ಇಡ್ಲಿ ಚಾಟ್ ರೆಸಿಪಿ
Image Credit source: Geetha's Kitchen
Follow us on

ಅಯ್ಯೋ ನಂಗೆ ಇಡ್ಲಿ ಬೇಡ ಅನ್ನುವ ನಿಮ್ಮ ಮಕ್ಕಳಿಗೆ, ಇಡ್ಲಿಯನ್ನೇ ಚಾಟ್ಸ್​​​ ರೂಪದಲ್ಲಿ ನೀಡಿ. ನೀವು ಈ ರೀತಿಯಾಗಿ ನೀಡುವುದರಿಂದ ಖಂಡಿತವಾಗಿಯೂ ಇಷ್ಟ ಪಟ್ಟು ತಿನ್ನುತ್ತಾರೆ. ಇಡ್ಲಿ ಸಾಂಬಾರ್ ಜೀರ್ಣಕ್ರಿಯೆ ಸರಾಗವಾಗಲು ಸಹಾಯ ಮಾಡುತ್ತದೆ ಎಂದು ಪೌಷ್ಟಿಕತಜ್ಞ ಶಿಲ್ಪಾ ಅರೋರಾ ಸಲಹೆ ನೀಡುತ್ತಾರೆ. ನೀವು ಈಗಾಗಲೇ ಇಡ್ಲಿ ತಯಾರಿಸಿಟ್ಟಿದ್ದರೆ, ಅಥವಾ ನಿನ್ನೆ ಮಾಡಿದ ಇಡ್ಲಿ ಉಳಿದಿದ್ದರೆ ಬಿಸಾಡಬೇಡಿ, ಬದಲಾಗಿ ಈ ರೀತಿಯಾಗಿ ರುಚಿಯಾದ ಚಾಟ್​​ ತಯಾರಿಸಿ. ಅತ್ಯಂತ ಸುಲಭವಾಗಿ ಕೇವಲ 30 ನಿಮಿಷಗಳಲ್ಲಿ ನೀವಿದನ್ನು ತಯಾರಿಸಬಹುದಾಗಿದೆ. ಇಲ್ಲಿದೆ ನೋಡಿ ಪಾಕವಿಧಾನ.

ಇಡ್ಲಿ ಚಾಟ್ ರೆಸಿಪಿ:

ಇಡ್ಲಿ ಚಾಟ್ ಮಾಡಲು ಬೇಕಾಗುವ ಪದಾರ್ಥಗಳು:

  • 5 ಇಡ್ಲಿ
  • 1 ಟೀ ಚಮಚ ಕಾಶ್ಮೀರಿ ಮೆಣಸಿನ ಪುಡಿ
  • ಅಗತ್ಯಕ್ಕೆ ತಕ್ಕಷ್ಟು ಉಪ್ಪು
  • 1 ಕಪ್ ಮೊಸರು
  • 2 ಹಸಿ ಮೆಣಸಿನಕಾಯಿ
  • 1/2 ಕಪ್​​ ಕೊತ್ತಂಬರಿ ಸೊಪ್ಪು
  • 1 ಟೀ ಚಮಚ ಉದ್ದಿನ ಬೇಳೆ
  • 7-8 ಕರಿಬೇವಿನ ಎಲೆಗಳು
  • 3 ಚಮಚ ಅಕ್ಕಿ ಹಿಟ್ಟು
  • 1/2 ಟೀ ಚಮಚ ಇಂಗು
  • 1/2 ಕಪ್ ನೀರು
  • 1/2 ಕಪ್ ತುರಿದ ತೆಂಗಿನಕಾಯಿ
  • 1 ಇಂಚು ಶುಂಠಿ
  • 1/4 ಟೀ ಚಮಚ ಸಾಸಿವೆ
  • 2 ಈರುಳ್ಳಿ

ಇದನ್ನೂ ಓದಿ: ಗರಿಗರಿಯಾದ ಬಾಳೆಕಾಯಿ ಚಿಪ್ಸ್ ತಯಾರಿಸಲು ​​​ಈ ಸಲಹೆ ಪಾಲಿಸಿ

ಇಡ್ಲಿ ಚಾಟ್ ಮಾಡುವ ವಿಧಾನ:

ಹಂತ:1

ಇಡ್ಲಿಗಳನ್ನು ಒಂದೇ ಸಮನಾಗಿ ಅಂದರೆ ಒಂದು ಇಡ್ಲಿಯನ್ನು 3 ಅಥವಾ 4 ಭಾಗಗಳಾಗಿ ತುಂಡರಿಸಿ. ನಂತರ ಒಂದು ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಇಂಗು ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಈಗಾಗಲೇ ತುಂಡರಿಸಿಟ್ಟ ಇಡ್ಲಿಗಳನ್ನು ಸೇರಿಸಿ.

ಹಂತ: 2 

ನಂತರ ಒಂದು ಬಾಣಲೆಗೆ ತೆಂಗಿನಕಾಯಿ ಎಣ್ಣೆ ಆಥವಾ ನೀವು ಕರಿಯಲು ಬಳಸುವ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಅದಕ್ಕೆ ಬೆರೆಸಿಟ್ಟ ಇಡ್ಲಿಯನ್ನು ಸೇರಿಸಿ. ನಂತರ ಇದು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿ. ಡೀಪ್ ಫ್ರೈ ಮಾಡಿದ ನಂತರ ಒಂದು ತಟ್ಟೆಯಲ್ಲಿ ಹಾಕಿ ಬದಿಯಲ್ಲಿರಿಸಿ.

ಹಂತ 3: ತೆಂಗಿನಕಾಯಿ ಕೊತ್ತಂಬರಿ ಚಟ್ನಿ ತಯಾರಿಸಿ

ಈಗ ತುರಿದ ತೆಂಗಿನಕಾಯಿ, ಹಸಿಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಹಾಕಿ ಒಟ್ಟಿಗೆ ರುಬ್ಬಿಕೊಳ್ಳಿ. ಇದಾದ ಬಳಿಕ ಇದಕ್ಕೆ 2 ಚಮಚ ಕೊತ್ತಂಬರಿ ಸೊಪ್ಪಿನ ಪೇಸ್ಟ್​​ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ರುಚಿಗೆ ತಕ್ಕಂತೆ ಉಪ್ಪನ್ನು ಹಾಕಿ.

ಹಂತ 4: 

ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ಸ್ವಲ್ಪ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದರಲ್ಲಿ ಉದ್ದಿನ ಬೇಳೆ, ಸಾಸಿವೆ ಸೇರಿಸಿ. ಅವುಗಳನ್ನು ಕೆಲವು ಸೆಕೆಂಡುಗಳ ಕಾಲ ಹುರಿಯಿರಿ ಜೊತೆಗೆ ಈರುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಉರಿಯನ್ನು ಆಫ್ ಮಾಡಿ ಮತ್ತು ಹುರಿದ ಈರುಳ್ಳಿಯ ಮೇಲೆ ಒಂದು ಚಿಟಿಕೆ ಇಂಗು ಸೇರಿಸಿ. ಹುರಿದ ಇಡ್ಲಿಗಳನ್ನು ಮೊಸರಿಗೆ ಹಾಕಿ, ಹುರಿದ ಈರುಳ್ಳಿ ಸೇರಿಸಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಗೂ ಚಿಟಿಕೆ ಮೆಣಸಿನ ಪುಡಿಯಿಂದ ಅಲಂಕರಿಸಿ. ಈಗ ಇಡ್ಲಿ ಚಾಟ್ ಸವಿಯಲು ಸಿದ್ಧವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:08 pm, Tue, 21 March 23