ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲು ಪ್ರಮುಖವಾದುದು. ಆದ್ದರಿಂದ ಕೂದಲಿನ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿರುತ್ತದೆ. ನಿಮ್ಮ ಕೂದಲಿಗೆ ಒಳ್ಳೆಯ ರೀತಿಯಲ್ಲಿ ಪೋಷಣೆ ನೀಡುವುದು ಅತ್ಯಂತ ಅಗತ್ಯವಾಗಿದೆ. ನಿಮ್ಮ ಆಹಾರ ಪದ್ದತಿಯೂ ನಿಮ್ಮ ಕೂದಲಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಆದರೆ ಇಂದು ಕೂದಲಿನ ಆರೋಗ್ಯವನ್ನು ಕಾಪಾಡಲು ಒಂದು ಒಳ್ಳೆಯ ಸಲಹೆ ಇಲ್ಲಿದೆ. ರಾತ್ರಿ ಹೊತ್ತು ತಲೆಕೂದಲಿಗೆ ಸ್ನಾನ ಮಾಡಿ, ಕೂದಲನ್ನು ಹಾಗೆಯೇ ಒಣಗಿಸದೇ ಹಾಗೆಯೇ ಒದ್ದೆ ಕೂದಲಿನಲ್ಲಿ ಮಲಗುವ ಅಭ್ಯಾಸ ನಿಮಗಿದೆಯೇ? ಇಂತಹ ಅಭ್ಯಾಸ ನಿಮಗಿದ್ದರೇ ಈ ಕೂಡಲೇ ಬಿಟ್ಟು ಬಿಡಿ.
ಸಾಮಾನ್ಯವಾಗಿ ಮಲಗುವ ಮುನ್ನ ಸ್ನಾನ ಮಾಡುವುದು ತುಂಬಾ ಒಳ್ಳೆಯದು. ಯಾಕೆಂದರೆ ಇದು ನಿಮಗೆ ಉಲ್ಲಾಸವನ್ನು ನೀಡುತ್ತದೆ. ಜೊತೆಗೆ ದಿನ ಪೂರ್ತಿ ನಿಮ್ಮ ದೇಹದಲ್ಲಿನ ಬೆವರು ಮತ್ತು ಕೊಳೆಯನ್ನು ತೆಗೆದು ಹಾಕಲು ಸಹಾಯಕವಾಗಿದೆ. ಇದು ರಾತ್ರಿಯಿಡಿ ನಿಮ್ಮನ್ನು ಚೆನ್ನಾಗಿ ನಿದ್ರಿಸಲು ಸಹಾಯಮಾಡುತ್ತದೆ. ಆದರೆ ನೀವು ಕೂದಲನ್ನು ತೊಳೆದು ಹಾಗೆಯೇ ಒದ್ದೆ ಕೂದಲಿನಲ್ಲಿ ಮಲಗುತ್ತೀರಿ ಎಂಬುದಾದರೆ ಮೊದಲು ಈ ಅಭ್ಯಾಸವನ್ನು ಬಿಟ್ಟು ಬಿಡಿ.
ದುರ್ಬಲ ಕೂದಲು:
ಹೌದು, ನಿಮ್ಮ ಕೂದಲು ಒದ್ದೆಯಾಗಿರುವಾಗ ಅತ್ಯಂತ ದುರ್ಬಲವಾಗಿರುತ್ತದೆ. ಅದಕ್ಕಾಗಿಯೇ ಒಣಗುವ ಮೊದಲು ನೀವು ಎಂದಿಗೂ ಕೂದಲನ್ನು ಬಾಚಬಾರದು. ನೀವು ಒದ್ದೆ ಕೂದಲಿನೊಂದಿಗೆ ಮಲಗಲು ಹೋದರೆ ರಾತ್ರಿಯಿಡಿ ಕೂದಲು ಸಾಕಷ್ಟು ಚಲಿಸಿದರೆ ಕೂದಲು ಹೆಚ್ಚು ಸುಲಭವಾಗಿ ಒಡೆಯುತ್ತದೆ. ಆದ್ದರಿಂದ ಆದಷ್ಟು ರಾತ್ರಿ ಹೊತ್ತು ತಲೆಗೆ ಸ್ನಾನ ಮಾಡಿ ಒದ್ದೆ ಕೂದಲಿನಲ್ಲಿ ಮಲಗುವ ಅಭ್ಯಾಸವನ್ನು ಬಿಟ್ಟು ಬಿಡಿ. ಆದಾಗಿಯೂ ನೀವೂ ಮಲಗುವ ಹೊತ್ತಿನಲ್ಲಿ ಕೂದಲು ಒದ್ದೆ ಇದ್ದರೆ ಕೂದಲನ್ನು ಬನ್ ಅಥವಾ ಪೋನಿ ಟೈಲ್‌ನಲ್ಲಿ ಹಾಕಿ ಮಲಗಿ. ಇದರಿಂದಾಗಿ ನಿಮ್ಮ ಕೂದಲು ಒಡೆಯುವುದನ್ನು ತಡೆಗಟ್ಟಬಹುದು.
ಇದನ್ನು ಓದಿ: ತಲೆಯ ಬಿಳಿ ಕೂದಲನ್ನು ಕೃತಕ ಬಣ್ಣ ಬಳಸದೆ ನೈಸರ್ಗಿಕವಾಗಿ ಕಪ್ಪುಗೊಳಿಸಲು ಇಲ್ಲಿದೆ ಮನೆ ಮದ್ದು
ಬ್ಯಾಕ್ಟೀರಿಯಾ:
ಇದಲ್ಲದೆ, ಒದ್ದೆಯಾದ ಕೂದಲಿನೊಂದಿಗೆ ಮಲಗುವುದು ತುಂಬಾ ಅನೈರ್ಮಲ್ಯ. ಯಾಕೆಂದರೆ ನಿಮ್ಮ ಒದ್ದೆ ಕೂದಲಿನ ನೀರನ್ನು ದಿಂಬು ಹೀರಿಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ದಿಂಬಿನಲ್ಲಿ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದು. ಬೆವರು, ಸತ್ತ ಚರ್ಮದ ಕೋಶಗಳು ಮತ್ತು ತೈಲಗಳು ನಿಮ್ಮ ದಿಂಬಿನಲ್ಲಿ ಉಳಿದುಕೊಳ್ಳುತ್ತದೆ. ಇದರಿಂದಾಗಿ ವಾಸನೆಯ ಜೊತೆಗೆ ದಿಂಬಿನಲ್ಲಿ ಬ್ಯಾಕ್ಟೀರಿಯಾಗಳು ಉಂಟಾಗಲು ಕಾರಣವಾಗುತ್ತದೆ. ಆದ್ದರಿಂದ ಆದಷ್ಟು ನಿಮ್ಮ ಕೂದಲನ್ನು ಒಣಗಿಸಿ ಮಲಗಿ. ಇಲ್ಲವಾದಲ್ಲಿ ಬೆಳಗೆ ಎದ್ದು ತಲೆಗೆ ಸ್ನಾನ ಮಾಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:52 pm, Fri, 2 December 22