AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ 5 ಅಭ್ಯಾಸವನ್ನು ಬೆಳಿಗ್ಗೆ ಮಾಡಿದ್ರೆ, ಹೊಳೆಯುವ ಚರ್ಮ ಖಂಡಿತ

ಹೊಳೆಯುವ ಚರ್ಮ ಬೇಕು ಎಂದು ಪಾರ್ಲರ್​​ಗೆ ಹೋಗುವುದು, ಇನ್ನು ಅನೇಕ ರೀತಿಯ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುತ್ತೇವೆ. ಆದರೆ ಇದು ದೇಹ ಹಾಗೂ ಚರ್ಮದ ಆರೋಗ್ಯಕ್ಕೂ ಒಳ್ಳೆಯದಲ್ಲ. ಆ ಕಾರಣಕ್ಕೆ ಹೊಳೆಯುವ ಹಾಗೂ ಆರೋಗ್ಯಕರ ಚರ್ಮಕ್ಕಾಗಿ ಮನೆಯಲ್ಲೇ ಈ 5 ಅಭ್ಯಾಸಗಳನ್ನು ಪ್ರತಿದಿನ ಬೆಳಿಗ್ಗೆ ಪಾಲಿಸಿ. ಯಾವೆಲ್ಲ ಅಭ್ಯಾಸಗಳನ್ನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ.

ಈ 5 ಅಭ್ಯಾಸವನ್ನು ಬೆಳಿಗ್ಗೆ ಮಾಡಿದ್ರೆ, ಹೊಳೆಯುವ ಚರ್ಮ ಖಂಡಿತ
ಸಾಮದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Jul 02, 2025 | 7:14 PM

Share

ಹೊಳೆಯುವ ಮತ್ತು ಆರೋಗ್ಯಕರ ಚರ್ಮದ (glowing skin) ಬಗ್ಗೆ ಎಲ್ಲರೂ ಚಿಂತೆ ಮಾಡುವುದು ಸಹಜ, ಅದಕ್ಕಾಗಿ ಸಿಕ್ಕ-ಸಿಕ್ಕ ಅನಾರೋಗ್ಯಯುತವಾದ ವಸ್ತುಗಳನ್ನು ಉಪಯೋಗಿಸುತ್ತಾರೆ,  90% ರಷ್ಟು ಜನ ತಮ್ಮ ಚರ್ಮದ ಕಾಳಜಿಯನ್ನು ಮಾಡಿಯೇ ಮಾಡುತ್ತಾರೆ. ಆದರೆ ಅದನ್ನು ನೈಸರ್ಗಿಕ ರೀತಿಯಲ್ಲೇ ಮಾಡಿ ಎನ್ನುವುದು ಹಲವು ಸೌಂದರ್ಯ ತಜ್ಞರ ಸಲಹೆ. 40-50 ವಯಸ್ಸಲ್ಲೂ ಬ್ಯೂಟಿಯಾಗಿ ಕಾಣಬೇಕಾದರೆ, ನೈಸರ್ಗಿಕ ಹಾಗೂ ಮನೆಯಲ್ಲೇ ತಯಾರಿಸಿದ ಮದ್ದುಗಳನ್ನು ಉಪಯೋಗಿಸಬೇಕು. ಯಾಕೆಂದರೆ, ನೈಸರ್ಗಿಕವಾಗಿ ತಯಾರಿಸಿದ್ದು ನಿಧಾನವಾದ್ರು  ದೀರ್ಘಕಾಲದ ಫಲಿತಾಂಶವನ್ನು ನೀಡುತ್ತದೆ. ಅದಕ್ಕೆ ಬೆಳಿಗ್ಗೆ  ಈ 5 ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಇದು ದುಬಾರಿ ಉತ್ಪನ್ನಗಳು ಮತ್ತು ಪಾರ್ಲರ್ ಚಿಕಿತ್ಸೆಗಳಿಗಿಂತ ಹೆಚ್ಚು ಪರಿಣಾಮಕಾರಿ. ಈ ಅಭ್ಯಾಸಗಳನ್ನು ಪ್ರತಿದಿನ ಮಾಡಿದ್ರೆ ಮೇಕಪ್ ಇಲ್ಲದೆಯೂ ಚರ್ಮವು ಹೊಳೆಯುತ್ತದೆ. ಇದಕ್ಕೆ ದೊಡ್ಡ ಮಟ್ಟದ ಸಮಯ ಬೇಕಿಲ್ಲ, ಕೇವಲ 30 ನಿಮಿಷ ಸಾಕು. ಇಂದಿನಿಂದಲ್ಲೇ ಈ ಅಭ್ಯಾಸವನ್ನು ಮಾಡಿ.

ಹೊಳೆಯುವ ಚರ್ಮಕ್ಕೆ ಬೆಳಿಗ್ಗಿನ 5 ಅಭ್ಯಾಸಗಳು:

  • ಉಗುರು ಬೆಚ್ಚಗಿನ ನಿಂಬೆ ನೀರು: ಬೆಳಿಗ್ಗೆ ಎದ್ದ ತಕ್ಷಣ, ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ನಿಂಬೆಹಣ್ಣನ್ನು ಹಿಂಡಿ. ಈ ಪಾನೀಯ   ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸಲು ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಈ ನೀರಿಗೆ ಸ್ವಲ್ಪ ಜೇನುತುಪ್ಪವನ್ನು ಕೂಡ ಸೇರಿಸಬಹುದು. ಈ ನೀರು ರೋಗ ನಿರೋಧಕ ಶಕ್ತಿ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿ.
  • ತಣ್ಣೀರಿನಿಂದ ಮುಖ ತೊಳೆಯುವುದು: ರಾತ್ರಿ ಮಲಗಿದ ನಂತರ ಮುಖವು ಮಂದ ಮತ್ತು ದಣಿದಂತೆ ಕಾಣುತ್ತದೆ. ಹಾಗಾಗಿ ಬೆಳಿಗ್ಗಿನ ಹೊತ್ತು, ಅಂದರೆ ಎದ್ದ ತಕ್ಷಣ ತಣ್ಣೀರಿನಲ್ಲಿ ಮುಖ ತೊಳೆಯಿರಿ.ಇದು ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಇದರ ಜತೆಗೆ ತಾಜಾ ಅಲೋವೆರಾ ಜೆಲ್ ಅನ್ನು ಹಚ್ಚಿ, ಇದು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಕಲೆಗಳನ್ನು ತೆಗೆದು ಹಾಕುತ್ತದೆ. ರೋಸ್ ವಾಟರ್ ಇದ್ದರೆ, ಖಂಡಿತವಾಗಿಯೂ ಅದನ್ನು ಮುಖದ ಮೇಲೆ ಸಿಂಪಡಿಸಿ. ಇದು ನೈಸರ್ಗಿಕ ಟೋನರ್‌ನಂತೆ ಚರ್ಮದ ಮೇಲೆ ಕೆಲಸ ಮಾಡುತ್ತದೆ.
  • ಯೋಗ : ಬೆಳಿಗ್ಗೆ ದೇಹಕ್ಕೆ ಸಡಿಲವಾದ ಚಲನೆಬೇಕು. ಅದಕ್ಕಾಗಿ 15 ನಿಮಿಷಗಳ ನಡಿಗೆ, ಸ್ಟ್ರೆಚಿಂಗ್ ಅಥವಾ ಸೂರ್ಯ ನಮಸ್ಕಾರ ಮಾಡಿ, ಇದು ನಿಮ್ಮ ಚರ್ಮಕ್ಕೆ ಅತಿದೊಡ್ಡ ಹೊಳಪು ನೀಡುವ ವ್ಯಾಯಾಮವಾಗಿದೆ. ವ್ಯಾಯಾಮವು ಬೆವರಿನ ಮೂಲಕ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ, ರಕ್ತ ಪರಿಚಲನೆ ಹೆಚ್ಚಿಸುತ್ತದೆ, ಇದು ಮುಖಕ್ಕೆ ನೈಸರ್ಗಿಕ ಹೊಳೆಯುವ ಬಣ್ಣವನ್ನು ತರುತ್ತದೆ.
  • 5 ನಿಮಿಷ ಧ್ಯಾನ: ಚರ್ಮದ ಹೊಳಪು ಕೇವಲ ಕ್ರೀಮ್ ನಿಂದ ಮಾತ್ರ ಬರುವುದಿಲ್ಲ, ಬದಲಾಗಿ ಅದಕ್ಕೆ ಮನಸ್ಸಿನ ಶಾಂತಿಯೂ ಅಗತ್ಯ. ಒತ್ತಡವು ಮೊದಲು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಮೊಡವೆಗಳು, ಮಂದತೆ ಮತ್ತು ವರ್ಣದ್ರವ್ಯದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ  ಪ್ರತಿದಿನ ಬೆಳಿಗ್ಗೆ ಕೇವಲ 5 ನಿಮಿಷಗಳ ಕಾಲ ಕಣ್ಣು ಮುಚ್ಚಿ ಆಳವಾಗಿ ಉಸಿರಾಡುವುದರಿಂದ, ದೇಹ ಮತ್ತು ಚರ್ಮ ಎರಡೂ ವಿಶ್ರಾಂತಿ ಪಡೆಯುತ್ತವೆ.
  • ಖಾಲಿ ಹೊಟ್ಟೆಯ ಪೋಷಣೆ: ಆಂತರಿಕ ಪೋಷಣೆ ಪಡೆದಾಗ ಮಾತ್ರ ಚರ್ಮವು ಹೊಳೆಯುತ್ತದೆ. ಬೆಳಿಗ್ಗೆ ಹೊಟ್ಟೆ ಖಾಲಿಯಾಗಿರುತ್ತದೆ, ಆದ್ದರಿಂದ ಸರಿಯಾದ ಆಹಾರವನ್ನು ಸೇವಿಸುವುದರಿಂದ ನೇರ ಪರಿಣಾಮ ಬೀರುತ್ತದೆ. ಒಂದು ಸೇಬು, ನಾಲ್ಕೈದು ನೆನೆಸಿದ ಬಾದಾಮಿ ಮತ್ತು ಒಂದು ಲೋಟ ಎಳನೀರು ಚರ್ಮಕ್ಕೆ ಒಳ್ಳೆಯ ಹೊಳಪು ನೀಡುತ್ತದೆ. ಅವುಗಳಲ್ಲಿರುವ ವಿಟಮಿನ್ ಇ, ಸಿ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮದ ಕೋಶಗಳನ್ನು ಸರಿಪಡಿಸುತ್ತವೆ. ನೀವು ಹಾಲು ಕುಡಿದರೆ, ಅದಕ್ಕೆ ಅರಿಶಿನ ಅಥವಾ ಅಶ್ವಗಂಧವನ್ನು ಸೇರಿಸಿ ಕುಡಿಯಬಹುದು, ಇವು ಚರ್ಮದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ