Indian Flag
ಇದೇ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲು ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ ಸಹ ಹಮ್ಮಿಕೊಂಡಿದ್ದು, ಇದಕ್ಕಾಗಿ ಸಿದ್ಧತೆಗಳು ಬಹಳ ಉತ್ಸಾಹ ಮತ್ತು ಹುರುಪಿನಿಂದ ನಡೆಯುತ್ತಿದೆ. ಇನ್ನು ನಮ್ಮ ದೇಶದ ತ್ರಿವರ್ಣ ಧ್ವಜದಲ್ಲಿರುವ ಅಶೋಕ ಚಕ್ರ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಹೀಗಾಗಿ ಈ ಅಶೋಕ್ ಚಕ್ರವನ್ನು ಏಕೆ ಅಳವಡಿಸಲಾಯ್ತು? ಮತ್ತು ಅಶೋಕ ಚಕ್ರದಲ್ಲಿರುವ 24 ಗೆರೆಗಳು ಇದ್ದು, ಇವು ಏನನ್ನು ಸೂಚಿಸುತ್ತವೆ ಎನ್ನುವುದು ಈ ಕೆಳಗಿನಂತಿದೆ.
ಅಶೋಕ ಚಕ್ರದ ಬಗ್ಗೆ ಒಂದಿಷ್ಟು ತಿಳಿಯಿರಿ
ಅಶೋಕ ಚಕ್ರವು ‘ಧರ್ಮಚಕ್ರ’ದ ಚಿತ್ರಣ. ಅಶೋಕ ಚಕ್ರವನ್ನು ಕರ್ತವ್ಯದ ಚಕ್ರ ಎಂದೂ ಕರೆಯಲಾಗುತ್ತದೆ. ತ್ರಿವರ್ಣ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವನ್ನು ಜುಲೈ 22, 1947ರಂದು ಅಳವಡಿಸಲಾಯಿತು. ಜಲಂಧರ್‌ನ ಲಾಲಾ ಹಂಸರಾಜ್ ಅವರು ರಾಷ್ಟ್ರಧ್ವಜದಲ್ಲಿ ಚರಕ ಸೇರ್ಪಡಗೆ ಸಲಹೆ ನೀಡಿದ್ದರು. ಅದರಂತೆ ಮೊದಲು ಕೆಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜದಲ್ಲಿ ಚರಕವನ್ನು ಸೇರಿಸಲಾಗಿತ್ತು. ಭಾರತದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರವು ಬಿಳಿ ಬಣ್ಣದ ಹಿನ್ನೆಲೆಯಲ್ಲಿ ನೀಲಿ ಬಣ್ಣದಲ್ಲಿ ಚಿತ್ರಿತವಾಗಿದೆ. ವಾಸ್ತವವಾಗಿ ಭಾರತ ಸಂವಿಧಾನದ ಪೀಠಿಕೆ ಶುರುವಾಗುವುದೂ ಅಶೋಕ ಚಕ್ರದ ಮೂಲಕ.
ಸ್ವಾತಂತ್ರ್ಯ ಪೂರ್ವದಲ್ಲಿ ಧ್ವಜದ ಮಧ್ಯೆ ಮಹಾತ್ಮ ಗಾಂಧೀಜಿಯವರ ಚರಕ (ರಾಟೆ) ಇತ್ತು. ಆದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಕೆಲವೇ ದಿನಗಳ ಮುನ್ನ, ಅಂದರೆ ಜುಲೈ 22, 1947 ರಂದು ಸಂವಿಧಾನ ರಚನಾ ಸಭೆಯು ಚರಕದ ಬದಲಿಗೆ ಅಶೋಕ ಚಕ್ರವನ್ನು ಅಧಿಕೃತವಾಗಿ ಅಳವಡಿಸಿತು.
ಅಶೋಕ ಚಕ್ರದ ಗೆರೆಗಳು ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಪ್ರತಿನಿಧಿಸುವುದರಿಂದ ಈ ಚಕ್ರವನ್ನು ‘ಸಮಯದ ಚಕ್ರ’ ಎಂದೂ ಕೂಡಾ ಕರೆಯಲಾಗುತ್ತದೆ. ಅಶೋಕ ಚಕ್ರವನ್ನು ಜೈನ ಧರ್ಮ, ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದ ಧಾರ್ಮಿಕ ಸೂಚಕವಾಗಿ ರೂಪಿಸಲಾಗಿದೆ. ಅದಕ್ಕಾಗಿಯೇ ಅಶೋಕ ಚಕ್ರವನ್ನು ‘ಧರ್ಮದ ಚಕ್ರ’ ಎಂದು ಕೂಡಾ ಕರೆಯಲಾಗುತ್ತದೆ.
ಅಶೋಕ ಚಕ್ರದಲ್ಲಿರುವ ಗೆರೆಗಳು ಧೈರ್ಯ, ತಾಳ್ಮೆ, ಸ್ವಯಂ ತ್ಯಾಗ, ಸತ್ಯತೆ, ಸದಾಚಾರ, ಪ್ರೀತಿ, ಆಧ್ಯಾತ್ಮಿಕ ಜ್ಞಾನ, ನೈತಿಕತೆ, ಕಲ್ಯಾಣ, ಉದ್ಯಮ, ಸಮೃದ್ಧಿ ಮತ್ತು ನಂಬಿಕೆಯಂತಹ ತತ್ವಗಳನ್ನು ಪ್ರತಿನಿಧಿಸುತ್ತವೆ.
ಅಶೋಕ ಚಕ್ರದಲ್ಲಿರವ 24 ಗೆರೆಗಳು ಏನು ಹೇಳುತ್ತವೆ?
- ಮೊದಲ ಗೆರೆ: ಪ್ರೀತಿ (Love) – ಜಗತ್ತಿನ ಎಲ್ಲಾ ಜೀವಿಗಳ ಮೇಲೆ ಪ್ರೀತಿ ಇಡುವುದು.
- ಎರಡನೇ ಗೆರೆ: ಧೈರ್ಯ (Courage) – ಕಷ್ಟದ ಸಮಯದಲ್ಲಿ ಧೈರ್ಯದಿಂದ ಮುನ್ನಡೆಯುವುದು.
- ಮೂರನೇ ಗೆರೆ: ಶಾಂತಿ (Peace) – ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿಯನ್ನು ಕಾಪಾಡುವುದು.
- ನಾಲ್ಕನೇ ಗೆರೆ: ತ್ಯಾಗ (Magnanimity) – ಇತರರ ಒಳಿತಿಗಾಗಿ ಸ್ವಾರ್ಥವನ್ನು ತ್ಯಾಗ ಮಾಡುವುದು.
- ಐದನೇ ಗೆರೆ: ಸಂಯಮ (Self-control) – ಆಸೆ ಮತ್ತು ಕೋಪವನ್ನು ನಿಯಂತ್ರಣದಲ್ಲಿಡುವುದು.
- ಆರನೇ ಗೆರೆ: ಪ್ರಾಮಾಣಿಕತೆ (Righteousness) – ಸದಾ ಸತ್ಯದ ಹಾದಿಯಲ್ಲಿ ನಡೆಯುವುದು.
- ಏಳನೇ ಗೆರೆ: ನ್ಯಾಯ (Justice) – ಎಲ್ಲರಿಗೂ ಸಮಾನವಾಗಿ ನ್ಯಾಯ ಒದಗಿಸುವುದು.
- ಎಂಟನೇ ಗೆರೆ: ರುಣೆ (Mercy) – ದುರ್ಬಲರು ಮತ್ತು ಪ್ರಾಣಿಗಳ ಮೇಲೆ ದಯೆ ತೋರುವುದು.
- ಒಂಬತ್ತನೇ ಗೆರೆ: ಸಹನೆ (Gracefulness) – ಇತರರ ದೋಷಗಳನ್ನು ಕ್ಷಮಿಸುವ ಗುಣ ಹೊಂದುವುದು.
- ಹತ್ತನೇ ಗೆರೆ: ವಿನಮ್ರತೆ (Humility) – ನಡವಳಿಕೆಯಲ್ಲಿ ಅಹಂಕಾರವಿಲ್ಲದೆ ವಿನಯದಿಂದ ಇರುವುದು..
- ಹನ್ನೊಂದನೇ ಗೆರೆ: ಸೇವೆ (Service) – ದೇಶ ಮತ್ತು ಸಮಾಜದ ಸೇವೆಗೆ ಸದಾ ಸಿದ್ಧರಿರುವುದು.
- ಹನ್ನೆರಡನೇ ಗೆರೆ: ಸಹಾನುಭೂತಿ (Empathy) – ಇತರರ ಕಷ್ಟಗಳನ್ನು ತನ್ನದೇ ಎಂದು ತಿಳಿಯುವುದು.
- ಹದಿಮೂರನೇ ಗೆರೆ: ಜ್ಞಾನ (Sympathy) – ಸತ್ಪ್ರಜೆಗಳಾಗಲು ಜ್ಞಾನ ಮತ್ತು ವಿವೇಕವನ್ನು ಬೆಳೆಸಿಕೊಳ್ಳುವುದು
- ಹದಿನಾಲ್ಕನೇ ಗೆರೆ: ಶಿಸ್ತು (Self-governance) – ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಶಿಸ್ತು ಪಾಲಿಸುವುದು.
- ಹದಿನೈದನೇ ಗೆರೆ: ಸಮಾನತೆ (Equality) – ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದು.
- ಹದಿನಾರನೇ ಗೆರೆ: ಅಹಿಂಸೆ (Non-violence) – ಮನಸ್ಸು, ಮಾತು ಅಥವಾ ಕೃತಿಯಿಂದ ಯಾರಿಗೂ ನೋವು ಮಾಡದಿರುವುದು
- ಹದಿನೇಳನೇ ಗೆರೆ: ಸಹಕಾರ (Cooperation) – ಸಮಾಜದ ಉನ್ನತಿಗಾಗಿ ಎಲ್ಲರೊಂದಿಗೆ ಒಟ್ಟಾಗಿ ಕೆಲಸ ಮಾಡುವುದು.
- ಹದಿನೆಂಟನೇ ಗೆರೆ: ಕ್ಷಮೆ (Forbearance) – ಸೇಡಿನ ಭಾವನೆ ಇಲ್ಲದೆ ಇತರರನ್ನು ಕ್ಷಮಿಸುವುದು.
- ಹತ್ತೊಂಬತ್ತನೇ ಗೆರೆ: ಸ್ನೇಹ (Friendliness) – ಎಲ್ಲರೊಂದಿಗೆ ಆತ್ಮೀಯ ಸೌಹಾರ್ದತೆಯಿಂದ ಇರುವುದು.
- ಇಪ್ಪತ್ತನೇ ಗೆರೆ: ನೈತಿಕತೆ (Morality) – ಜೀವನದಲ್ಲಿ ಉನ್ನತ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು.
- ಇಪ್ಪತ್ತೊಂದನೇ ಗೆರೆ: ಪವಿತ್ರತೆ (Purity) – ಆಲೋಚನೆ ಮತ್ತು ನಡವಳಿಕೆಯಲ್ಲಿ ಶುದ್ಧತೆ ಕಾಯ್ದುಕೊಳ್ಳುವುದು
- ಇಪ್ಪತ್ತೆರಡನೇ ಗೆರೆ: ಉದಾರತೆ (Charity) – ಇಲ್ಲದವರಿಗೆ ದಾನ ಮತ್ತು ಸಹಾಯ ಮಾಡುವುದು.
- ಇಪ್ಪತ್ತಮೂರನೇ ಗೆರೆ: ಆಶಾವಾದ (Hope) – ಭವಿಷ್ಯದ ಬಗ್ಗೆ ಸದಾ ಸಕಾರಾತ್ಮಕ ಚಿಂತನೆ ಹೊಂದುವುದು.
- ಇಪ್ಪತ್ತನಾಲ್ಕನೇ ಗೆರೆ: ವಿಶ್ವಾಸ (Faith) – ದೇಶದ ಸಂವಿಧಾನ ಮತ್ತು ಮಾನವೀಯತೆಯ ಮೇಲೆ ನಂಬಿಕೆ ಇಡುವುದು.
ಈ 24 ಕಡ್ಡಿಗಳು ದಿನದ 24 ಗಂಟೆಗಳನ್ನು ಸಹ ಪ್ರತಿನಿಧಿಸುತ್ತವೆ. ದೇಶವು ದಿನದ 24 ಗಂಟೆಯೂ ನಿರಂತರವಾಗಿ ಅಭಿವೃದ್ಧಿಯತ್ತ ಸಾಗಬೇಕು ಮತ್ತು ಪ್ರತಿಯೊಬ್ಬ ನಾಗರಿಕನೂ ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದೇ ಇದರ ಮುಖ್ಯ ಸಂದೇಶವಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ