ಬಂಜೆತನಕ್ಕೂ ಆಹಾರಕ್ಕೂ ಏನು ಸಂಬಂಧ?; ನಿಮ್ಮಲ್ಲಿ ಆತಂಕ ಮೂಡಿಸುವ 3 ತಪ್ಪು ಕಲ್ಪನೆಗಳಿವು

|

Updated on: Jan 12, 2024 | 5:35 PM

ಬಂಜೆತನ ಇತ್ತೀಚೆಗೆ ಹೆಚ್ಚು ಸಾಮಾನ್ಯವಾಗುತ್ತಿದೆ. ಅದಕ್ಕೆ ತಡವಾಗಿ ಮದುವೆಯಾಗುತ್ತಿರುವುದು, ಒತ್ತಡದ ಜೀವನಶೈಲಿ, ಅನುವಂಶಿಕತೆ ಹೀಗೆ ನಾನಾ ಕಾರಣಗಳಿವೆ. ಆದರೆ, ಬಂಜೆತನದ ಬಗ್ಗೆ ತಪ್ಪುಕಲ್ಪನೆಗಳು ಕೂಡ ಹೆಚ್ಚುತ್ತಲೇ ಇದೆ. ಫರ್ಟಿಲಿಟಿ ಸಮಸ್ಯೆಗೂ ನಮ್ಮ ಆಹಾರಕ್ಕೂ ಏನು ಸಂಬಂಧ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬಂಜೆತನಕ್ಕೂ ಆಹಾರಕ್ಕೂ ಏನು ಸಂಬಂಧ?; ನಿಮ್ಮಲ್ಲಿ ಆತಂಕ ಮೂಡಿಸುವ 3 ತಪ್ಪು ಕಲ್ಪನೆಗಳಿವು
ಬಂಜೆತನ
Image Credit source: iStock
Follow us on

ಜಗತ್ತಿನಾದ್ಯಂತ ಲಕ್ಷಾಂತರ ದಂಪತಿಗಳು ಬಂಜೆತನದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಬಂಜೆತನ ಶಾಶ್ವತ ಸಮಸ್ಯೆಯೆಂಬುದು ಹಲವರ ನಂಬಿಕೆ. ಆದರೆ, ಕೆಲವರಲ್ಲಿ ಮಾತ್ರ ಬಂಜೆತನ ಶಾಶ್ವತ ಸಮಸ್ಯೆಯನ್ನು ತಂದೊಡ್ಡುತ್ತದೆ. ಇನ್ನು ಕೆಲವರ ಜೀವನಶೈಲಿ, ಆಹಾರಪದ್ಧತಿ, ದೈಹಿಕ ಚಟುವಟಿಕೆಯಲ್ಲಿ ಬದಲಾವಣೆ ಮಾಡಿಕೊಂಡ ಬಳಿಕ ಬಂಜೆತನದ ಸಮಸ್ಯೆ ನಿವಾರಣೆಯಾಗುತ್ತದೆ. ಕೆಲವೊಮ್ಮೆ ವೈದ್ಯರ ಬಳಿ ಚಿಕಿತ್ಸೆ ಪಡೆದ ಬಳಿಕ ಬಂಜೆತನ ನಿವಾರಣೆಯಾಗುತ್ತದೆ. ಆದರೆ, ಬಂಜೆತನಕ್ಕೂ ಆಹಾರಕ್ಕೂ ಏನು ಸಂಬಂಧ? ಬಂಜೆತನದ ಬಗ್ಗೆ ಜನರಿಗೆ ಇರುವ ತಪ್ಪು ಕಲ್ಪನೆಗಳೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬಂಜೆತನ ಅಥವಾ ಗರ್ಭ ಧರಿಸಲು ಸಾಧ್ಯವಾಗದಿರುವಿಕೆ ಕೇವಲ ದೈಹಿಕ ಸಮಸ್ಯೆಯಾಗಿ ಉಳಿಯದೆ ಮಾನಸಿಕ ಯಾತನೆ ಮತ್ತು ಸಾಮಾಜಿಕ ಪ್ರತ್ಯೇಕತೆಯನ್ನು ಕೂಡ ಉಂಟುಮಾಡಬಹುದು. ಬಂಜೆತನವು ಒತ್ತಡ, ಆತಂಕ ಮತ್ತು ಹತಾಶೆ ಸೇರಿದಂತೆ ದೈಹಿಕ ಸಮಸ್ಯೆಗಳ ಜೊತೆಗೆ ಮಾನಸಿಕ ಆರೋಗ್ಯದ ಮೇಲೆ ಕೂಡ ನೆಗೆಟಿವ್ ಪರಿಣಾಮಗಳನ್ನು ಬೀರಬಹುದು. ವಯಸ್ಸು, ಜೀವನಶೈಲಿಯ ಬದಲಾವಣೆ, ವೈದ್ಯಕೀಯ ಸಮಸ್ಯೆಗಳು ಮತ್ತು ಇತರ ಅಂಶಗಳು ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆಯ ಮೇಲೆ ಪ್ರಮುಖ ಪರಿಣಾಮ ಬೀರಬಹುದು.

ಇದನ್ನೂ ಓದಿ: ಸ್ತನ ಕ್ಯಾನ್ಸರ್ ಬಗ್ಗೆ ಇರುವ 15 ತಪ್ಪು ಕಲ್ಪನೆಗಳಿವು

ಈ ಬಗ್ಗೆ ಫರ್ಟಿಲಿಟಿ ಮತ್ತು ಐವಿಎಫ್ ತಜ್ಞರಾದ ಡಾ. ಅಂಕಿತಾ ಕೌಶಲ್ ಮಾಹಿತಿ ನೀಡಿದ್ದು, ಮಹಿಳೆಯರು ಅನೇಕ ವೇಳೆ ಬಂಜೆತನ ಮತ್ತು ಆಹಾರದ ಬಗ್ಗೆ ತಪ್ಪು ಮಾಹಿತಿಗಳನ್ನು ಹೊಂದಿರುತ್ತಾರೆ. ಇದರಿಂದ ಸಾಕಷ್ಟು ಭಯ ಮತ್ತು ಅನಗತ್ಯ ಒತ್ತಡಕ್ಕೆ ಒಳಗಾಗುತ್ತಾರೆ. ಇದು ಬಂಜೆತನದ ಸಮಸ್ಯೆಯನ್ನು ಇನ್ನಷ್ಟು ಕ್ಲಿಷ್ಟಗೊಳಿಸುತ್ತದೆ ಎಂದಿದ್ದಾರೆ.

ಮೊದಲ ತಪ್ಪುಕಲ್ಪನೆ: ಅನಾನಸ್‌ನ ತಿರುಳನ್ನು ತಿನ್ನುವುದರಿಂದ ಗರ್ಭ ನಿಲ್ಲಲು ಸಹಾಯವಾಗುತ್ತದೆ.

ಅಸಲಿ ವಿಷಯ: ಅಂಡೋತ್ಪತ್ತಿಯ ನಂತರ ಅನಾನಸ್‌ನ ತಿರುಳನ್ನು ತಿನ್ನುವುದರಿಂದ ಗರ್ಭ ನಿಲ್ಲಲು ಸಹಾಯ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ. ಅನಾನಸ್ ತಿರುಳು ಬ್ರೋಮೆಲಿನ್ ಅನ್ನು ಹೊಂದಿರುತ್ತದೆ. ಇದು ರಕ್ತ ತೆಳುವಾಗುವಂತೆ ಕಾರ್ಯನಿರ್ವಹಿಸುವ ಕಿಣ್ವಗಳ ಗುಂಪಾಗಿದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಅದೇನೇ ಇದ್ದರೂ, ಅನಾನಸ್ ತಿರುಳಿನಲ್ಲಿನ ಬ್ರೋಮೆಲಿನ್ ಗರ್ಭ ನಿಲ್ಲು ಸಹಾಯ ಮಾಡುತ್ತದೆ ಎಂದು ಸಾಬೀತುಪಡಿಸಲು ಯಾವುದೇ ಅಧ್ಯಯನಗಳಲ್ಲಿ ಸಾಕ್ಷಿ-ಪುರಾವೆಗಳಿಲ್ಲ. ಆದರೆ, ನಿಮ್ಮ ಆಹಾರದಲ್ಲಿ ತಾಜಾ ಅನಾನಸ್ ಅನ್ನು ಸೇವಿಸುವುದರಿಂದ ವಿಟಮಿನ್ ಸಿ ಮತ್ತು ಬಿ 6 ಸಿಗುತ್ತದೆ. ಹೀಗಾಗಿ, ಅನಾನಸ್ ಹಣ್ಣು ಆರೋಗ್ಯಕ್ಕಂತೂ ಅತ್ಯುತ್ತಮವಾಗಿದೆ.

ಇದನ್ನೂ ಓದಿ: ಗರ್ಭಿಣಿಯರು ಖರ್ಜೂರ ಯಾಕೆ ತಿನ್ನಬೇಕು ಗೊತ್ತಾ?

2ನೇ ತಪ್ಪು ಕಲ್ಪನೆ: ದಂಪತಿಗೆ ಅವಳಿ ಮಕ್ಕಳು ಬೇಕಾದರೆ ಅವರು ಯಾಮ್ ತಿನ್ನಬೇಕು.

ಅಸಲಿ ಸಂಗತಿ: ಯಾಮ್ ಸೇವನೆಯು ಅದರ ನೈಸರ್ಗಿಕ ಹಾರ್ಮೋನ್ ಫೈಟೊಈಸ್ಟ್ರೊಜೆನ್ ಕಾರಣದಿಂದಾಗಿ ಗರ್ಭ ಧರಿಸುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ನಂಬಲಾಗಿದೆ. ಇದು ಬಹು ಅಂಡೋತ್ಪತ್ತಿಯನ್ನು ಉತ್ತೇಜಿಸುತ್ತದೆ. ಆದರೆ, ಹೆಚ್ಚಿನ ಅವಳಿ ದರವು ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಕೇವಲ ಯಾಮ್ ಅಥವಾ ಗೆಡ್ಡೆ ತಿನ್ನುವುದರಿಂದ ನಿಮ್ಮ ಫಲವತ್ತತೆ ಹೆಚ್ಚುವುದಿಲ್ಲ. ಈ ರೀತಿಯ ವದಂತಿಗಳನ್ನು ನಂಬುವ ಬದಲು ತಜ್ಞರನ್ನು ಸಂಪರ್ಕಿಸುವುದು ಉತ್ತಮ.

3ನೇ ತಪ್ಪು ಕಲ್ಪನೆ: ದಾಳಿಂಬೆಯನ್ನು ಸೇವಿಸುವುದರಿಂದ ಫಲವತ್ತತೆ ಹೆಚ್ಚುತ್ತದೆ:

ಅಸಲಿ ಸಂಗತಿ: ದಾಳಿಂಬೆ ಪುರುಷರು ಮತ್ತು ಮಹಿಳೆಯರ ಫಲವತ್ತತೆಯ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಅವುಗಳ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶದಿಂದಾಗಿ ದೀರ್ಘಕಾಲದಿಂದ ಫಲವತ್ತತೆಗೆ ಸಂಬಂಧಿಸಿದ ದಾಳಿಂಬೆಯನ್ನು ಸೇವಿಸುವುದರಿಂದ ಗರ್ಭಾಶಯಕ್ಕೆ ರಕ್ತ ಪರಿಚಲನೆ ಹೆಚ್ಚುತ್ತದೆ. ಇದು ಗರ್ಭಾಶಯದ ಒಳಪದರವನ್ನು ದಪ್ಪವಾಗಿಸುತ್ತದೆ. ಆದರೆ, ದಾಳಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಫಲವತ್ತತೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ