Kannada News Lifestyle International Yoga Day 2024 Wishes : International Yoga Day Wishes, Messages and Quotes to share with your friends and family Lifestyle News in Kannada
International Yoga Day 2024 Wishes : ನಿಮ್ಮ ಪ್ರೀತಿ ಪಾತ್ರರಿಗೆ ಅಂತಾರಾಷ್ಟ್ರೀಯ ಯೋಗ ದಿನದಂದು ಹೀಗೆ ಶುಭಾಶಯ ತಿಳಿಸಿ
ದೈಹಿಕ ಹಾಗೂ ಮಾನಸಿಕ ಆರೋಗ್ಯವು ಉತ್ತಮವಾಗಿರಲು ಯೋಗವು ಬಲು ಪ್ರಯೋಜನಕಾರಿ. ಹೀಗಾಗಿ ಪ್ರತಿವರ್ಷ ಜೂನ್ 21ಕ್ಕೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿಕೊಂಡು ಬರಲಾಗುತ್ತದೆ. ಈ ಬಾರಿಯ ಯೋಗ ದಿನದಂದು ನಿಮ್ಮ ಗೆಳೆಯರು, ಪ್ರೀತಿಪಾತ್ರರಿಗೆ ಶುಭ ಕೋರಲು ಶುಭಾಶಯಗಳು ಇಲ್ಲಿವೆ.
ಸಾಂದರ್ಭಿಕ ಚಿತ್ರ
Follow us on
ಯೋಗ ಬಲ್ಲವನಿಗೆ ರೋಗವಿಲ್ಲ ಎನ್ನುವ ಮಾತಿದೆ. ಈ ಮಾತಿನಂತೆ ದಿನನಿತ್ಯ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 2015ರಿಂದ ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಈ ದಿನವು ಯೋಗದ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರುವ ಉದ್ದೇಶವನ್ನು ಹೊಂದಿದೆ. ಈ ಬಾರಿ ಹತ್ತನೇಯ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ನೀವು ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶಗಳನ್ನು ಕಳುಹಿಸುವ ಮೂಲಕ ಶುಭಾಶಯಗಳನ್ನು ಕೋರಿ ಅರ್ಥಪೂರ್ಣವಾಗಿ ಈ ದಿನವನ್ನು ಆಚರಿಸಬಹುದು.
ಯೋಗವು ಒಂದು ಬೆಳಕು, ಅದು ಒಮ್ಮೆ ಬೆಳಗಿದರೆ ಎಂದಿಗೂ ನಿಮ್ಮನ್ನು ಕತ್ತಲಲ್ಲಿರಲು ಬಿಡುವುದಿಲ್ಲ. ಎಲ್ಲರಿಗೂ ವಿಶ್ವ ಯೋಗ ದಿನದ ಶುಭಾಶಯಗಳು.
ಯೋಗದಿಂದ ಮನಸ್ಸು ಉಲ್ಲಾಸವಾಗುತ್ತದೆ, ದೇಹಕ್ಕೆ ಚೈತನ್ಯವು ದೊರೆಯುತ್ತದೆ. ಈ ಮಹತ್ವದ ದಿನದಂದು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
ಯೋಗವು ಖರ್ಚಿಲ್ಲದೆ ನಿಮಗೆ ಉತ್ತಮ ಆರೋಗ್ಯವನ್ನು ತರುತ್ತದೆ. ಹೀಗಾಗಿ ಆಸನಗಳನ್ನು ಮಾಡಿ ಆರೋಗ್ಯವನ್ನು ಕಾಪಾಡಿ, ನಿಮಗೂ ನಿಮ್ಮ ಕುಟುಂಬಕ್ಕೂ ವಿಶ್ವ ಯೋಗ ದಿನದ ಶುಭಾಶಯಗಳು.
ದಿನನಿತ್ಯ ಯೋಗ ಮಾಡಿ ಆರೋಗ್ಯ ವೃದ್ಧಿಸಿ, ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
ನಿಮ್ಮ ಬದುಕಿಗೆ ಮತ್ತಷ್ಟು ವರ್ಷಗಳನ್ನು ಕೂಡಿಸಲು ಮತ್ತು ನಿಮ್ಮ ಭವಿಷ್ಯಕ್ಕೆ ಸುಂದರ ಬದುಕನ್ನು ನೀಡಲು ನಿತ್ಯ ಯೋಗ ಮಾಡುವ ಅಭ್ಯಾಸವಿರಲಿ. ಈ ವಿಶೇಷ ದಿನದಂದು ನಿಮಗೂ ನಿಮ್ಮ ಕುಟುಂಬಕ್ಕೂ ವಿಶ್ವ ಯೋಗ ದಿನದ ಹಾರ್ಥಿಕ ಶುಭಾಶಯಗಳು.
ಎಲ್ಲರಿಗೂ ವಿಶ್ವ ಯೋಗ ದಿನದ ಶುಭಾಶಯಗಳು, ನೀವು ಜೀವನದ ಚಿಂತೆಗಳನ್ನು ತೊಡೆಯಲು ಬಯಸಿದರೆ ದಿನನಿತ್ಯ ಯೋಗ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ಜೀವನದಲ್ಲಿ ಸಂತೋಷ ಮತ್ತು ಆರೋಗ್ಯದ ಜೊತೆಗೆ ಸ್ನೇಹಿತರಾಗಲು ಬಯಸಿದರೆ ನಿತ್ಯ ಯೋಗ ಮತ್ತು ಧ್ಯಾನವನ್ನು ಮಾಡಿ. ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.