ಇಷ್ಟವಿಲ್ಲದ ಸಂಗಾತಿಯ ಜೊತೆಗೆ ಬದುಕುವುದು ಕಷ್ಟವೇ, ಸಂಬಂಧವನ್ನು ಮುರಿಯಬೇಕೆಂದುಕೊಂಡವರು ಈ ಟಿಪ್ಸ್ ಪಾಲಿಸಿ!

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 24, 2024 | 10:44 AM

ಸಂಬಂಧವನ್ನು ಮುರಿಯುವುದು ಸುಲಭ. ಆದರೆ ಆ ಸಂಬಂಧವನ್ನು ಮತ್ತೆ ಜೋಡಿಸುವುದು ಕಷ್ಟ. ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ಸಂಬಂಧವನ್ನು ಮುರಿಯುವುದು ಒಂದೇ ಕಟ್ಟ ಕಡೆಯ ದಾರಿ ಎಂದುಕೊಂಡು ಬಿಡುತ್ತೇವೆ. ಒಬ್ಬರಿಗೆ ತಮ್ಮ ಸಂಗಾತಿಯ ಜೊತೆಗೆ ಬದುಕಲು ಇಷ್ಟವಿದ್ದರೂ, ಇನ್ನೊಬ್ಬರು ಮಾತ್ರ ಈ ಸಾಂಸಾರಿಕ ಜೀವನದಿಂದ ದೂರ ಉಳಿಯುವುದೇ ಉತ್ತಮ ಎಂದುಕೊಂಡು ಬಿಡುತ್ತಾರೆ. ಹೀಗಾಗಿ ಸಂಗಾತಿಯೊಂದಿಗಿನ ಸಂಬಂಧವನ್ನು ಮುರಿಯಲು ಮುಂದಾಗುತ್ತಾರೆ. ಸಂಗಾತಿಯ ಜೊತೆಗಿನ ಸಂಬಂಧಗಳನ್ನು ಮುರಿಯುವಾಗ ಈ ಟಿಪ್ಸ್ ಗಳನ್ನು ಪಾಲಿಸಿದರೆ ಉತ್ತಮ.

ಇಷ್ಟವಿಲ್ಲದ ಸಂಗಾತಿಯ ಜೊತೆಗೆ ಬದುಕುವುದು ಕಷ್ಟವೇ, ಸಂಬಂಧವನ್ನು ಮುರಿಯಬೇಕೆಂದುಕೊಂಡವರು ಈ ಟಿಪ್ಸ್ ಪಾಲಿಸಿ!
Follow us on

ಮನುಷ್ಯನು ಒಂಟಿಯಾಗಿ ಬದುಕಲು ಸಾಧ್ಯವಿಲ್ಲ. ಹೀಗಾಗಿ ಹುಟ್ಟುತ್ತಲೇ ಒಂದಷ್ಟು ಸಂಬಂಧಗಳು ಜೊತೆಯಾಗುತ್ತವೆ. ಆದರೆ ಮದುವೆ ಜೀವನಕ್ಕೆ ಕಾಲಿಟ್ಟ ಬಳಿಕ ಸಂಗಾತಿಯೂ ಜೀವನದಲ್ಲಿ ಮುಖ್ಯ ವ್ಯಕ್ತಿಗಳಾಗಿ ಬಿಡುತ್ತಾರೆ. ಜೀವನದ ನೋವು ನಲಿವುಗಳಿಗೆ ಜೊತೆಯಾಗಿ ಸುದೀರ್ಘ ಪಯಣವನ್ನು ಜೊತೆಯಾಗಿ ಕಳೆಯಬೇಕಾಗುತ್ತದೆ. ಪ್ರಾರಂಭದಲ್ಲಿ ಸಂಗಾತಿಯ ಎಲ್ಲಾ ನಡವಳಿಕೆಗಳು ಇಷ್ಟವಾಗುತ್ತಾ ಹೋಗುತ್ತದೆ. ದಿನ ಕಳೆದಂತೆ ಸಂಗಾತಿಯ ಜೊತೆಗೆ ಇರುವುದೇ ಕಷ್ಟವಾಗಬಹುದು. ಸಣ್ಣ ವಿಚಾರ, ಅನವಶ್ಯಕ ಎಂದು ನಾವು ಭಾವಿಸುವ ಎಷ್ಟೋ ವಿಷಯಗಳೇ ಸಂಬಂಧ ಮುರಿದು ಬೀಳುತ್ತದೆ. ಕೆಲವೊಮ್ಮೆ ಸಂಗಾತಿಗೆ ಜೊತೆಯಾಗಿ ಬದುಕಬೇಕು ಎನ್ನುವ ಆಸೆಯಿದ್ದರೂ ಕೂಡ ನಿಮ್ಮ ಮನಸ್ಸು ಸಿದ್ಧವಿರುವುದಿಲ್ಲ. ಹೀಗಾದಾಗ ಒಳ್ಳೆಯ ರೀತಿಯಲ್ಲಿಯೇ ಸಂಬಂಧವನ್ನು ಮುರಿದುಕೊಳ್ಳಬೇಕಾಗುತ್ತದೆ.

ಸಂಬಂಧವನ್ನು ಮುರಿಯುವ ಆತುರದಲ್ಲಿದ್ದರೆ ಈ ಬಗ್ಗೆ ಗಮನ ಕೊಡಿ:

* ಸಂಬಂಧವನ್ನು ಮುರಿಯುವ ಮೊದಲು ನಿಮ್ಮೊಂದಿಗೆ ನೀವೇ ಮಾತನಾಡಿಕೊಳ್ಳಿ. ಸಂಗಾತಿ ಜೊತೆಗಿನ ಸಂಬಂಧವನ್ನು ಮುರಿಯುವುದು ಎಷ್ಟು ಅವಶ್ಯಕ, ಕೋಪದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೆನೋ ಎನ್ನುವ ಬಗ್ಗೆ ಯೋಚಿಸಿ.

* ಸಂಬಂಧವನ್ನು ಮುರಿಯುವ ಮುನ್ನ ಸಂಗಾತಿಯ ಜೊತೆಗೆ ಮುಕ್ತವಾಗಿ ಮಾತನಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಈ ಸಮಯದಲ್ಲಿ ನಮ್ಮಿಬ್ಬರ ಸಂಬಂಧದಿಂದ ನನಗೆ ಸಂತೋಷವಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಕೊಳ್ಳಿ. ಅದರೊಂದಿಗೆ ನಿರ್ಧಾರದ ಹಿಂದಿನ ಕಾರಣವನ್ನು ತಿಳಿಸಬೇಕಾಗುತ್ತದೆ. ಆದರೆ ಸಂಗಾತಿಯನ್ನು ಹೀಯಾಳಿಸುವುದು, ಚುಚ್ಚಿ ಮಾತನಾಡುವುದನ್ನು ಮಾಡಬೇಡಿ.

* ನೀವು ಎಷ್ಟು ಮುಕ್ತರಾಗಿ ಮಾತನಾಡುತ್ತಿರೋ, ಅಷ್ಟೇ ಮುಕ್ತವಾಗಿ ನಿಮ್ಮ ಸಂಗಾತಿಗೂ ಮಾತನಾಡಲು ಅವಕಾಶ ಮಾಡಿಕೊಡಿ. ನಿಮ್ಮ ಎದುರಿಗಿರುವ ವ್ಯಕ್ತಿಗೆ ನಿಮ್ಮ ನಿರ್ಧಾರದಿಂದಾಗಿ ಕಣ್ಣೀರು ಬರುವುದು ಮಾತ್ರವಲ್ಲ, ಇಡೀ ಜೀವನವನ್ನು ಕೊನೆಗೊಳಿಸುವ ಯೋಚನೆ ಕೂಡ ಬರಬಹುದು. ಆದರೆ ಸಂಗಾತಿಗೆ ಏನು ಅನಿಸುತ್ತದೆ ಅದನ್ನು ಹೇಳಲು ಅವಕಾಶ ಮಾಡಿಕೊಡಬೇಕಾಗುತ್ತದೆ.

* ನೀವು ನಿಮ್ಮ ಸಂಗಾತಿಗೆ ಕೊನೆಯ ಅವಕಾಶವನ್ನು ನೀಡಬೇಕಾಗುತ್ತದೆ. ನಿಮ್ಮ ಇಷ್ಟದಂತೆ ಅವರು ಇಲ್ಲದಿದ್ದರೆ ಅವರಿಗೆ ಸರಿಪಡಿಸಿಕೊಳ್ಳಲು ಸಮಯವಕಾಶ ನೀಡುವುದು ಒಳ್ಳೆಯದು. ಇಲ್ಲದಿದ್ದರೆ ಸರಿತಪ್ಪುಗಳನ್ನು ಸರಿಪಡಿಸಲು ಇಬ್ಬರೂ ಚರ್ಚಿಸಿ ಮುಂದುವರೆಯಿರಿ.

ಇದನ್ನೂ ಓದಿ: ಮುರಿದ ಸಂಬಂಧಗಳನ್ನು ಸರಿ ಪಡಿಸುವ ಬೆಸುಗೆಯಾಗಿ, ನೀವಂದುಕೊಂಡಿದ್ದಕ್ಕಿಂತ ಹೆಚ್ಚು ಬದಲಾಗಬಹುದು ನಿಮ್ಮ ಸಂಗಾತಿ

* ನಿಮ್ಮ ನಿರ್ಧಾರದಿಂದಾಗಿ ಸಂಗಾತಿಯೂ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬಹುದು. ಜೋರಾಗಿ ಅಳುವುದು ಅಥವಾ ನಿಮ್ಮ ನಿರ್ಧಾರವನ್ನು ಒಪ್ಪಿಕೊಳ್ಳಲಾಗದೇ ಮಾನಸಿಕವಾಗಿ ಕುಗ್ಗಬಹುದು. ಈ ಸಮಯದಲ್ಲಿ ನಿಮ್ಮ ನಿರ್ಧಾರವು ಕಠಿಣವಾಗಿದ್ದರೂ ಕೂಡ ಇದರಿಂದ ಇಬ್ಬರಿಗೂ ಯಾವ ರೀತಿ ಪ್ರಯೋಜನವಾಗಲಿದೆ ಎನ್ನುವುದನ್ನು ತಿಳಿಸುವುದು ಮುಖ್ಯ.

* ನಿಮ್ಮ ನಿರ್ಧಾರದಿಂದ ಸಂಗಾತಿಯ ಮಾನಸಿಕ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡು ಬಂದರೆ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿಯಾಗಿ ಅವರ ಮುಖಾಂತರವೇ ತಿಳಿ ಹೇಳುವ ಪ್ರಯತ್ನ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ