ಕೂದಲಿನ ನಾನಾ ರೀತಿಯ ಸಮಸ್ಯೆಗಳಿಂದ ಬೇಸೆತ್ತು ಹೋಗಿದ್ದೀರಾ, ಈ ಮನೆ ಮದ್ದುಗಳತ್ತ ಗಮನ ನೀಡಿ
ಪ್ರತಿಯೊಬ್ಬರಿಗೂ ತಮ್ಮ ಕೂದಲು ಸುಂದರವಾಗಿರಬೇಕು ಎನ್ನುವ ಆಸೆಯಿರುತ್ತದೆ. ಆದರೆ ಎಲ್ಲರಿಗೂ ಸೊಂಪಾದ ಕೂದಲು ಇರುವುದಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಸ್ತ್ರೀ ಮತ್ತು ಪುರುಷರು ಕೂದಲು ಉದುರುವಿಕೆ, ತಲೆ ಹೊಟ್ಟು ಸೇರಿದಂತೆ ನಾನಾ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾರ್ಮೋನ್ ಅಸಮತೋಲನ, ಥೈರಾಯ್ಡ ಗ್ರಂಥಿಯ ನಿಷ್ಕ್ರಿಯತೆ, ಪೋಷಕಾಂಶಗಳ ಕೊರತೆಯಿಂದ ಕೂದಲಿನ ಸಮಸ್ಯೆಯೂ ಎದುರಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಗಳನ್ನು ಬಳಸುವವರು ಹೆಚ್ಚು. ಆದರೆ ಈ ಕೂದಲಿನ ಅನೇಕ ಸಮಸ್ಯೆಗಳಿಗೆ ಮನೆ ಮದ್ದಿನ ಮೂಲಕವೇ ಪರಿಹಾರವನ್ನು ಕಂಡುಕೊಳ್ಳಬಹುದು.
ಎಲ್ಲರಿಗೂ ಕೂಡ ತಾವು ಸುಂದರವಾಗಿರಬೇಕು ಎನ್ನುವುದಿರುತ್ತದೆ. ಹೀಗಾಗಿ ತ್ವಚೆ ಹಾಗೂ ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಕೂದಲು ಕೂಡ ಸೌಂದರ್ಯದ ಭಾಗವಾಗಿರುವುದರಿಂದ ಕೂದಲಿನ ಆರೈಕೆ ಮಾಡುವುದು ಮುಖ್ಯವಾಗುತ್ತದೆ. ಹೆಚ್ಚಿನವರು ಕೂದಲಿನ ನಾನಾ ರೀತಿಯ ಸಮಸ್ಯೆಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಉತ್ಪನ್ನಗಳನ್ನು ಬಳಸಿ ಕೂದಲನ್ನು ಆರೈಕೆ ಮಾಡುತ್ತಾರೆ. ಆದರೆ ಮನೆ ಮದ್ದಿನ ಮೂಲಕವು ಕೂದಲಿನ ಸಮಸ್ಯೆಗಳನ್ನು ದೂರ ಮಾಡಿ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.
ಕೂದಲಿನ ಸಮಸ್ಯೆಗೆ ಇಲ್ಲಿದೆ ಸುಲಭ ಮನೆಮದ್ದುಗಳು
* ನೆಲ್ಲಿಕಾಯಿಯನ್ನು ಹಲವಾರು ವಿಧದಲ್ಲಿ ಊಟದಲ್ಲಿ ಸೇವಿಸುತ್ತಿದ್ದರೆ ಕೂದಲು ಉದುರುವ ಸಮಸ್ಯೆಯೂ ದೂರವಾಗುತ್ತದೆ.
* ನೆಲ್ಲಿಕಾಯಿ ರಸದ ತೈಲವನ್ನು ಕೊಬ್ಬರಿ ಎಣ್ಣೆಗೆ ಬೆರೆಸಿ, ತಲೆ ತೊಳೆದು ಕೊಳ್ಳುವುದರಿಂದ ಕೂದಲು ಉದುರದೆ, ಕಪ್ಪು ಬಣ್ಣದಲ್ಲಿ ಕಾಂತಿ ಹೆಚ್ಚುವುದು. ಹೊಟ್ಟು ಉದುರುವುದು ಕಡಿಮೆ ಆಗುವುದು.
* ಬೆಣ್ಣೆಗೆ ಮೆಂತ್ಯದ ಚೂರ್ಣವನ್ನು ಬೆರೆಸಿ, ತಲೆಗೆ ಉಜ್ಜಿಕೊಂಡರೆ ಅಪ್ರಾಪ್ತ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದಿಲ್ಲ. ಆದರೆ ತಣ್ಣೀರಿನಲ್ಲಿಯೇ ಸ್ಥಾನ ಮಾಡುತ್ತಿರಬೇಕು.
* ಮೆಂತ್ಯವನ್ನು ತಲೆಗೆ ಹರಳೆಣ್ಣೆಯೊಂದಿಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕೂದಲು ಉದುರುವ ಸಮಸ್ಯೆಯೂ ಕಡಿಮೆಯಾಗುತ್ತದೆ. ಕಪ್ಪು ಬಣ್ಣದಲ್ಲಿ ಕಾಂತಿಯುತವಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.
* ಅರಿಶಿನ ಪುಡಿಯನ್ನು ತಿಕ್ಕಿ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
* ಹಸಿ ದಂಟಿನ ರಸ ತೆಗೆದು ತಲೆಗೂದಲಿಗೆ ಹಚ್ಚುತ್ತಿದ್ದರೆ ಕೂದಲು ಸಮೃದ್ಧಿಯಾಗಿ ಬೆಳೆಯುತ್ತದೆ.
ಇದನ್ನೂ ಓದಿ: ಬಿಳಿ ಕೂದಲಿನ ಶಾಶ್ವತ ಪರಿಹಾರಕ್ಕಾಗಿ ಎಳ್ಳೆಣ್ಣೆಯೊಂದಿಗೆ ಈ ವಸ್ತು ಬೆರೆಸಿ ಹಚ್ಚಿ
* ಹರಳೆಣ್ಣೆಯನ್ನು ದಿನವೂ ತಲೆಗೆ ಹಚ್ಚುವುದರಿಂದ, ವಾರಕ್ಕೊಂದು ಬಾರಿ ಹರಳೆಣ್ಣೆಯನ್ನು ತಲೆಗೆ ಹಚ್ಚಿಕೊಂಡು ಅಭ್ಯಂಜನ ಸ್ನಾನ ಮಾಡುವುದರಿಂದ, ಕೂದಲು ನೀಳವಾಗಿ ಬೆಳೆಯುತ್ತದೆ.
* ಗರಿಕೆ ಹುಲ್ಲಿನ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಸ್ನಾನ ಮಾಡುವುದ ರಿಂದ ತಲೆಯಲ್ಲಿ ಹೊಟ್ಟು ಉದುರುವುದು ನಿಂತು ಹೋಗುವುದು.
* ಬೇವಿನ ಸೊಪ್ಪಿನ ಕಷಾಯದಿಂದ ತಲೆ ತೊಳೆದುಕೊಳ್ಳುತ್ತಿದ್ದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
* ಬೇವಿನ ಬೀಜಗಳನ್ನು ನುಣ್ಣಗೆ ಅರೆದು, ಕೂದಲಿಗೆ ಹಚ್ಚಿ ಹಲವಾರು ಗಂಟೆಗಳ ನಂತರ ಬೇವಿನ ಸೊಪ್ಪಿನ ಕಷಾಯದಿಂದ ತಲೆ ತೊಳೆದುಕೊಂಡರೆ ಹೇನುಗಳು ಉದುರಿಹೋಗುವುವು.
* ನಿಂಬೆಹಣ್ಣಿನ ರಸವನ್ನು ಕೊಬ್ಬರಿಎಣ್ಣೆಯಲ್ಲಿ ಬೆರೆಸಿ, ಮಲಗುವಾಗ ತಲೆಗೆ ಹಚ್ಚಿಕೊಳ್ಳುತ್ತಿದ್ದರೆ ಕೂದಲು ಕಪ್ಪಾಗಿ ನೀಳವಾಗಿ ಬೆಳೆಯುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ