ಹೆಣ್ಣು ತಾಯಾಗುವ ಸಮಯದಲ್ಲಿ ಆಕೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ಹೀಗಾಗಿ ಕಾಳಜಿಯು ಆರೈಕೆ ಹಾಗೂ ಪೋಷಕಾಂಶಯುಕ್ತ ಆಹಾರ ಸೇವನೆಯು ಅತೀ ಅಗತ್ಯ. ಈ ಸಮಯದಲ್ಲಿ ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸಿದರೆ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಅದಲ್ಲದೇ ಚರ್ಮವು ಸೂಕ್ಷ್ಮವಾಗಿರುವ ಕಾರಣ ಸೌಂದರ್ಯ ವರ್ಧಕಗಳನ್ನು ಬಳಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಸೂಕ್ಷ್ಮ ಚರ್ಮವಾಗಿರುವ ಕಾರಣ ಸನ್ ಸ್ಕ್ರೀನ್ ಬಳಕೆಯಿಂದ ಚರ್ಮವು ಕಪ್ಪಾಗುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಹೀಗಾಗಿ ಗರ್ಭಾವಸ್ಥೆಯಲ್ಲಿ ಎಲ್ಲಾ ರೀತಿಯ ಸನ್‌ಸ್ಟೀನ್‌ಗಳನ್ನು ಅನ್ವಯಿಸಬಾರದು. ಗರ್ಭಿಣಿ ಮಹಿಳೆಯರಿಗೆ ಮಿನರಲ್ ಸನ್‌ಸ್ಟೀನ್ ಹೆಚ್ಚು ಸೂಕ್ತ ಎನ್ನಲಾಗಿದೆ.
* ಎಸ್ ಪಿಎಫ್ 30 ಅಥವಾ ಅದಕ್ಕಿಂತ ಹೆಚ್ಚಿನ ಎಪಿಎಫ್ ಹೊಂದಿರುವ ಸನ್‌ಸ್ಕ್ರೀನ್ ಅನ್ನು ಆಯ್ಕೆಮಾಡಬಾರದು. ಎಸ್ ಪಿಎಫ್ ಸೂರ್ಯನ ಯುವಿಬಿ ಕಿರಣಗಳಿಂದ ರಕ್ಷಣೆಯ ಮಟ್ಟವನ್ನು ಸೂಚಿಸುತ್ತದೆ.
* ಬ್ರಾಡ್ ಸ್ಪೆಕ್ಟ್ರಮ್ ಲೇಬಲ್ ಮಾಡಿದ ಸನ್‌ಸ್ಕ್ರೀನ್ ಬಳಸುವುದು ಉತ್ತಮ. ಇದು ಚರ್ಮವನ್ನು ಯುವಿಎbಮತ್ತು ಯುವಿಬಿ ಕಿರಣಗಳಿಂದ ರಕ್ಷಿಸುತ್ತದೆ.
* ಮೊದಲಿಗೆ ಕೈಯ ಭಾಗಕ್ಕೆ ಹಚ್ಚುವ ಮೂಲಕ ಪ್ಯಾಚ್ ಪರೀಕ್ಷೆಯನ್ನು ಮಾಡಿಕೊಳ್ಳಬೇಕು. ಈ ಪರೀಕ್ಷೆಯ ವೇಳೆ ಚರ್ಮದಲ್ಲಿ ಯಾವುದೇ ಕಿರಿಕಿರಿ ಅಥವಾ ಅಲರ್ಜಿಯಾಗಿಲ್ಲ ಎಂದರೆ ಆ ಉತ್ಪನ್ನವನ್ನು ಖರೀದಿಸಿ.
* ಪ್ರತಿ ಎರಡು ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್ ಅನ್ನು ಮತ್ತೆ ಅನ್ವಯಿಸುತ್ತ ಇರುವ ಅಭ್ಯಾಸ ಬೆಳೆಸಿಕೊಳ್ಳಿ.
ಇದನ್ನೂ ಓದಿ: ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ರೆ, ಈ ಆಹಾರಗಳನ್ನು ಅಪ್ಪಿತಪ್ಪಿಯು ಸೇವಿಸಲೇಬೇಡಿ
* ಬೆವರುತ್ತಿದ್ದರೆ ಆಗಾಗ ಸನ್ ಸ್ಕ್ರೀನ್ ಅನ್ವಯಿಸುತ್ತ ಇರುವುದು ಒಳ್ಳೆಯದು.
* ತುಟಿಗಳಿಗೆ ಪ್ರತ್ಯೇಕವಾಗಿ ಸನ್‌ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: