ಇವರಿಗೆ ಭಾರತದ ಬಗ್ಗೆ ಎಷ್ಟು ಪ್ರೀತಿ ನೋಡಿ; ಜಪಾನ್‌ನಲ್ಲಿ ಭಾರತೀಯ ರೆಸ್ಟೋರೆಂಟ್‌ ನಡೆಸುತ್ತಿರುವ ದಂಪತಿ

ಭಾರತೀಯ ಸಂಸ್ಕೃತಿ, ಇಲ್ಲಿನ ಆಚಾರ-ವಿಚಾರ, ಪಾಕಪದ್ಧತಿ ಎಂದ್ರೆ ಅನೇಕ ವಿದೇಶಿಯರಿಗೆ ತುಂಬಾನೇ ಇಷ್ಟ. ಭಾರತವನ್ನು ಪ್ರೀತಿಸುವ ಅದೆಷ್ಟೋ ಜನರಿದ್ದಾರೆ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋವೊಂದು ಹರಿದಾಡುತ್ತಿದ್ದು, ಭಾರತ ಮತ್ತು ಭಾರತೀಯ ಸಂಸ್ಕೃತಿಯನ್ನು ಬಹಳ ಇಷ್ಟ ಪಡುವಂತಹ ಜಪಾನಿನ ದಂಪತಿ ತಮ್ಮ ದೇಶದಲ್ಲಿ ಭಾರತೀಯ ಶೈಲಿಯ ರೆಸ್ಟೋರೆಂಟ್‌ ತೆರೆದಿದ್ದಾರೆ. ಇಲ್ಲಿ ಅವರು ದಕ್ಷಿಣ ಭಾರತೀಯ ಸಂಸ್ಕೃತಿಯಂತೆ ಗ್ರಾಹಕರಿಗೆ ಬಾಳೆ ಎಲೆಯಲ್ಲಿ ಊಟ ಉಣಬಡಿಸುತ್ತಿದ್ದಾರೆ.

ಇವರಿಗೆ ಭಾರತದ ಬಗ್ಗೆ ಎಷ್ಟು ಪ್ರೀತಿ ನೋಡಿ; ಜಪಾನ್‌ನಲ್ಲಿ ಭಾರತೀಯ ರೆಸ್ಟೋರೆಂಟ್‌ ನಡೆಸುತ್ತಿರುವ ದಂಪತಿ
ಇಂಡಿಯನ್ ಸ್ಪೈಸ್ ಫ್ಯಾಕ್ಟರಿ ರೆಸ್ಟೋರೆಂಟ್
Image Credit source: Social Media

Updated on: Aug 24, 2025 | 4:00 PM

ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ, ಸಂಸ್ಕಾರ ಎಲ್ಲವೂ ಇತರ ದೇಶಗಳಿಗಿಂತ ಭಿನ್ನವಾಗಿರುವಂತೆ ಆಹಾರ ಸಂಸ್ಕೃತಿಯಲ್ಲೂ ಭಾರತ ಭಿನ್ನವಾಗಿದೆ. ಇಲ್ಲಿನ ರುಚಿ ರುಚಿಯಾದ ಬಗೆಬಗೆಯ ತಿಂಡಿ ತಿನಿಸುಗಳೆಂದರೆ ವಿದೇಶಿಯರಿಗೂ ಬಲು ಇಷ್ಟ. ಅದಕ್ಕಾಗಿಯೇ ವಿದೇಶದಲ್ಲಿಯು ಕೂಡ ಭಾರತೀಯರು ರೆಸ್ಟೋರೆಂಟ್‌ಗಳನ್ನು (Indian-style restaurant) ನಡೆಸುತ್ತಾರೆ. ಸಾಮಾನ್ಯವಾಗಿ ಭಾರತೀಯರೇ ವಿದೇಶಗಳಲ್ಲಿ ಭಾರತೀಯ ಶೈಲಿಯ ರೆಸ್ಟೋರೆಂಟ್‌, ಹೊಟೇಲ್‌ಗಳನ್ನು ನಡೆಸುತ್ತಾರೆ ಅಲ್ವಾ. ಆದ್ರೆ ಇಲ್ಲೊಂದು ಜಪಾನ್‌ ದಂಪತಿ (Japanese Couple) ಭಾರತ ಮತ್ತು ಭಾರತೀಯ ಸಂಸ್ಕೃತಿಗೆ ಮನಸೋತು, ಭಾರತದ ಪಾಕ ಪದ್ಧತಿಯನ್ನು ಕಲಿತು ಜಪಾನ್‌ನಲ್ಲಿ ತಾವೇ ರೆಸ್ಟೋರೆಂಟ್‌ ಒಂದನ್ನು ನಡೆಸುತ್ತಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ.

ಭಾರತೀಯ ರೆಸ್ಟೋರೆಂಟ್‌ ನಡೆಸುತ್ತಿರುವ ಜಪಾನಿನ ದಂಪತಿ:

ನಕಯಾಮಾ ಸ್ಯಾನ್ ಮತ್ತು ಸಚಿಕೊ-ಸ್ಯಾನ್ ದಂಪತಿ ಜಪಾನಿನ ಫುಕುವೋಕಾದ ಕಸುಗಾದಲ್ಲಿ ಇಂಡಿಯನ್ ಸ್ಪೈಸ್ ಫ್ಯಾಕ್ಟರಿ ಎಂಬ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದಾರೆ. ಈ ರೆಸ್ಟೋರೆಂಟ್‌ನಲ್ಲಿ ಭಾರತೀಯ ಖಾದ್ಯಗಳನ್ನು ಸವಿಯುವುದು ಮಾತ್ರವಲ್ಲದೆ, ಭಾರತೀಯ ಸಂಸ್ಕೃತಿಯ ವೈಭವವನ್ನೂ ಕಣ್ತುಂಬಿಕೊಳ್ಳಬಹುದು. ಭಾರತ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುವ ಕಾರಣ ಇವರು ಈ ರೆಸ್ಟೋರೆಂಟ್‌ ತೆರೆದಿದ್ದಾರೆ.

ಇದನ್ನೂ ಓದಿ
ಗಣಪತಿಗೆ ಯಾವ ರೀತಿಯ ನೈವೇದ್ಯಗಳನ್ನು ಮಾಡಬೇಕು, ಯಾವುದನ್ನು ಮಾಡಬಾರದು?
ಬೆಳಗ್ಗೆ ಯಾವ ಸಮಯದಲ್ಲಿ ಏಳೋದು ಸೂಕ್ತ?
ಬಾಳೆಹಣ್ಣಿನ ಸಿಪ್ಪೆಯಿಂದ ಮುಖದ ಹೊಳಪು ಹೆಚ್ಚಿಸಬಹುದು, ಹೀಗೆ ಮಾಡಿ
ಚಹಾ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ

ಈ ದಂಪತಿ ಫಿರ್ನಿ, ಮುರುಕು ಸೇರಿದಂತೆ ಬೆಂಗಾಳಿ ಹಾಗೂ ದಕ್ಷಿಣ ಭಾರತೀಯ ಶೈಲಿಯ ಭಕ್ಷ್ಯಗಳನ್ನು ಬಾಳೆ ಎಲೆಗಳಲ್ಲಿಯೇ ಸರ್ವ್‌ ಮಾಡುತ್ತಾರೆ.  ರೆಸ್ಟೋರೆಂಟ್‌ ಒಳಾಂಗಣವನ್ನು ಇವರು ಭಾರತೀಯ ಸಂಗೀತ ವಾದ್ಯಗಳು ಮತ್ತು ಕಲಾಕೃತಿಗಳಿಂದ ಅಲಂಕರಿಸಿದ್ದಾರೆ. ಇನ್ನೂ ಸಚಿಕೊ ಪ್ರತಿನಿತ್ಯ ಭಾರತೀಯ ಉಡುಗೆಯಾದ ಸೀರೆಯನ್ನೇ ಧರಿಸಿ ಅತಿಥಿಗಳಿಗೆ ಸೇವೆ ಸಲ್ಲಿಸುತ್ತಾರೆ.

ವಿಡಿಯೋ ಇಲ್ಲಿದೆ ನೋಡಿ:

ಕಂಟೆಂಟ್‌ ಕ್ರಿಯೆಟರ್ ಸೋನಮ್ ಮಿಧಾ ಎಂಬವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, “ಭಾರತ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಪ್ರೀತಿಗೆ ಸಾಟಿಯಿಲ್ಲ. ಇಡೀ ಅನುಭವವು ಹೃದಯಸ್ಪರ್ಶವಾಗಿತ್ತು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಜಪಾನೀಸ್‌ ಚೆಫ್‌ ಆಗಿರುವಂತಹ ನಕಯಾಮಾ-ಸಾನ್‌ 5 ವರ್ಷಗಳ ಕೊಲ್ಕತ್ತಾ, ದೆಹಲಿ ಸೇರಿದಂತೆ ಭಾರತದ ಒಂದಷ್ಟು ಸ್ಥಳಗಳಲ್ಲಿ ಜಪಾನೀಸ್‌ ರೆಸ್ಟೋರೆಂಟ್‌ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಭಾರತ ಮತ್ತು ಭಾರತೀಯ ಸಂಸ್ಕೃತಿಗೆ ಮನಸೋತ ಇವರು, ಜಪಾನಿಗೆ ಬಂದು ಇಲ್ಲಿ ಭಾರತೀಯ ಶೈಲಿಯ ರೆಸ್ಟೋರೆಂಟ್‌ ನಡೆಸಲು ಆರಂಭಿಸಿದ್ದಾರೆ. ಈ ರೆಸ್ಟೋರೆಂಟ್‌ನಲ್ಲಿ ಇವರು ಸಂಪೂರ್ಣವಾಗಿ ಭಾರತೀಯ ತಿನಿಸುಗಳನ್ನು ಬಾಳೆಎಲೆಯಲ್ಲಿಯೇ ಸರ್ವ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕಸದಿಂದ ರಸ; ಹಳೆಯ ರೆಫ್ರಿಜರೇಟರನ್ನು ಶೂ ರ‍್ಯಾಕ್‌ ಆಗಿ ಪರಿವರ್ತಿಸಿದ ಯುವಕ

ಆಗಸ್ಟ್‌ 03 ರಂದು ಶೇರ್‌ ಮಾಡಲಾದ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಮ್ಮ ಸಂಸ್ಕೃತಿ ಮತ್ತು ಆಹಾರ ಪದ್ಧತಿಯ ಬಗ್ಗೆ ಗೌರ ಹೊಂದಿರುವ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ತುಂಬಾನೇ ಸೊಗಸಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಜಪಾನಿ ದಂಪತಿಯ ಭಾರತದ ಮೇಲಿನ ಪ್ರೀತಿಗೆ ಮನಸೋತಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ