Kanakadasa Jayanti 2024: ಕನಕದಾಸರ ಜೀವನಸಾರ ಹೇಳುವ ಹೇಳಿಕೆಗಳನ್ನು ಹಂಚಿಕೊಂಡು ಶುಭಾಶಯ ತಿಳಿಸಿ
ಕನಕದಾಸರು ಸುಮಾರು 15- 16ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರು. ಸಾಮಾನ್ಯವಾಗಿ ಪ್ರತೀ ವರ್ಷ ಕಾರ್ತಿಕ ಮಾಸದ 18ನೇ ದಿನದಂದು ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನ. 18 ರಂದು ಸೋಮವಾರ ಈ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ಕರ್ನಾಟಕ ಸರ್ಕಾರ 2008 ರಿಂದ ಕನಕದಾಸ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಹಾಗಾದರೆ ಕನಕರು ಅಥವಾ ತಿಮ್ಮಪ್ಪನಾಯಕ ದಾಸರಾಗಿದ್ದು ಹೇಗೆ? ಕನಕದಾಸರ ಜೀವನ ಸಾರ ಹೇಳುವ ಹೇಳಿಕೆಗಳು ಯಾವವು? ಇಲ್ಲಿದೆ ಮಾಹಿತಿ.
ಕನಕದಾಸರ ಬಗ್ಗೆ ಯಾರಿಗೇ ತಾನೇ ತಿಳಿದಿಲ್ಲ. ಅವರ ಭಕ್ತಿ ಜೊತೆಗೆ ಕೀರ್ತನೆಗಳು ಇಂದಿಗೂ ಅಜರಾಮರವಾಗಿದೆ. ಸುಮಾರು 15-16ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಕೂಡ ಒಬ್ಬರಾಗಿದ್ದಾರು. ಸಾಮಾನ್ಯವಾಗಿ ಪ್ರತೀ ವರ್ಷ ಕಾರ್ತಿಕ ಮಾಸದ 18ನೇ ದಿನದಂದು ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನ. 18 ರಂದು ಸೋಮವಾರ ಈ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ಕರ್ನಾಟಕ ಸರ್ಕಾರ 2008 ರಿಂದ ಕನಕದಾಸ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಹಾಗಾದರೆ ಕನಕರು ಅಥವಾ ತಿಮ್ಮಪ್ಪನಾಯಕ ದಾಸರಾಗಿದ್ದು ಹೇಗೆ? ಕನಕದಾಸರ ಜೀವನ ಸಾರ ಹೇಳುವ ಹೇಳಿಕೆಗಳು ಯಾವವು? ಇಲ್ಲಿದೆ ಮಾಹಿತಿ.
ದಾಸರಾಗಿದ್ದು ಹೇಗೆ?
ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಅವರು 1509 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಹಿಂದೂ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಮೊದಲು ಯೋಧನಾಗಿದ್ದ ಇವರು ಬಳಿಕ ದೇವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹರಿದಾಸರಾದರು. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ, ದಂಡಕಗಳು ಮಾತ್ರವಲ್ಲದೇ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಎಂಬ ಕಾವ್ಯಗಳ ಮೂಲಕ ಜೀವನಪರ ಸಂದೇಶ, ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವಂತಹ ಉಪದೇಶಗಳನ್ನು ನೀಡಿ ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟವರಲ್ಲಿ ಒಬ್ಬರಾದರು.
ಇದನ್ನೂ ಓದಿ: ಮೂರ್ಖರ ಜೊತೆಗೆ ಹೇಗೆ ವರ್ತಿಸಬೇಕು? ಚಾಣಕ್ಯ ಹೀಗೆನ್ನುವುದು ಯಾಕೆ?
ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳ ಅವಶ್ಯಕತೆ ಇದೆ. ಹಾಗಾಗಿ ಕನಕದಾಸರ ಜೀವನ ಸಾರ ಹೇಳುವ ಹೇಳಿಕೆಗಳ ಮೂಲಕ ಕನಕ ಜಯಂತಿ ಶುಭಾಶಯಗಳನ್ನು ಹೇಳಬಹುದು. ವಾಟ್ಸಾಪ್, ಪೇಸ್‌ಬುಕ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಹ ಆದರ್ಶಪೂರ್ಣ ಹೇಳಿಕೆಗಳು ಇಲ್ಲಿವೆ:
- ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ದೇಹದೊಳಗೋ ನಿನ್ನೊಳು ದೇಹವೋ ಕಾಗಿನೆಲೆಯಾದಿಕೇಶವ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ
- ಕುಲ, ಕುಲ ಎಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ? ಆತ್ಮ, ಜೀವ, ಗಾಳಿ, ನೀರು, ಅನ್ನ ಯಾವ ಕುಲ?
- ಮೋಕ್ಷ ಸಿಗಬೇಕೆಂದರೆ ನಾನು ಎಂಬಾಸೆ ಬಿಟ್ಟು ದಾಸನಾಗಬೇಕು, ಸದಾಶಿವನ ದಾಸನಾಗಬೇಕು,ಅಜ್ಞಾನಿಗಳೊಡನೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳೊಡನೆ ಜಗಳವಾಡುವುದೇ ಲೇಸು
- ಅಡಿ ಸತ್ತ ಮಡಿಕೆಯನು ಜೋಡಿಸಿ ಒಲೆಗುಂಡು ಹೂಡಬಾರದು, ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು
- ಪರಸತಿಯ ನೋಡದಿರು, ದುರ್ಜನರ ಕೂಡದಿರು ಗರ್ವದ ಮಾತುಗಳನ್ನು ಆಡದಿರು ಕೈಯಹಿಂದೆಗೆವ ಹೇಡಿಯನ್ನು ಬೇಡದಿರು ಬೀದಿಗೂಳುಂಬ ದೈವಗಳನ್ನು ಕೊಂಡಾಡದಿರು
- ಬಟ್ಟೆ ನೀರೊಳಗೆ ಅದ್ದಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲ ಹೊಟ್ಟೆಯೊಳಗಿನ ಕಾಮ, ಕ್ರೋಧಾದಿಗಳನು ಬಿಟ್ಟು ನಡೆದರೆ ಅದು ಮಡಿ
- ತನುವ ನೇಗಿಲ ಮಾಡಿ ಹೃದಯ ಹೊಲವನು ಮಾಡಿ ತನ್ವಿರಾ ಎಂಬ ಎರಡೆತ್ತ ಹೂಡಿ ಜ್ಞಾನವೆಂಬೋ ಮಿಣೆಯ ಕಟ್ಟು ಹಗ್ಗವ ಮಾಡಿ ಧ್ಯಾನವೆಂಬ ಧಾನ್ಯವ ನೋಡಿ ಬಿತ್ತಿರಯ್ಯ
ಎಲ್ಲರಿಗೂ ಕನಕದಾಸ ಜಯಂತಿಯ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ