ಪ್ರಕೃತಿಯ ಸೊಬಗನ್ನು ಸವಿಯಲು ಕರ್ನಾಟಕದ ಈ ಗಿರಿಧಾಮಗಳಿಗೆ ಭೇಟಿ ನೀಡಿ

ಕೊರೊನಾ ಕಾರಣದಿಂದ ಸುಮಾರು ಎರಡು ವರ್ಷಗಳಿಂದ ಇದಕ್ಕೆಲ್ಲ ಕಡಿವಾಣವಿತ್ತು. ಆದರೆ ಕೊರೊನಾ ಸದ್ಯ ನಿಯಂತ್ರಣದಲ್ಲಿರುವ ಕಾರಣ ಕೆಲ ನಿಯಮಗಳನ್ನು ಪಾಲಿಸಿ ಕರ್ನಾಟಕದ ಈ ಬೆಟ್ಟಗಳಿಗೆ ಹೋಗಬಹುದು.

ಪ್ರಕೃತಿಯ ಸೊಬಗನ್ನು ಸವಿಯಲು ಕರ್ನಾಟಕದ ಈ ಗಿರಿಧಾಮಗಳಿಗೆ ಭೇಟಿ ನೀಡಿ
ಗಿರಿಧಾಮ
Follow us
TV9 Web
| Updated By: preethi shettigar

Updated on: Sep 26, 2021 | 8:13 AM

ಕರ್ನಾಟಕ ಪ್ರಕೃತಿ ಸೌಂದರ್ಯವನ್ನು ಹೊದ್ದು ನಿಂತಿದೆ. ನಿಸರ್ಗ ಪ್ರಿಯರು ಪ್ರಕೃತಿಯ ಸೊಬಗನ್ನು ಸವಿಯ ಬೇಕಾದರೆ ಕರ್ನಾಟಕದ ಈ ಗಿರಿಧಾಮಗಳಿಗೆ ಭೇಟಿ ನೀಡಿ. ಜೀವನದ ಕಷ್ಟಗಳನ್ನು ಮರೆತು ಸ್ವರ್ಗದಲ್ಲಿ ತೇಲಿಸುವಂತಹ ಪ್ರಕೃತಿ ತಾಣಗಳು ಕರ್ನಾಟಕ ಮಾತೆಯ ಮಡಿಲಿನಲ್ಲಿವೆ. ಹಚ್ಚ ಹಸಿರು, ತಣ್ಣನೆಯ ನೀರು, ಹಕ್ಕಿಗಳ ಚಿಲಿಪಿಲಿ ಸದ್ದು, ಪ್ರಶಾಂತ ವಾತಾವರಣದಲ್ಲಿ ಬೆರೆತು ಸಂತೋಷದ ಘಳಿಗೆಯನ್ನು ಸವಿಯ ಬೇಕಾದರೆ ಈ ಕೆಳಗೆ ತಿಳಿಸಿದ ಗಿರಿಧಾಮಗಳಿಗೆ ಹೋಗಿ. ಹಲವರಿಗೆ ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯುವುದು ಎಂದರೆ ತುಂಬಾ ಇಷ್ಟ. ಕೊರೊನಾ ಕಾರಣದಿಂದ ಸುಮಾರು ಎರಡು ವರ್ಷಗಳಿಂದ ಇದಕ್ಕೆಲ್ಲ ಕಡಿವಾಣವಿತ್ತು. ಆದರೆ ಕೊರೊನಾ ಸದ್ಯ ನಿಯಂತ್ರಣದಲ್ಲಿರುವ ಕಾರಣ ಕೆಲ ನಿಯಮಗಳನ್ನು ಪಾಲಿಸಿ ಕರ್ನಾಟಕದ ಈ ಬೆಟ್ಟಗಳಿಗೆ ಹೋಗಬಹುದು.

* ಬಿಳಿಗಿರಿರಂಗನ ಬೆಟ್ಟ ಮೈಸೂರಿನಿಂದ 120 ಮತ್ತು ಬೆಂಗಳೂರಿನಿಂದ 173 ಕಿಲೋಮೀಟರ್ ದೂರದಲ್ಲಿದೆ ಬಿಳಿಗಿರಿರಂಗನ ಬೆಟ್ಟ. ಚಾಮರಾಜನಗರ ಮತ್ತು ಯಳಂದೂರು ಮಾರ್ಗವಾಗಿ 15 ಕಿಲೋಮೀಟರ್ ದೂರದಲ್ಲಿರುವ ಬಿಳಿಗಿರಿರಂಗನ ಬೆಟ್ಟ ಸುಂದರ ಪ್ರವಾಸಿ ತಾಣವಾಗಿದೆ. ಇಲ್ಲಿ ವನ್ಯ ಮೃಗಗಳು ವಾಸಿಸುತ್ತವೆ. ಬಿಳಿಗಿರಿರಂಗನ ಬೆಟ್ಟವನ್ನು ಶ್ವೇತಾದ್ರಿ ಬಿಳಿಕಲ್ಲು ಬೆಟ್ಟ ಅಂತನೂ ಕರೆಯುತ್ತಾರೆ. ಬಿಳಿಗಿರಿರಂಗನ ಬೆಟ್ಟಕ್ಕೆ ಕಾಲಿಡುತ್ತಿದ್ದಂತೆ ತಂಪಾದ ಗಾಳಿ ಬೀಸುತ್ತದೆ. ಮೇಲಿಂದ ಮೇಲೆ ಬೀಸಿ ಬರುವ ತಂಪಾದ ಗಾಳಿ ಬಿಸಿಲಿನ ಬೇಗೆಯನ್ನು ತಪ್ಪಿಸುತ್ತದೆ. ವನ್ಯ ಮೃಗಗಳ ತಾಣವಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ವೈವಿಧ್ಯಮಯ ಸಸ್ಯ ಪ್ರಭೇದಗಳಿವೆ.

ಬಿಳಿಗಿರಿರಂಗನ ಬೆಟ್ಟ

* ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಎಂದಾಗ ನೆನಪಾಗುವುದು ಕೆಮ್ಮಣ್ಣುಗುಂಡಿ. ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ತಾಲೂಕಿನಲ್ಲಿದೆ ಕೆಮ್ಮಣ್ಣುಗುಂಡಿ ಗಿರಿಧಾಮ. ಕೆಮ್ಮಣ್ಣುಗುಂಡಿ ಬೆಂಗಳೂರಿನಿಂದ ಸುಮಾರು 273 ಮತ್ತು ಚಿಕ್ಕಮಗಳೂರಿನಿಂದ 55 ಕಿಲೋಮೀಟರ್ ದೂರದಲ್ಲಿದೆ. ಈ ಗಿರಿಧಾಮವನ್ನು ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ ಅಂತಲೂ ಕರೆಯುತ್ತಾರೆ. ಇಲ್ಲಿ ಹೆಬ್ಬೆ ಜಲಪಾತ ಮತ್ತು ಶಾಂತಿ ಜಲಪಾತವಿದೆ. ಪ್ರವಾಸಿಗರು ಮನಸೋಲುವ ಕೆಮ್ಮಣ್ಣುಗುಂಡಿಯಲ್ಲಿ ಹಲವು ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ.

ಕೆಮ್ಮಣ್ಣುಗುಂಡಿ

* ಕೊಡಗು ಕರ್ನಾಟಕದ ಜೀವನದಿ ಕಾವೇರಿ ಉಗಮ ಸ್ಥಳವಾದ ಕೊಡಗು ಪ್ರಕೃತಿ ಸೌಂದರ್ಯದಿಂದ ಕೂಡಿದೆ. ದಕ್ಷಿಣದ ಕಾಶ್ಮೀರ ಎಂದು ಖ್ಯಾತಿ ಪಡೆದಿರುವ ಕೊಡಗು ಹಚ್ಚ ಹಸಿರಿನಿಂದ ಆಕರ್ಶಿಸುತ್ತಿದೆ. ಕಾಫಿ ಮತ್ತು ಏಲಕ್ಕಿ ತೋಟಗಳ ನಡುವೆ ಕಾಣಸಿಗುವ ಜಲಪಾತಗಳು ಪ್ರವಾಸಿಗರ ಮನಸೆಳೆಯುತ್ತವೆ. ಕೊಡಗಿನತ್ತ ಪ್ರಯಾಣ ಬೆಳೆಸುವವರು ಅಬ್ಬೆ ಮತ್ತು ಮಲ್ಲಳ್ಳಿ ಜಲಪಾತಗಳನ್ನು ವೀಕ್ಷಿಸುವುದು ಮರೆಯಬೇಡಿ. ಇನ್ನು ಕಾವೇರಿ ನದಿ ದಡದಲ್ಲಿರುವ ಬಲಮುರಿ ತೀರ್ಥಕ್ಷೇತ್ರವಾಗಿದೆ. ಇಲ್ಲಿ ತುಲಾ ಮಾಸದ ಸಮಯದಲ್ಲಿ ಜಾತ್ರೆ ನಡೆಯುತ್ತದೆ.

ಕೊಡಗು ಬೆಟ್ಟ

* ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿಗೆ ಹೋದರೆ ಸ್ವರ್ಗಕ್ಕೆ ಕಾಲಿಟ್ಟಂತಾಗುತ್ತದೆ. 1,930 ಮೀಟರ್ ಎತ್ತರದಲ್ಲಿರುವ ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯುನ್ನತ ಪರ್ವತ ಶಿಖರವಾಗಿದೆ. ಈ ಬೆಟ್ಟದ ಮೇಲೆ ಮುಳ್ಳಯ್ಯ ಸ್ವಾಮಿಯ ದೇಗುಲವಿದೆ. ಮಳೆಗಾಲದಲ್ಲಿ ಮುಳ್ಳಯ್ಯನಗಿರಿಗೆ ಆಗಮಿಸಿದರೆ ಅದರೆ ಅನುಭವವೇ ಬೇರೆ. ಮಂಜಿನಲ್ಲಿ ಬೆರೆತಾಗ ಆಗುವ ಸಂತೋಷಕ್ಕೆ ಮಿತಿಯೇ ಇಲ್ಲ. ಹೀಗಾಗಿ ಚಿಕ್ಕಮಗಳೂರಿಗೆ ಹೋದರೆ ಮುಳ್ಳಯ್ಯನಗಿರಿ ಹೋಗದೆ ಹಿಂದಿರುಗಬೇಡಿ.

ಮುಳ್ಳಯ್ಯನಗಿರಿ

* ಕುದುರೆಮುಖ ಕುದುರೆಮುಖದಂತೆ ಕಾಣಿಸುವ ಗಿರಿಧಾಮಕ್ಕೆ ಕುದುರೆಮುಖ ಅಂತ ಕರೆಯಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತದೆ. ಇದು ಬೆಂಗಳೂರಿನಿಂದ ಸುಮಾರು 331 ಕಿಲೋಮೀಟರ್ ದೂರದಲ್ಲಿದೆ. ಇದು ಮುಳ್ಳಯ್ಯನಗಿರಿ ನಂತರ ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವಾಗಿದೆ. ಜುಳು ಜುಳು ಹರಿಯುವ ನೀರಿನ ಝರಿಗಳು, ಹಚ್ಚ ಹಸಿರಿನ ಗಿಡಮರಗಳು, ಚಿಲಿಪಿಲಿ ಕೂಗುವ ಪಕ್ಷಿಗಳ ಸಂಕುಲ ಇದು.

ಕುದುರೆಮುಖ

* ಆಗುಂಬೆ ದಕ್ಷಿಣದ ಚಿರಾಪುಂಜಿ ಎಂದು ಕರೆಸಿಕೊಂಡಿರುವ ಆಗುಂಬೆ ಹಚ್ಚ ಹಸಿರಿನಿಂದ ಕೂಡಿದೆ. ಮಳೆಗಾಲ ಮಾತ್ರವಲ್ಲ ಎಲ್ಲ ಕಾಲಕ್ಕೂ ಆಗುಂಬೆ ಘಾಟ್ ತಂಪಾಗಿರುತ್ತದೆ. ಸಂಜೆ ಹೊತ್ತಿಗೆ ಸೂರ್ಯಾಸ್ತ ನೋಡಲು ಇಲ್ಲಿಗೆ ಸಾವಿರಾರು ಜನ ಆಗಮಿಸುತ್ತಾರೆ. ಆಗುಂಬೆ ಶಿವಮೊಗ್ಗದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಮಂಗಗಳು ಜಾಸ್ತಿ. ಪ್ರವಾಸಿಗರು ಸೌಂದರ್ಯವನ್ನು ಸವಿಯುತ್ತ ಮೈ ಮರೆತರೆ ಅವರ ಕೈಯಲಿದ್ದ ವಸ್ತುಗಳು ಮಂಗಗಳ ಪಾಲಾಗುತ್ತವೆ. ಇಲ್ಲಿ ವಿವಿಧ ಹಾವುಗಳಿವೆ. ಹೆಸರುವಾಸಿ ಉರಗ ತಜ್ಞ ರೊಮುಲುಸ್ ವಿಟೆಕರ್ ಆಗುಂಬೆಯನ್ನು ಕಾಳಿಂಗ ಸರ್ಪಗಳ ರಾಜಧಾನಿ ಎಂದು ಕರೆದಿದ್ದಾರೆ. ಆಗುಂಬೆ ಬೆಂಗಳೂರಿನಿಂದ 347 ಕಿಲೋಮೀಟರ್ ದೂರದಲ್ಲಿದೆ.

ಆಗುಂಬೆ

* ನಂದಿ ಬೆಟ್ಟ ನಂದಿ ಬೆಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಗಿರಿಧಾಮ. ಚಿಕ್ಕಬಳ್ಳಾಪುರದಿಂದ 10 ಕಿಲೋಮೀಟರ್ ಮತ್ತು ಬೆಂಗಳೂರಿನಿಂದ 61 ಕಿಲೋಮೀಟರ್ ದೂರದಲ್ಲಿದೆ. ವೀಕೆಂಡ್​ನಲ್ಲಿ ಎಲ್ಲದರೂ ಹೋಗಬೇಕು ಅಂತ ಯೋಚಿಸುವವರು ನಂದಿಬೆಟ್ಟಕ್ಕೆ ಹೋಗಬಹುದು. ಈ ನಂದಿಬೆಟ್ಟವನ್ನು ಈ ಹಿಂದೆ ನಂದಿ ದುರ್ಗ ಅಂತ ಕರೆಯುತ್ತಿದ್ದರು. ನಂದಿ ಬೆಟ್ಟ ಪಕ್ಷಿ ವೀಕ್ಷಣೆಗೆ ಉತ್ತಮ ಸ್ಥಳ. ಅಪರೂಪದ ಪಕ್ಷಿ ಪ್ರಭೇದಗಳಾದ ವಾಬ್ಲಗರ್​ಗಳು, ಫ್ಲೈ ಕ್ಯಾಚರ್​ಗಳು ಮತ್ತು ಥ್ರಶ್​ಗಳನ್ನ ಕಾಣಬಹುದು.

ನಂದಿ ಬೆಟ್ಟ

* ಕೊಡಚಾದ್ರಿ ಶಿವಮೊಗ್ಗದಲ್ಲಿದೆ ಕೊಡಚಾದ್ರಿ ಬೆಟ್ಟ. ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಜಾದ ಇದು. ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ಒಂದು ಗುಡಿಯಿದೆ. ಈ ಜಾಗದಲ್ಲಿ ಶಂಕರಾಚಾರ್ಯರು ತಪ್ಪಸ್ಸು ಮಾಡಿದ್ದರು ಎಂದು ಹೇಳಲಾಗುತ್ತದೆ. ಪ್ರಕೃತಿ ಸೊಬಗನ್ನು ಸವಿಯ ಬೇಕಾದರೆ ಕೊಡಚಾದ್ರಿಗೆ ಹೋಗಿ. ಕೊಡಚಾದ್ರಿ ಬೆಟ್ಟ ಶಿವಮೊಗ್ಗದಿಂದ 78 ಕಿಲೋಮೀಟರ್ ದೂರದಲ್ಲಿದೆ. ಇದನ್ನು ನೈಸರ್ಗಿಕ ಸ್ವರ್ಗ ಮತ್ತು ಪಾರಂಪರಿಕ ತಾಣ ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದೆ.

ಕೊಡಚಾದ್ರಿ

ಇದನ್ನೂ ಓದಿ

Health Tips: ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಇದೆಯೇ? ಈ ಆಹಾರ ಪದ್ಧತಿಯನ್ನು ಅನುಸರಿಸಿ

Vastu Tips: ಅಡುಗೆ ಮನೆಯಲ್ಲಿ ಈ ನಾಲ್ಕು ವಸ್ತುಗಳು ಖಾಲಿಯಾದರೆ ಹಣಕ್ಕೆ ಕೊರತೆ ಎದುರಾಗುತ್ತದೆ, ಎಚ್ಚರವಿರಲಿ!

(Karnataka top hills for Trekking to tourists)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ