Kidney Stones: ಮೂತ್ರಕೋಶದಲ್ಲಿ ಕಲ್ಲಾಗುವುದನ್ನು ತಪ್ಪಿಸಲು ಈ ಆಹಾರಗಳನ್ನು ಬಿಟ್ಟುಬಿಡಿ

| Updated By: ನಯನಾ ರಾಜೀವ್

Updated on: Jul 25, 2022 | 12:41 PM

ಕೆಲವು ಅನಾರೋಗ್ಯಕರ ಅಭ್ಯಾಸಗಳಿಂದ ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಯುಂಟಾಗುತ್ತದೆ. ಅದು ಸಾಕಷ್ಟು ನೀರು ಕುಡಿಯದಿರಬಹುದು ಅಥವಾ ಸಾಕಷ್ಟು ವ್ಯಾಯಾಮ ಮಾಡದಿರುವುದು ಕೂಡ ಕಾರಣಗಳಾಗಿವೆ.

Kidney Stones: ಮೂತ್ರಕೋಶದಲ್ಲಿ ಕಲ್ಲಾಗುವುದನ್ನು ತಪ್ಪಿಸಲು ಈ ಆಹಾರಗಳನ್ನು ಬಿಟ್ಟುಬಿಡಿ
Kidney Stones
Follow us on

ಕೆಲವು ಅನಾರೋಗ್ಯಕರ ಅಭ್ಯಾಸಗಳಿಂದ ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಯುಂಟಾಗುತ್ತದೆ. ಅದು ಸಾಕಷ್ಟು ನೀರು ಕುಡಿಯದಿರಬಹುದು ಅಥವಾ ಸಾಕಷ್ಟು ವ್ಯಾಯಾಮ ಮಾಡದಿರುವುದು ಕೂಡ ಕಾರಣಗಳಾಗಿವೆ. ಯಾವಾಗ ಮೂತ್ರದಲ್ಲಿ ಅಧಿಕವಾಗಿರುವ ಲವಣಗಳು ಸ್ಫಟಿಕ ರೂಪದಲ್ಲಿ ಮಾರ್ಪಟ್ಟು ಘನ ವಸ್ತುವಾಗಿ ಪರಿವರ್ತನೆಯಾಗುತ್ತವೆಯೋ ಅದನ್ನು ಮೂತ್ರಕೋಶದ ಕಲ್ಲು ಅಥವಾ ಕಿಡ್ನಿ ಸ್ಟೋನ್ ಎಂದು ಕರೆಯಲಾಗುತ್ತದೆ. ಹೀಗಾಗಿ ನೀವು ಆಹಾರಗಳ ಜತೆಗೆ ನಿಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲೇಬೇಕು.

ಆಹಾರಗಳ ಬದಲಾವಣೆಗಳಿಂದ ಕಿಡ್ನಿ ಸ್ಟೋನ್ ನಿರ್ವಹಣೆ ಹೇಗೆ?
ಮನುಷ್ಯನ ಶರೀರದಲ್ಲಿ ಮೂತ್ರಪಿಂಡಗಳು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇವು ರಕ್ತವನ್ನು ಹಾಳುವ ಮಾಡುವ ಕೆಟ್ಟ ಪದಾರ್ಥಗಳನ್ನು ಬೇರ್ಪಡಿಸಿ, ಮೂತ್ರದ ಮೂಲಕ ಹೊರ ಹಾಕಿ ಲವಣಗಳ ಸಮತೋಲನವನ್ನು ಕಾಪಾಡುತ್ತವೆ.

ಬೀಜಗಳಿರುವ ಟೊಮ್ಯಾಟೋ, ಸೀಬೆಹಣ್ಣು, ದಾಳಿಂಬೆ, ಬದನೇಕಾಯಿ ಮೊದಲಾದವುಗಳ ಸೇವಿಸಬಾರದು. ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಳ್ಳಲು ಮತ್ತೊಂದು ಪ್ರಮುಖ ಕಾರಣ ಎಂದರೆ ಕಡಿಮೆ ನೀರು ಕುಡಿಯುವುದು. ಆದರೆ, ನಿಮ್ಮ ದೇಹದಲ್ಲಿ 5 ಮಿಮೀ ನಷ್ಟು ಕಲ್ಲು ಇದ್ದರೆ, ಅದನ್ನು ಶಸ್ತ್ರಚಿಕಿತ್ಸೆಯಿಂದ ಮಾತ್ರ ತೆಗೆಯಲು ಸಾಧ್ಯ.

ಆದರೆ ನಿಮ್ಮ ದೇಹದಲ್ಲಿ ಸಣ್ಣ ಕಲ್ಲು ಇದ್ದರೆ, ಅದನ್ನು ತೊಡೆದುಹಾಕಲು ಔಷಧಿಗಳನ್ನು ತೆಗೆದುಕೊಳ್ಳಬಹುದು. ಅದೇ ಸಮಯದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದೂ ಅಷ್ಟೇ ಅಗತ್ಯ. ಮೂತ್ರಪಿಂಡ, ಪಿತ್ತಕೋಶ ಮತ್ತು ಮೂತ್ರದ ಕೊಳವೆಗಳಲ್ಲಿ ಕಲ್ಲಿನ ಸಮಸ್ಯೆ ಇರಬಹುದು. ಈ ಸಮಸ್ಯೆ ಎದುರಾದರೆ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ಹಾಗಾಗಿ ನೀವು ಸೇವಿಸುವ ಪ್ರತಿಯೊಂದು ಆಹಾರವೂ ಪೌಷ್ಟಿಕವಾಗಿದ್ದು,

ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಿ: ಈ ಸಮಸ್ಯೆ ಇರುವವರು ಆಹಾರ ಕ್ರಮದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಕಿಡ್ನಿ ಸ್ಟೋನ್ ಸಮಸ್ಯೆ ಇತ್ತೀಚಿಗೆ ಸಾಮಾನ್ಯವಾಗಿದೆ. ಆದರೆ ಈ ಸಮಸ್ಯೆಗೆ ಸಾಕಷ್ಟು ಕಾರಣಗಳಿವೆ. ಕಡಿಮೆ ನೀರು ಕುಡಿಯುವುದೂ ಸಹ ಈ ಸಮಸ್ಯೆಗೆ ಮುಖ್ಯ ಕಾರಣ.

ಟೊಮೆಟೊ, ಬದನೆಕಾಯಿ, ಸೀಬೆಹಣ್ಣು, ದಾಳಿಂಬೆ ಮುಂತಾದವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಸಹ ಕಿಡ್ನಿ ಸ್ಟೋನ್ ಸಮಸ್ಯೆ ಕಂಡು ಬರುತ್ತದೆ.

ಬೀಜಗಳಿರುವ ಆಹಾರಗಳ ಸೇವನೆಯಿಂದಲೂ ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುತ್ತದೆ. ಕಿಡ್ನಿಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು.