Kiss Day 2023: ಒಂದು ಚುಂಬನ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ

ಪ್ರೇಮಿಯೂ ತನ್ನ ಪ್ರೇಯಸಿಗೆ ಮುತ್ತಿಡುತ್ತಾನೆ ಎಂದರೆ ಅದು ಪ್ರೀತಿಯ ಸಂಕೇತ. ಪರಸ್ಪರ ನಂಬಿಕೆಗಳು ಬಿಗಿಯಾಗಿದೆ ಎಂಬ ಅರ್ಥವನ್ನು ನೀಡುತ್ತದೆ.

Kiss Day 2023: ಒಂದು ಚುಂಬನ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ
ಕಿಸ್​​ ಡೇ
Image Credit source: iStock

Updated on: Feb 13, 2023 | 9:30 AM

ಪ್ರೇಮಿಗಳ ವಾರ(Valentine’s Week) ದ ಏಳನೇ ದಿನ ಅಂದರೆ ಇಂದು(ಫೆ.13) ಕಿಸ್​​ ಡೇ(Kiss Day) ಆಚರಿಸಲಾಗುತ್ತದೆ. ಇದು ಪ್ರೇಮಿಗಳ ವಾರದ ಕೊನೆಯ ದಿನ. ಈ ದಿನಕ್ಕೆ ಯಾಕಿಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂದು ನಿಮಗೆ ಅನಿಸುತ್ತಿರಬಹುದು. ಪ್ರೇಮಿಯೂ ತನ್ನ ಪ್ರೇಯಸಿಗೆ ಮುತ್ತಿಡುತ್ತಾನೆ ಎಂದರೆ ಅದು ಪ್ರೀತಿಯ ಸಂಕೇತ. ಪರಸ್ಪರ ನಂಬಿಕೆಗಳು ಬಿಗಿಯಾಗಿದೆ ಎಂಬ ಅರ್ಥವನ್ನು ನೀಡುತ್ತದೆ. ಚುಂಬನ ದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬಹುದು. ಕಿಸ್ ಎಂದಾಗ ಅದು ತುಟಿಗಳಿಗೆ ಚುಂಬಿಸುವುದು ಮಾತ್ರವಲ್ಲ ಅದನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬಹುದು. ಬದಲಾಗಿ ಹಣೆಯ ಮೇಲೆ ಅತ್ಯಂತ ಕಾಳಜಿಯಿಂದ ಚುಂಬಿಸಬಹುದಾಗಿದೆ. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇದು ಮಮತೆ ವಾತ್ಸಲ್ಯದ ಸಂಕೇತವು ಹೌದು.

ನಿಮ್ಮ ಸಂಬಂಧದ ಪ್ರಮುಖ ಅಂಗವೆಂದರೆ ಮುತ್ತು ಏಕೆಂದರೆ ಇದು ಪ್ರೀತಿಯನ್ನು ವ್ಯಕ್ತಪಡಿಸುವ ವಿಶೇಷ ಮಾರ್ಗವಾಗಿದೆ. ಈ ಸುಂದರ ಮುತ್ತು ಮನಸಿನಲ್ಲಿ ಪ್ರೀತಿಯ ಭಾವನೆಯನ್ನು ಹುಟ್ಟುಹಾಕುತ್ತದೆ. ಜೊತೆಗೆ ಸಿಹಿ ನೆನಪನ್ನು ನೀಡುತ್ತದೆ. ಯಾವ ವ್ಯಕ್ತಿಯೂ ಕೂಡ ತಾನು ತನ್ನ ಪ್ರೇಮಿಯಿಂದ ಪಡೆದ ಮೊದಲ ಮುತ್ತನ್ನು ಮರೆಯಲು ಸಾಧ್ಯವೇ ಇಲ್ಲ. ಇಬ್ಬರು ವ್ಯಕ್ತಿಗಳ ನಡುವೆ ಇರುವ ಪ್ರೀತಿ ಮತ್ತು ವಿಶೇಷವಾಗಿ ಅನ್ಯೋನ್ಯತೆಯನ್ನು ಈ ಚುಂಬನ ಸೂಚಿಸುತ್ತದೆ. ವಿಶ್ವದ ಹಲವು ಸಂಸ್ಕೃತಿಗಳಲ್ಲಿ ಕೆನ್ನೆಗೆ ಚುಂಬಿಸುವುದು ಒಂದು ಸಂಪ್ರದಾಯವೂ ಹೌದು. ಆದರೆ ಪ್ರೇಮಿ ತನ್ನ ಸಂಗಾತಿಯ ಕೆನ್ನೆಯ ಮೇಲೆ ನೀಡುವ ಚುಂಬನ ,ನಾನು ನಿನ್ನನ್ನು ಅಪಾರವಾಗಿ ಪ್ರೀತಿಸುತ್ತೇನೆ ಎಂಬ ಭರವಸೆಯನ್ನು ನೀಡುತ್ತದೆ.

ಇದನ್ನೂ ಓದಿ: ಪ್ರೇಮಿಗಳ ದಿನದ ಬಗ್ಗೆ ನಿಮಗೆ ಎಷ್ಟು ಗೊತ್ತು? ಕೆಲವು ಇಂಟರೆಸ್ಟಿಂಗ್​​​ ಸಂಗತಿಗಳು ಇಲ್ಲಿವೆ

ಚುಂಬನದಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ನೀವು ನಿಮ್ಮ ಪ್ರೀತಿ ಪಾತ್ರರನ್ನು ಚುಂಬಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ ಎಂದು ತಿಳಿದುಬಂದಿದೆ. ಫೆಬ್ರವರಿ 8ರಂದು ಪ್ರಪೋಸ್ ಡೇಯಿಂದ ಪ್ರಾರಂಭವಾಗಿ ಫೆಬ್ರವರಿ 9 ಚಾಕೊಲೇಟ್ ಡೇ, ಫೆಬ್ರವರಿ 10 ಟೆಡ್ಡಿ ಡೇ, ಫೆಬ್ರವರಿ 11 ಪ್ರಾಮಿಸ್ ಡೇ, ಫೆಬ್ರವರಿ 12 ಹಗ್ ಡೇ ಮತ್ತು ಫೆಬ್ರವರಿ 13 ಕಿಸ್ ಡೇ, ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: