AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಇತ್ತೀಚಿನ ದಿನಗಳಲ್ಲಿ ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವ ದೃಶ್ಯ ಕಾಣಸಿಗುವುದE ಬಹುತೇಕ ಮನೆಗಳಲ್ಲಿ ಅಪರೂಪವಾಗಿಬಿಟ್ಟಿದೆ. ಎಲ್ಲರೂ ತಮಗೆ ಬೇಕಾದ ಸಮಯಕ್ಕೆ ಮೊಬೈಲ್‌ ನೋಡುತ್ತಾ ಅಥವಾ ಟಿವಿ ನೋಡುತ್ತಾ ಊಟ ಮಾಡುತ್ತಾರೆ. ಆದ್ರೆ ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಸಂತೋಷ ದೊರೆಯುವುದರ ಜೊತೆಗೆ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆಯಂತೆ. ಹಾಗಾಗಿ ಇಂದಿನ ಒತ್ತಡದ ಜೀವನದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಕುಟುಂಬದವರ ಜೊತೆ ಕುಳಿತು ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Nov 04, 2025 | 4:52 PM

Share

ಹಿಂದೆಲ್ಲಾ ಸಮಾಜದಲ್ಲಿ ಅವಿಭಕ್ತ ಕುಟುಂಬಗಳೇ (family) ಕಾಣಸಿಗುತ್ತಿತ್ತು. ಈ ಕುಟುಂಬದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಕಷ್ಟಸುಖಗಳ ಬಗ್ಗೆ ಮಾತನಾಡುತ್ತಾ ಜೊತೆ ಕುಳಿತು ಊಟ ಮಾಡುತ್ತಿದ್ದರು. ಆದ್ರೆ ವಿಭಕ್ತ ಕುಟುಂಬಗಳೇ ಹೆಚ್ಚಿರುವ ಈ ಕಾಲದಲ್ಲಿ ಮನೆಯವರೆಲ್ಲಾ ಜೊತೆ ಕುಳಿತು ಊಟ ಮಾಡುವುದೇ ಅಪರೂಪವಾಗಿಬಿಟ್ಟಿದೆ. ಹೌದು ಈಗಂತೂ ಕೆಲವರು ಟಿವಿ ನೋಡುತ್ತಾ ಊಟ ಮಾಡಿದ್ರೆ, ಇನ್ನೂ ಕೆಲವರು ರೂಮ್‌ನಲ್ಲಿ ಮೊಬೈಲ್‌ ನೋಡುತ್ತಾ ಅಲ್ಲೇ ಊಟ ಮಾಡಿ ಮುಗಿಸುತ್ತಾರೆ. ಮನೆಯವರೆಲ್ಲಾ ಜೊತೆ ಕುಳಿತು ಊಟವೇ ಮಾಡುವುದಿಲ್ಲ. ಆದ್ರೆ ಏನ್‌ ಗೊತ್ತಾ, ಇಂದಿನ ಈ ಒತ್ತಡದ ಜೀವನಶೈಲಿಯಲ್ಲಿ ಮನಸ್ಸಿಗೆ ಸ್ವಲ್ಪ ನೆಮ್ಮದಿ ಬೇಕಂದ್ರೆ ಸ್ವಲ್ಪ ಬಿಡುವು ಮಾಡಿಕೊಂಡು ಮನೆಯವರ ಜೊತೆ ಕುಳಿತು ಊಟಮಾಡಬೇಕಂತೆ. ಹಾಗಿದ್ರೆ ಮನೆಯವರೆಲ್ಲಾ ಜೊತೆ ಸೇರಿ ಊಟ ಮಾಡುವುದರಿಂದ ಲಭಿಸುವ ಪ್ರಯೋಜನಗಳೇನು ಎಂಬುದರ ಬಗ್ಗೆ ತಿಳಿಯಿರಿ.

ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಲಭಿಸುವ ಪ್ರಯೋಜನಗಳು:

ಒತ್ತಡ ಕಡಿಮೆಯಾಗುತ್ತದೆ: ಮನೆಯವರೆಲ್ಲಾ ಕುಳಿತು ಊಟ ಮಾಡುವಾಗ ನಗು, ಸಂಭಾಷಣೆಗಳಿರುತ್ತವೆ. ಈ  ಸಂತೋಷದ ಮಾತುಗಳು ದೇಹದಲ್ಲಿ ಡೋಪಮೈನ್ ಮತ್ತು ಸಿರೊಟೋನಿನ್ ನಂತಹ ರಾಸಾಯನಿಕಗಳನ್ನು ಸಕ್ರಿಯಗೊಳಿಸುತ್ತದೆ. ಇದು ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.  ಅಲ್ಲದೆ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಸಂಬಂಧಗಳಲ್ಲಿ ನಿಕಟತೆ, ನಂಬಿಕೆ ಮತ್ತು ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುತ್ತದೆ.

ಮಾನಸಿಕ ಶಾಂತಿ: ನೀವು ನಿಮ್ಮ ಕುಟುಂಬದೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡುವ ಸಂದರ್ಭದಲ್ಲಿ ನಡೆಯುವ ಸಣ್ಣ ಸಂಭಾಷಣೆಗಳು ದಿನದ ಆಯಾಸವನ್ನು ನಿವಾರಿಸುವುದಲ್ಲದೆ ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ. ಈ ಸಣ್ಣ ಸಂಭಾಷಣೆಗಳು ನಿಮ್ಮ ದೇಹದಲ್ಲಿ ಬಂಧದ ಹಾರ್ಮೋನ್ ಎಂದೂ ಕರೆಯಲ್ಪಡುವ ಆಕ್ಸಿಟೋಸಿನ್ ಎಂಬ ಹಾರ್ಮೋನನ್ನು ಸಕ್ರಿಯಗೊಳಿಸುತ್ತವೆ. ಈ ಹಾರ್ಮೋನ್ ಒತ್ತಡದ ಹಾರ್ಮೋನ್  ಕಾರ್ಟಿಸೋಲನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಈ ಸಂಭಾಷಣೆಗಳು ನಿಮ್ಮನ್ನು ಭಾವನಾತ್ಮಕವಾಗಿ ಸುರಕ್ಷಿತವಾಗಿರಿಸುತ್ತದೆ ಮತ್ತು ನೀವು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯದ ಮೇಲೆ ಪರಿಣಾಮ: ಒಟ್ಟಿಗೆ ಕುಳಿತು ಊಟ ಮಾಡುವಾಗ ಮೊಬೈಲ್‌ ಫೋನನ್ನು ಪಕ್ಕಕ್ಕೆ ಇಟ್ಟು, ತಮಾಷೆಯ ಸಂಭಾಷಣೆಯೊಂದಿಗೆ ಊಟ ಮಾಡುತ್ತೇವೆ. ಇದು ದಿನದ ಆಯಾಸವನ್ನು ನಿವಾರಿಸಿ ಮನಸ್ಸಿಗೆ ಸಂತೋಷ ನೀಡುವುದರ ಜೊತೆಗೆ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಒಟ್ಟಿಗೆ ಕುಳುತು ಊಟ ಮಾಡುವಾಗ ಆಹಾರವನ್ನು ನಿಧಾನವಾಗಿ ಸೇವಿಸುತ್ತೇವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಬೊಜ್ಜನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ: ಪ್ರತಿನಿತ್ಯ ಕೆಲಸಗಳನ್ನು ಮಾಡಿದ್ರೆ ಸಾಕು, ನೀವು ಲೈಫಲ್ಲಿ ಹ್ಯಾಪಿ ಆಗಿರ್ತೀರಾ

ಪರಸ್ಪರ ತಿಳಿದುಕೊಳ್ಳುವ ಅವಕಾಶ: ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುವುದೇ ಅನೇಕರಿಗೆ ಕಷ್ಟಕರವಾಗಿದೆ. ಹೀಗಿರುವಾಗ ಒಟ್ಟಿಗೆ ಕುಳಿತು ಊಟ ಮಾಡುವ ಮೂಲಕ ಕುಟುಂಬದವರೊಂದಿಗೆ ಸಮಯ ಕಳೆಯಬಹುದು. ಈ ಸಮಯದಲ್ಲಿ ನಡೆಯುವ ಸಂಭಾಷಣೆಯ ಮೂಲಕ ಪರಸ್ಪರ ಇಷ್ಟಾನಿಷ್ಟಗಳನ್ನು ತಿಳಿಯಬಹುದು. ಸಲಹೆಗಳನ್ನು ನೀಡುವ ಮೂಲಕ ಏನಾದ್ರೂ ಸಮಸ್ಯೆಗಳಿದ್ದರೆ ಅದಕ್ಕೂ ಪರಿಹಾರವನ್ನು ಕಂಡುಕೊಳ್ಳಬಹುದು.

ಸಂಬಂಧಗಳನ್ನು ಬಲಪಡಿಸುತ್ತದೆ:  ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ. ದಿನದ ಆಯಾಸ ಮತ್ತು ಒತ್ತಡವು ಊಟದ ಸಮಯದಲ್ಲಿ ನಗು ಮತ್ತು ಮೋಜಿನ ವಿಷಯವಾಗಿ ರೂಪಾಂತರಗೊಳ್ಳುತ್ತದೆ. ಈ ಅಂಶಗಳು ಒತ್ತಡವನ್ನು ನಿವಾರಿಸಿ, ಮನಸ್ಸಿಗೆ ಖುಷಿ ನೀಡುವುದು ಸಂಬಂಧಗಳ ಮಾಧುರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ದಿನಕ್ಕೆ ಕನಿಷ್ಟ ಒಂದು ಬಾರಿಯ ಊಟವನ್ನಾದರೂ ಮನೆಯವರ ಜೊತೆ ಕುಳಿತು ಸೇವಿಸಿ. ಖಂಡಿತವಾಗಿಯೂ ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಉಂಟು ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ