ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಚಿಕಿತ್ಸೆ ನೀಡುವ ಹೀಲಿಂಗ್ ಥೆರಪಿ ರೇಖಿ (Reiki). ಜಪಾನ್ ಮೂಲದ ಈ ಚಿಕಿತ್ಸೆ ಭಾರತದಲ್ಲಿಯೂ ಹೆಚ್ಚು ಪ್ರಸ್ತುತ. ಜಪಾನ್ (Japan) ಭಾಷೆಯಲ್ಲಿ ರೇ ಎಂದರೆ ಯುನಿವರ್ಸ್, ಖಿ ಎಂದರೆ ಎನರ್ಜಿ ಎಂದರ್ಥ. ವೈದ್ಯಕೀಯ ಚಿಕಿತ್ಸೆಯಿಂದ ಗುಣಪಡಿಸಲಾಗದ ಎಷ್ಟೋ ಕಾಯಿಲೆಗಳನ್ನು ರೇಖಿಯ ಮೂಲಕ ಗುಣಪಡಿಸಬಹದು ಎಂದು ಹೇಳಲಾಗುತ್ತದೆ. ಸೌಮ್ಯ ಸ್ಪರ್ಶದಿಂದ ರೋಗ ಗುಣಪಡಿಸುವ ಸಾಂಪ್ರಾದಯಿಕ ಹೀಲಿಂಗ್ (Healing) ತಂತ್ರ ಈ ರೇಖಿ. ಇದರ ಮೂಲ ಜಪಾನ್ ಆದರೂ ಭಾರತದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಇಂದು ಈ ರೇಖಿ ಇನ್ನಷ್ಟು ತಂತ್ರವನ್ನು ಅಳವಡಿಸಿಕೊಂಡು ದೂರದಲ್ಲಿರುವವರಿಗೂ ಫೋನ್ ಮೂಲಕ ರೇಖಿಯನ್ನು ಮಾಡುತ್ತಾರೆ ಇದನ್ನು ಡಿಸ್ಟಂಟ್ ಹೀಲಿಂಗ್ ಎಂದು ಕರೆಯುತ್ತಾರೆ.
ರೇಖಿ ಚಿಕಿತ್ಸೆ ಎಂದರೇನು?
ವೈದ್ಯರು ತಮ್ಮ ಅಂಗೈಗಳನ್ನು ರೋಗಿಯ ದೇಹದಲ್ಲಿ ನೋವಿರುವ ಭಾಗದ ಮೇಲೆ ಇರಿಸುತ್ತಾರೆ. ಹೀಲಿಂಗ್ ತಂತ್ರವನ್ನು ಅಳವಡಿಸಿಕೊಂಡು ರೋಗಿಯ ದೇಹದ ಕಾಯಿಲೆಯನ್ನು ಗುಣಪಡಿಸಲಾಗುತ್ತದೆ. ಇದನ್ನೇ ರೇಖಿ ಚಿಕಿತ್ಸೆ ಅಥವಾ ರೇಖಿ ಎನ್ನುತ್ತಾರೆ. ರೇಖಿಯನ್ನು ಬಹುತೇಕ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಕೇವಲ ದೈಹಿಕ ಕಾಯಿಲೆ ಮಾತ್ರವಲ್ಲ, ಮಾನಸಿಕ ಖಿನ್ನತೆಯಂತಹ ಸಮಸ್ಯೆಗಳನ್ನೂ ಕೂಡ ರೇಖಿಯಿಂದ ಗುಣಪಡಿಸಬಹುದಾಗಿದೆ. ರೇಖಿಯಿಂದಾಗುವ ಪ್ರಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ನೋವಿನ ಪರಿಹಾರಕ್ಕೆ :
ರೇಖಿಯಿಂದ ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ಗುಣಪಡಿಸಬಹುದಾಗಿದೆ. ಈ ಬಗ್ಗೆ ಹಲವು ಅಧ್ಯಯನಗಳು ಸಾಬೀತುಪಡಿಸಿದೆಯಾದರೂ ಇನ್ನೂ ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ.
ಒತ್ತಡ ಮತ್ತು ಮಾನಸಿಕ ಖಿನ್ನತೆ:
ರೇಖಿಯಿಂದ ಒತ್ತಡ ಮತ್ತು ಮಾನಸಿಕ ಖಿನ್ನತೆಯನ್ನೂ ಕೂಡ ಗುಣಪಡಿಸಬಹುದು ಎಂದು ಹೇಳಲಾಗಿದೆ. ರೇಖಿಯಿಂದ ಮನಸ್ಸನ್ನು ಕೂಡ ನಿಯಂತ್ರಿಸಬಹುದು ಎನ್ನಲಾಗಿದೆ.
ಮನಸ್ಸನ್ನು ಉತ್ತಮಗೊಳಿಸುತ್ತದೆ:
ರೇಖಿ ನಿಮ್ಮ ಮೂಡ್ಅನ್ನು ಪ್ರೆಶ್ ಆಗಿ ಇರುವಂತೆ ಮಾಡುತ್ತದೆ. ಒತ್ತಡ, ಕಿರಿಕಿರಿ, ತಲೆನೋವಿನಂತಹ ಸಮಸ್ಯೆಗಳನ್ನು ರೇಖಿ ಚಿಕಿತ್ಸೆಯ ಮೂಲಕ ಬಗೆಹರಿಸಬಹುದಾಗಿದೆ.
ದೈಹಿಕ ಆರೋಗ್ಯ:
ರೇಖಿಯಿಂದ ತಲೆನೋವು, ವಾಕರಿಕೆ, ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಇದರ ಜೊತೆಗೆ ಬೆನ್ನು ನೋವುಗಳಂತಹ ದೀರ್ಘಕಾಲದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.
ರಿಲಾಕ್ಸೇಶನ್:
ರೇಖಿಯಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ದೇಹಕ್ಕೂ ರಿಲಾಕ್ಸ್ ಮೂಡ್ ದೊರೆಯುತ್ತದೆ. ಪ್ರತಿದಿನ ಕೆಲಸ ಮಾಡಿ ಸುಸ್ತಾಗಿದ್ದರೆ ರೇಖಿ ಮೂಲಕ ರಿಲಾಕ್ಸ್ ಪಡೆದುಕೊಳ್ಳಬಹುದು.
(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್ನೌನ ವರದಿ ಆಧರಿಸಿ ಮಾಹಿತಿ ನೀಡಲಾಗಿದೆ. ಚಿಕಿತ್ಸೆ ಪಡೆಯುವ ಮುನ್ನ ತಜ್ಞರ ಸಲಹೆ ಪಡೆಯಿರಿ)
ಇದನ್ನೂ ಓದಿ: