AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Better Sleep: ಉತ್ತಮ ನಿದ್ರೆ ಪಡೆಯಲು ನೀವು ಅನುಸರಿಸಬೇಕಾದ ಆಯುರ್ವೇದ ನಿಯಮಗಳೇನು?

ಒಂದೊಮ್ಮೆ ತಕ್ಷಣ ನಿದ್ರೆ ಬಂದಿಲ್ಲವೆಂದರೆ ನಿದ್ರೆ ಬರುವ ಔಷಧಗಳ ಮೊರೆ ಹೋಗಬೇಕಿಲ್ಲ,  ನಿದ್ರಾಹೀನತೆಯು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. 

Better Sleep: ಉತ್ತಮ ನಿದ್ರೆ ಪಡೆಯಲು ನೀವು ಅನುಸರಿಸಬೇಕಾದ ಆಯುರ್ವೇದ ನಿಯಮಗಳೇನು?
Sleep
TV9 Web
| Updated By: ನಯನಾ ರಾಜೀವ್|

Updated on: Aug 14, 2022 | 12:59 PM

Share

ಒಂದೊಮ್ಮೆ ತಕ್ಷಣ ನಿದ್ರೆ ಬಂದಿಲ್ಲವೆಂದರೆ ನಿದ್ರೆ ಬರುವ ಔಷಧಗಳ ಮೊರೆ ಹೋಗಬೇಕಿಲ್ಲ,  ನಿದ್ರಾಹೀನತೆಯು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.  ರಾತ್ರಿ ನಿದ್ರೆ ಸರಿಯಾಗಿ ಆದರೆ ಇಡೀ ದಿನವನ್ನು ನೀವು ಲವಲವಿಕೆಯಿಂದ ಕಳೆಯುತ್ತೀರಿ. ಒಂದು ವೇಳೆ ನಿದ್ರಾಹೀನತೆ ಸಮಸ್ಯೆ ನಿಮ್ಮನ್ನು ದೀರ್ಘಕಾಲದವರೆಗೆ ಕಾಡುತ್ತಿದ್ದರೆ, ನೀವು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದರ್ಥ.

ನಿದ್ರೆ ಎಲ್ಲಾ ಜೀವಿಗಳಿಗೆ ಅವಶ್ಯಕವಾಗಿದೆ. ಮಲಗುವ ಮುನ್ನ ಕೆಫೀನ್ ಅಂಶವಿರುವ ಪದಾರ್ಥಗಳ ಸೇವನೆ ಬೇಡ, ಮಲಗುವ ಮುನ್ನ ಧೂಮಪಾನ ಹಾಗೂ ಮದ್ಯಪಾನ ಬೇಡ, ಹೊಟ್ಟೆ ತುಂಬಾ ಊಟ ಬೇಡ, ನಿದ್ರೆ ಬಾರದಿದ್ದರೆ ಆಲೋಚನೆ ಮಾಡುವ ಬದಲು ಒಳ್ಳೆಯ ಸಂಗೀತವನ್ನು ಆಲಿಸಿ. ನಿದ್ರೆ ಸಮಯದಲ್ಲಿ ಕೊಠಡಿಯನ್ನು ಕತ್ತಲಾಗಿರುವಂತೆ ನೋಡಿಕೊಳ್ಳಿ, ಸಾಧ್ಯವಾದಷ್ಟು ಹಗಲು ನಿದ್ರೆ ಮಾಡುವುದನ್ನು ತಪ್ಪಿಸಿ.

ನಿಯಮ 1 ನಿಮ್ಮ ದೇಹವು ಆರೋಗ್ಯಕರ ರೀತಿಯಲ್ಲಿ ಕಾರ್ಯನಿರ್ವಹಿಸಲು ರಾತ್ರಿ 10:00 ರಿಂದ 11:00 ಗಂಟೆಯೊಳಗೆ ಮಲಗುವುದು ಮುಖ್ಯ.

ನಿಯಮ 2 ನಿದ್ರೆಗೆಡಬೇಡಿ ಏಕೆಂದರೆ ಇದು ಕರುಳಿನ ಅಸಮತೋಲನ, ಆಲಸ್ಯ ಅಥವಾ ತಲೆನೋವುಗಳಿಗೆ ಕಾರಣವಾಗಬಹುದು.

ನಿಯಮ 3 ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಬೆಚ್ಚಗಿನ ಅಥವಾ ಕೋಣೆಯ ಉಷ್ಣಾಂಶದ ಎಳ್ಳಿನ ಎಣ್ಣೆಯಿಂದ ಪಾದಗಳನ್ನು ಮಸಾಜ್ ಮಾಡಿ. ಇದನ್ನು “ಪದಾಭ್ಯಂಗಂ” ಎನ್ನುತ್ತಾರೆ. ಇದು ನಮ್ಮ ದೇಹವನ್ನು ಭೂಮಿಯೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ.

ನಿಯಮ 4 ಮಲಗಲು ಹೋಗುವಾಗ ಯಾವಾಗಲೂ ಸಡಿಲವಾದ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ, ಇದು ವೇಗವಾಗಿ ಮತ್ತು ಉತ್ತಮವಾಗಿ ನಿದ್ರಿಸಲು ನಿಮಗೆ ಸಹಾಯ ಮಾಡುತ್ತದೆ. ಯಾವಾಗಲೂ ಸ್ವಚ್ಛ ಮತ್ತು ಆರಾಮದಾಯಕ ವಾತಾವರಣದಲ್ಲಿ ನಿದ್ರಿಸಿ, ನಿಮ್ಮ ಸಿರ್ಕಾಡಿಯನ್ ರಿದಮ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಕತ್ತಲೆಯಲ್ಲಿ ಮಲಗುವುದು ಉತ್ತಮ.

ನಿಯಮ 5 ಉತ್ತಮ ರಾತ್ರಿಯ ನಿದ್ರೆಯು ಸಂತೋಷ ಮತ್ತು ಉತ್ತಮ ಶಕ್ತಿಯ ಮೂಲವಾಗಿದೆ. ನೀವು ಪ್ರತಿದಿನ ಚೆನ್ನಾಗಿ ನಿದ್ದೆ ಮಾಡಿದರೆ, ನೀವು ಕಿರಿಕಿರಿ, ಚಿಂತೆ ಮತ್ತು ಆತಂಕಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ಆದರೆ, ಇದನ್ನು ಪ್ರತಿದಿನ ಮತ್ತು ಸತತವಾಗಿ ಅಭ್ಯಾಸ ಮಾಡಬೇಕು.

ನಿಯಮ 6 ವಾರದ ನಿದ್ರೆಯ ಕೊರತೆಯನ್ನು ಹೋಗಲಾಡಿಸಲು ವಾರಾಂತ್ಯ ಸಿಗುವ ರಜೆಯ ದಿನ ಇಡೀ ದಿನ ಮಲಗಿಬಿಡಬೇಡಿ.

ಈ ಮೇಲಿನ ಲೇಖನವು ಟಿವಿ09ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ