ಕೇವಲ 4 ದಿನದಲ್ಲಿ 164 ಕಿ.ಮೀ ನಡಿಗೆ! ಬೆಂಗಳೂರಿನ ಅಲ್ಟ್ರಾ ಮ್ಯಾರಥಾನ್ ಓಟಗಾರ 55 ವರ್ಷದ ವಿನೋದ್ ಕೃಷ್ಣನ್ ಸಾಧನೆ ಇದು

ಈ ವರ್ಷದ ಲಡಾಖ್ ಮ್ಯಾರಥಾನ್‌ನಲ್ಲಿ ಬೆಂಗಳೂರಿನ ಅಲ್ಟ್ರಾ ಮ್ಯಾರಥಾನ್ ಓಟಗಾರ 55 ವರ್ಷದ ವಿನೋದ್ ಕೃಷ್ಣನ್ ಅವರು ಕೇವಲ 4 ದಿನಗಳಲ್ಲಿ ಒಟ್ಟು 164.195 ಕಿ.ಮೀ ದೂರವನ್ನು ಕ್ರಮಿಸುವ ಗುರಿ ಹೊಂದಿದ್ದು ಈ ಸವಾಲನ್ನು ಪ್ರಯತ್ನಿಸಲಿದ್ದಾರೆ. ಇದು ಇವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಇರುವ ಒಂದೊಳ್ಳೆ ಸಮಯವಾಗಿದೆ.

ಕೇವಲ 4 ದಿನದಲ್ಲಿ 164 ಕಿ.ಮೀ ನಡಿಗೆ! ಬೆಂಗಳೂರಿನ ಅಲ್ಟ್ರಾ ಮ್ಯಾರಥಾನ್ ಓಟಗಾರ 55 ವರ್ಷದ ವಿನೋದ್ ಕೃಷ್ಣನ್ ಸಾಧನೆ ಇದು
ಅಲ್ಟ್ರಾ ಮ್ಯಾರಥಾನ್ ಓಟಗಾರ ವಿನೋದ್ ಕೃಷ್ಣನ್
Image Credit source: Instagram

Updated on: Sep 12, 2025 | 4:44 PM

ಸಾಧಿಸುವ ಛಲವಿದ್ರೆ ಅಸಾಧ್ಯವಾದದ್ದು ಯಾವುದು ಇಲ್ಲ ಎನ್ನುವ ಮಾತಿದೆ. ಇದಕ್ಕೆ ಉದಾಹರಣೆಯಾಗಿರುವುದೇ ಬೆಂಗಳೂರಿನ (Bengaluru) ಅಲ್ಟ್ರಾ ಮ್ಯಾರಥಾನ್ ಓಟಗಾರ 55 ವರ್ಷದ ವಿನೋದ್ ಕೃಷ್ಣನ್ (Vinod Krishna). ಇವರು ಮೈ ನಡುಗುವಂತಹ ಸವಾಲುಗಳನ್ನು ಸ್ವೀಕರಿಸುವ ರೀತಿ ನೋಡಿದ್ರೆ ಎಲ್ಲರಿಗೂ ಅಚ್ಚರಿಯಾಗುತ್ತದೆ. ಇದೀಗ ಅನುಭವಿ ಆಟಗಾರ ವಿನೋದ್ ಅವರು ಮತ್ತೆ ಇದುವರೆಗಿನ ಅತ್ಯಂತ ಸವಾಲಿನ ಓಟವನ್ನು ಪ್ರಯತ್ನಿಸಲು ಮತ್ತೆ ಲಡಾಖ್ ಗೆ ತೆರಳಿದ್ದಾರೆ. ಈ ನಿರ್ಧಾರದ ಹಿಂದಿನ ಪ್ರೇರಣೆಯ ಬಗ್ಗೆ ಹಾಗೂ ತಮ್ಮ ತಯಾರಿಯ ಬಗ್ಗೆ ನ್ಯೂಸ್ 9 ನೊಂದಿಗೆ ಮಾಹಿತಿ ಹಂಚಿಕೊಂಡಿದ್ದು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಕಳೆದ ವರ್ಷ ಖರ್ದುಂಗ್ಲಾ ಚಾಲೆಂಜ್ ಮತ್ತು ಲಡಾಖ್ ಮ್ಯಾರಥಾನ್‌ನಲ್ಲಿ ಪೂರ್ಣ ಓಟವನ್ನು ಪೂರ್ಣಗೊಳಿಸಿದ್ದು, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಮತ್ತೆ ಕಠಿಣ ಭೂಪ್ರದೇಶಕ್ಕೆ ಮರಳಿದ್ದಾರೆ, ಸಿಲ್ಕ್ ರೂಟ್ ಅಲ್ಟ್ರಾವನ್ನು ಏರುವ ಗುರಿಯನ್ನು ಹೊಂದಿದ್ದಾರೆ. ಕೇವಲ 4 ದಿನಗಳಲ್ಲಿ ಒಟ್ಟು 164.195 ಕಿ.ಮೀ ದೂರ ಕ್ರಮಿಸುವ ಗುರಿಯನ್ನು ಹೊಂದಿದ್ದು ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಇರುವ ಅವಕಾಶವಾಗಿದೆ.

ಇದನ್ನೂ ಓದಿ
ಚರ್ಮದ ಆರೈಕೆಗೆ ಪತಂಜಲಿಯ ದಿವ್ಯ ಕಾಯಕಲ್ಪ ತೈಲ
ಪತಂಜಲಿ ಉತ್ಪನ್ನದ ಸಹಾಯದಿಂದ 70 ಕೆಜಿ ತೂಕ ಇಳಿಸಿಕೊಂಡ ಯುವತಿ
ಬರಿಗಾಲಿನಲ್ಲಿ ನಡೆಯುವುದು vs ಶೂ ಹಾಕಿ ನಡೆಯುವುದು, ಯಾವುದು ಒಳ್ಳೆಯದು?
ಬಾಬಾ ರಾಮದೇವ್ ಅವರ 5 ನಿಮಿಷಗಳ ಪವರ್ ಯೋಗ

ವಿನೋದ್ ಕೃಷ್ಣನ್ ಅವರ ವಿಡಿಯೋ ಇಲ್ಲಿದೆ

ಸಿಲ್ಕ್ ರೂಟ್ ಅಲ್ಟ್ರಾ ಇದು ಅತ್ಯಂತ ಕಠಿಣ ಸವಾಲಿನ ಓಟ

ಗುರುವಾರ ಆರಂಭವಾದ ಲಡಾಖ್ ಮ್ಯಾರಥಾನ್‌ನ 12 ನೇ ಆವೃತ್ತಿಯಲ್ಲಿ ಹವ್ಯಾಸಿಗಳಿಂದ ಹಿಡಿದು ವೃತ್ತಿಪರ ಕ್ರೀಡಾಪಟುಗಳವರೆಗೆ ಎಲ್ಲಾ ರೀತಿಯ ಓಟಗಾರರಿದ್ದಾರೆ. ಇದರಲ್ಲಿ ಅತ್ಯಂತ ಸುಲಭವಾದದ್ದು 5 ಕಿ.ಮೀ ದೂರವನ್ನು ಹೊಂದಿರುವ ರನ್ ಫಾರ್ ಫನ್ ಈವೆಂಟ್. ಇನ್ನು, ಈ ಸಿಲ್ಕ್ ರೂಟ್ ಅಲ್ಟ್ರಾ ಇದು ಅತ್ಯಂತ ಕಠಿಣವಾಗಿದೆ. ಸಮುದ್ರ ಮಟ್ಟದಿಂದ 10,700 ರಿಂದ 17,618 ಅಡಿ ಎತ್ತರದಲ್ಲಿ 122 ಕಿ.ಮೀ ಓಟವಿದಾಗಿದೆ. ವಿಶ್ವದ ಅತ್ಯಂತ ಎತ್ತರದ ಹಾಗೂ ಅತ್ಯಂತ ಕಷ್ಟಕರವಾದ ದೀರ್ಘ-ದೂರ ಓಟಗಳಲ್ಲಿ ಒಂದಾಗಿದೆ.

ತಯಾರಿ ವಿಧಾನ ವಿಭಿನ್ನ

ನಿಮ್ಮ ಸ್ವಂತ ಸಾಮರ್ಥ್ಯಗಳನ್ನು ಅನ್ವೇಷಿಸುವುದು ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯ ಎಂದು ನಾನು ಭಾವಿಸುತ್ತೇನೆ. ನಿಮ್ಮ ಮಿತಿಗಳೇನು? ನೀವು ಅವುಗಳನ್ನು ಹೊಂದಿಸುತ್ತೀರಿ. ಆದರೆ ನೀವು ಮೊದಲು ನಿಮ್ಮ ಅಡೆತಡೆಗಳನ್ನು ಮುರಿಯಬೇಕು. ಲಡಾಖ್‌ನಲ್ಲಿ ಮ್ಯಾರಥಾನ್‌ಗೆ ಪ್ರಯತ್ನಿಸುತ್ತಿರುವ ಯಾವುದೇ ಓಟಗಾರನನ್ನು ಕೇಳಿ, ಅವರು ಹವಾಮಾನಕ್ಕೆ ಒಗ್ಗಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳುತ್ತಾರೆ. ಎರಡು ಅಲ್ಟ್ರಾಮ್ಯಾರಥಾನ್‌ಗಳಲ್ಲಿ ಒಂದನ್ನು ಪ್ರಯತ್ನಿಸುವ ಎಲ್ಲಾ ಓಟಗಾರರು ಎತ್ತರದ ಪ್ರದೇಶಕ್ಕೆ ಒಗ್ಗಿಕೊಳ್ಳಲು ಕನಿಷ್ಠ ಎರಡು ವಾರಗಳು ಅಥವಾ 10 ದಿನಗಳ ಮುಂಚಿತವಾಗಿ ತಲುಪಲು ನಿಯಮಗಳಿವೆ. ಬಹುತೇಕ ಪ್ರತಿಯೊಬ್ಬ ಓಟಗಾರನು ತನ್ನದೇ ಆದ ತಯಾರಿ ವಿಧಾನವನ್ನು ಹೊಂದಿರುತ್ತಾನೆ ಎಂದು ತಿಳಿಸಿದ್ದಾರೆ.

ಎತ್ತರದ ಸ್ಥಳಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯ

ನಾನು ಏಳು ದಿನಗಳ ಕಾಲ ಏಕಾಂಗಿ ಚಾರಣ ಮಾಡಿದೆ. ನಾನು ಎತ್ತರದ ಪ್ರದೇಶಗಳಿಗೆ, ಎರಡು ಪರ್ವತಗಳ ಮಾರ್ಗಗಳಿಗೆ ಹೋಗಿದ್ದೆ. ಆದ್ದರಿಂದ ಅದು ನನಗೆ ಚೆನ್ನಾಗಿ ಒಗ್ಗಿಕೊಳ್ಳಲು ಸಹಾಯ ಮಾಡಿತು. ನೀವು ರಸ್ತೆಯಂತಲ್ಲದ ವಿಭಿನ್ನ ರೀತಿಯ ಭೂಪ್ರದೇಶಗಳಲ್ಲಿ ಹೋಗುತ್ತಿದ್ದೀರಿ, ಅದು ನಿಮ್ಮ ಇಡೀ ದೇಹವನ್ನು ಸಿದ್ಧಪಡಿಸುತ್ತದೆ. ತಾಪಮಾನವು ಬದಲಾಗುತ್ತಿರುತ್ತದೆ. ಆದ್ದರಿಂದ ನೀವು ನಿಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ಲಡಾಖ್‌ನಂತಹ ಎತ್ತರದ ಸ್ಥಳಕ್ಕೆ ಬಂದು ಇಲ್ಲಿ ಒಗ್ಗಿಕೊಳ್ಳುವುದು ಅತ್ಯಂತ ಮುಖ್ಯ ಎಂದು ನಾನು ಭಾವಿಸುತ್ತೇನೆ. ಮೊದಲು ಒಗ್ಗಿ ಕೊಂಡು ಅನಂತರ ಉತ್ತಮ ಪ್ರದರ್ಶನ ನೀಡಬಹುದು ಎಂದು ಹೇಳಿದ್ದಾರೆ.

ಓಟಗಾರರು ತಮ್ಮ ದೇಹಕ್ಕೆ ಅನುಗುಣವಾಗಿ ತಯಾರಿ ನಡೆಸಬೇಕು. ಅನುಭವಿ ಮ್ಯಾರಥಾನ್ ಓಟಗಾರರು ದೀರ್ಘ ಹಾಗೂ ದೂರವಾದ ಓಟಕ್ಕೆ ಕಾಲುಗಳನ್ನು ತಾಜಾವಾಗಿರಿಸಿಕೊಳ್ಳುವುದು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದು ಮುಖ್ಯ. ಕೆಲವರು ಓಟಕ್ಕೆ ಮೂರು, ನಾಲ್ಕು ದಿನಗಳ ಮೊದಲು, ಓಟಕ್ಕೆ ಒಂದು ವಾರ ಮೊದಲು, ತುಂಬಾ ತೀವ್ರವಾದ ವ್ಯಾಯಾಮಗಳನ್ನು ಮಾಡಲು ಪ್ರಯತ್ನಿಸುತ್ತಿರುವುದನ್ನು ನಾನು ನೋಡುತ್ತೇನೆ, ಅದು ಒಳ್ಳೆಯದೇ ಎನ್ನುವುದು ನನಗೆ ತಿಳಿದಿಲ್ಲ ನಾನು ವೈಯಕ್ತಿಕವಾಗಿ ಅಂತಹದ್ದನ್ನು ಶಿಫಾರಸು ಮಾಡುವುದಿಲ್ಲ. ನಿಮ್ಮ ಕಾಲುಗಳನ್ನು ತಾಜಾವಾಗಿಡಿ, ದೇಹವನ್ನು ಹೈಡ್ರೀಕರಿಸಿಕೊಳ್ಳಿ, ನಿಮ್ಮ ದೇಹಕ್ಕೆ ಚೆನ್ನಾಗಿ ವಿಶ್ರಾಂತಿ ನೀಡಿ , ನೀವು ಹೊರಗೆ ಹೋದಾಗ ಫ್ರೆಶ್ ಆಗಿದ್ದು ಉತ್ತಮ ಪ್ರದರ್ಶನ ನೀಡಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Divya Kayakalp Taila: ಚರ್ಮದ ಆರೈಕೆಗೆ ಪತಂಜಲಿಯ ದಿವ್ಯ ಕಾಯಕಲ್ಪ ತೈಲಕ್ಕಿಂತ ಉತ್ತಮ ಮದ್ದು ಇನ್ನೊಂದಿಲ್ಲ

ಮಾಜಿ ಕಾರ್ಪೊರೇಟ್ ವೃತ್ತಿಪರರಾಗಿದ್ದು, ಈಗ ಬೆಂಗಳೂರಿನಲ್ಲಿ ತಮ್ಮದೇ ಆದ ಉದ್ಯಮವನ್ನು ನಡೆಸುತ್ತಿದ್ದಾರೆ. 2019 ರಲ್ಲಿ ಲಡಾಖ್ ಮ್ಯಾರಥಾನ್‌ನಲ್ಲಿ ತಮ್ಮ ಮೊದಲ ಬಾರಿಗೆ ಓಡಿದರು. ಅದುವೇ ಮ್ಯಾರಥಾನ್‌ನಲ್ಲಿ ಮೇಲಿನ ಒಲವು ಹೆಚ್ಚಿಸಿತು. ಕಳೆದ ವರ್ಷ ಖರ್ದುಂಗ್ಲಾ ಚಾಲೆಂಜ್ ಹಾಗೂ ಪೂರ್ಣ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ ವಿನೋದ್, ಈ ವರ್ಷ ಸಿಲ್ಕ್ ರೂಟ್ ಅಲ್ಟ್ರಾವನ್ನು ಎದುರಿಸಲು ಸಜ್ಜಾಗಿದ್ದಾರೆ. ಅವರ ಆತ್ಮವಿಶ್ವಾಸ ತುಂಬಿದ ಮಾತುಗಳೇ ಅವರ ಗುರಿಯು ಸ್ಪಷ್ಟವಾಗಿ ಎನ್ನುವುದನ್ನು ತೋರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ