Lunar Eclipse 2021: ಇಂದು ದೀರ್ಘಾವಧಿ ಚಂದ್ರಗ್ರಹಣ; ನೀವು ಅನುಸರಿಸಲೇ ಬೇಕಾದ ಕೆಲವು ನಿಯಮಗಳು ಹೀಗಿವೆ
Chandra Grahan 2021: ದೀರ್ಘಾವಧಿ ಭಾಗಶಃ ಚಂದ್ರಗ್ರಹಣ ಇಂದು ಸಂಭವಿಸಲಿದೆ. ರೂಢಿಗತ ನಂಬಿಕೆಗಳ ಪ್ರಕಾರ ನೀವು ಅನುಸರಿಸಬೇಕಾದ ಕೆಲವು ನಿಯಮಗಳು ಈ ಕೆಳಗಿನಂತಿದೆ ತಿಳಿದುಕೊಳ್ಳಿ.
ಮೇ 26, 2021ರ ನಂತರ ಈ ವರ್ಷದಲ್ಲಿ ಎರಡನೇ ಹಾಗೂ ಕೊನೆ ಚಂದ್ರಗ್ರಹಣ ಇಂದು ಶುಕ್ರವಾರ (ನವೆಂಬರ್ 19)ರಂದು ಸಂಭವಿಸಲಿದೆ. ಏಕೆಂದರೆ 580 ವರ್ಷಗಳಲ್ಲಿ ದೀರ್ಘಾವಧಿ ಭಾಗಶಃ ಚಂದ್ರಗ್ರಹಣವಿದು (Lunar Eclipse) ಎಂದು ತಜ್ಞರು ತಿಳಿಸಿದ್ದಾರೆ. ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ನಿರ್ವಹಣಾ ಕೆಂದ್ರದ ಪ್ರಕಾರ (NASA) ಚಂದ್ರಗ್ರಹಣದ (Chandra Grahan) ಅವಧಿಯು ಮೂರು ಗಂಟೆ 28 ನಿಮಿಷಗಳ ಕಾಲ ಇರಲಿದೆ. ಈ ಸಮಯದಲ್ಲಿ ಚಂದ್ರನ 97 ಪ್ರತಿಶತವು ಕೆಂಪು ಬಣ್ಣದಲ್ಲಿ ಗೋಚರಿಸುತ್ತದೆ. ಚಂದ್ರಗ್ರಹಣವು ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಯುರೋಪ್ ಮತ್ತು ಭಾರತ ಸೇರಿದಂತೆ ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ.
ಚಂದ್ರಗ್ರಹಣದ ಸಮಯ? ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಅದಾಗ್ಯೂ ಭೂಮಿಯ ನೆರಳಿನ ಒಂದು ಭಾಗ ಮಾತ್ರ ಚಂದ್ರನನ್ನು ಆವರಿಸಿದಾಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ. ದೀರ್ಘಾವಧಿ ಚಂದ್ರಗ್ರಹಣವು ಇಂದು ಶುಕ್ರವಾರ ನವೆಂಬರ್ 19ರಂದು 11:34ಕ್ಕೆ ಪ್ರಾರಂಭವಾಗುತ್ತದೆ. ಸಂಜೆ 5:33ಕ್ಕೆ ಕೊನೆಗೊಳ್ಳುತ್ತದೆ. ಇದು ಭಾರತದಲ್ಲಿ ಮಧ್ಯಾಹ್ನ 2.34ಕ್ಕೆ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಈಶಾನ್ಯ ಭಾಗಗಳಿಂದ ಮಾತ್ರ ಗೋಚರಿಸುತ್ತದೆ.
ರೂಢಿಗತ ನಂಬಿಕೆಗಳ ಪ್ರಕಾರ ಅನುಸರಿಸಬೇಕಾದ ನಿಯಮಗಳೇನು? *ಪುರಾಣಗಳ ಪ್ರಕಾರ ಚಂದ್ರಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಆಹಾರವನ್ನು ಸೇವಿಸಬಾರದು
*ಮುಖ್ಯವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಹೊರಗಡೆ ತಿರುಗಾಡುವುದನ್ನು ತಪ್ಪಿಸಬೇಕು
*ಹಿಂದೂ ಪುರಾಣಗಳ ಪ್ರಕಾರ ಜನರು ಚಂದ್ರಗ್ರಹಣದ ಸಮಯದಲ್ಲಿ ದೇವರ ಧ್ಯಾನದಲ್ಲಿ ತೊಡಗಿಕೊಳ್ಳುವ ಮೂಲಕ ಮಂತ್ರಗಳನ್ನು ಪಠಿಸಬೇಕು
*ಗ್ರಹಣದ ಸಮಯದಲ್ಲಿ ಹಾನಿಕಾರಕ ಕಿರಣಗಳು ಬೀಳುವುದರಿಂದ ಹೊರಗಡೆ ತಿರುಗಾಡುವುದನ್ನು ತಪ್ಪಿಸಬೇಕು
*ಚಂದ್ರಗ್ರಹಣದ ಸಮಯದಲ್ಲಿ ಜನರು ತನ್ನ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು ಇದು ಅಶುಭ ಎಂಬ ನಂಬಿಕೆ ಇದೆ
*ದೀರ್ಘಾವಧಿ ಭಾಗಶಃ ಚಂದ್ರಗ್ರಹಣವು 1440 ಫೆಬ್ರವರಿ 18ರಂದು ಕೊನೆಯ ಬಾರಿ ಸಂಭವಿಸಿತ್ತು. ಅದೇ ರೀತಿ ಈ ವರ್ಷದಲ್ಲಿ ಇಂದು ಶುಕ್ರವಾರ ನವೆಂಬರ್ 19ರಂದು ದೀರ್ಘಾವಧಿ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ.
(ಈ ವಿಚಾರಗಳನ್ನು ರೂಢಿಗತ ನಂಬಿಕೆಯನ್ನಾಧರಿಸಿ ಬರೆಯಲಾಗಿದೆ)
ಇದನ್ನೂ ಓದಿ:
Lunar Eclipse 2021 Date: ನವೆಂಬರ್ 19ರಂದು ಈ ವರ್ಷದ ಕೊನೆಯ ಚಂದ್ರಗ್ರಹಣ; ಇಲ್ಲಿದೆ ಸಂಪೂರ್ಣ ಮಾಹಿತಿ
Published On - 10:54 am, Thu, 18 November 21