Lunar Eclipse 2021: ಇಂದೇ ಸಂಭವಿಸಲಿದೆ ದೀರ್ಘ ಕಾಲದ ಚಂದ್ರ ಗ್ರಹಣ; ಇಲ್ಲಿವೆ ತಿಳಿಯಬೇಕಾದ ಕೆಲವು ವಿಷಯಗಳು
Chandra Grahan 2021: ಇಂದು ಸಂಭವಿಸಲಿದೆ ದೀರ್ಘಾವಧಿ ಚಂದ್ರಗ್ರಹಣ. ಈ ಕುರಿತಾಗಿ ಕೆಲವೊಂದಿಷ್ಟು ತಿಳಿಯಬೇಕಾದ ಮಾಹಿತಿ ಈ ಕೆಳಗಿನಂತಿದೆ.
ಈ ವರ್ಷದ ಕೊನೆಯ ಚಂದ್ರ ಗ್ರಹಣ ಮತ್ತು ದೀರ್ಘಾವಧಿ ಚಂದ್ರ ಗ್ರಹಣ ಇಂದು ಶುಕ್ರವಾರ (ನವೆಂಬರ್ 19)ರಂದು ಸಂಭವಿಸಲಿದೆ. ಈ ಚಂದ್ರ ಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ? ಈ ಸಮಯದಲ್ಲಿ ಏನೂ ಮಾಡಬೇಕು? ಎಂಬೆಲ್ಲಾ ವಿಷಯಗಳ ಬಗ್ಗೆ ನೀವು ತಿಳಿಯಲೇಬೇಕಾದ ಕೆಲವು ವಿಷಯಗಳು ಈ ಕೆಳಗಿನಂತಿವೆ. ಈ ಚಂದ್ರ ಗ್ರಹಣದ ಅವಧಿಯು 3 ಗಂಟೆ 28 ನಿಮಿಷಗಳ ಕಾಲ ಇರುತ್ತದೆ. ಮಧ್ಯಾಹ್ನ 1:48ಕ್ಕೆ ಗ್ರಹಣ ಕಾಲ ಪ್ರಾರಂಭವಾಗಲಿದ್ದು ಸಂಜೆ 4:17ರವರೆಗೆ ಗೋಚರಿಸುತ್ತದೆ. ಚಂದ್ರನು ಕೃತಿಕಾ ನಕ್ಷತ್ರದದಲ್ಲಿ ವೃಷಭ ರಾಶಿಯಲ್ಲಿರುತ್ತಾರೆ. ಈ ಚಂದ್ರ ಗ್ರಹಣವು ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಈ ಗ್ರಹಣ ಗೋಚರವಾಗುತ್ತದೆ. ಭಾರತದಲ್ಲಿ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಸ್ವಲ್ಪ ಸಮಯದವರೆಗೆ ಗೋಚರಿಸುತ್ತದೆ. ಭಾರತದಲ್ಲಿ ಬೆಳಕಿನ ರೇಖೆಗಳಲ್ಲಿ ಮಾತ್ರ ಗ್ರಹಣ ಗೋಚರವಾಗುತ್ತದೆ ಹೊರತು ಸಂಪೂರ್ಣವಾಗಿ ಗೋಚರಿಸುವುದಿಲ್ಲ.
ಇದಕ್ಕೂ ಮೊದಲು 1440 ಫೆಬ್ರವರಿ 18ರಂದು ಸಂಭವಿಸಿತ್ತು. ಈ ನಂತರದಲ್ಲಿ 2669 ಫೆಬ್ರವರಿ 8ರಂದು ಸಂಭವಿಸಲಿದೆ. ಇಷ್ಟು ದೀರ್ಘಾವಧಿಯ ಭಾಗಶಃ ಚಂದ್ರ ಗ್ರಹಣವು 580 ವರ್ಷಗಳ ನಂತರ ಸಂಭವಿಸುತ್ತಿದೆ. ಹಿಂದೂ ಪುರಾಣಗಳ ಪ್ರಕಾರ ರಾಹು ದೇವರು ಸೂರ್ಯ ಮತ್ತು ಚಂದ್ರನನ್ನು ಬಾಯಿಯಿಂದ ಹಿಡಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ರಾಕ್ಷಸ ದೇವರುಗಳನ್ನು ಹೊಂದಿರುವುದರಿಂದ ಗ್ರಹಣದ ವೇಳೆ ನಕಾರಾತ್ಮಕ ಪರಿಣಾಮಗಳು ಬೀರಬಹುದು ಎನ್ನಲಾಗುತ್ತದೆ.
ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿದ್ದಾಗ ಸೂರ್ಯ ಅಥವಾ ಚಂದ್ರ ಗ್ರಹಣ ಸಂಭವಿಸುತ್ತದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಅಡ್ಡಲಾಗಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳಿನ ಭಾಗಕ್ಕೆ ಚಂದ್ರ ಪೂರ್ಣವಾಗಿ ಬಂದಾಗ ಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ.
ಚಂದ್ರ ಗ್ರಹಣದ ವೇಳೆ ಏನು ಮಾಡಬಾರದು? ಆರು ಗಂಟೆಗಳ ಕಾಲ ಸಂಭವಿಸಲಿರುವ ಶತಮಾನದ ಈ ಚಂದ್ರ ಗ್ರಹಣದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಎಂಬುದರ ಕುರಿತಾದ ಒಂದಿಷ್ಟು ಮಾಹಿತಿ ಈ ಕೆಳಗಿನಂತಿದೆ.
*ಚಂದ್ರ ಗ್ರಹಣದ ಮುಕ್ತಾಯದ ನಂತರ ಸ್ನಾನ ಮಾಡಬೇಕು *ಗ್ರಹಣದ ಸಮಯದಲ್ಲಿ ಆಹಾರವನ್ನು ಬೇಯಿಸಬಾರದು ಹಾಗೂ ಸೇವಿಸಬಾರದು *ಕೆಲವು ಪುರಾಣಗಳು ಮತ್ತು ನಂಬಿಕೆಗಳ ಪ್ರಕಾರ ಗ್ರಹಣ ಕಾಲದಲ್ಲಿ ಮಲಗಬಾರದು *ಪವಿತ್ರ ಮಂತ್ರ ಪಠಣ ಮಾಡುತ್ತಾ ದೇವರ ಧ್ಯಾನದಲ್ಲಿ ಕುಳಿತುಕೊಳ್ಳಬೇಕು *ಗ್ರಹಣದ ಸಮಯದಲ್ಲಿ ಪ್ರಾಣಿಗಳ ಮೇಲೆ ಕುಳಿತುಕೊಳ್ಳಬಾರದು *ನಕಾರಾತ್ಮಕ ಶಕ್ತಿ ಹರಡುವುದರಿಂದ ಹೊರಗಡೆ ಓಡಾಡಬಾರದು *ಗರ್ಭಿಣಿಯರು ಮುಖ್ಯವಾಗಿ ಹೊರಗಡೆ ಓಡಾಡುವಂತಿಲ್ಲ *ತಮ್ಮ ಕೂದಲು ಉಗುರುಗಳನ್ನು ಕತ್ತರಿಸಿಕೊಳ್ಳುವಂತಿಲ್ಲ
ಇದನ್ನೂ ಓದಿ:
Lunar Eclipse 2021 Date: ನವೆಂಬರ್ 19ರಂದು ಈ ವರ್ಷದ ಕೊನೆಯ ಚಂದ್ರಗ್ರಹಣ; ಇಲ್ಲಿದೆ ಸಂಪೂರ್ಣ ಮಾಹಿತಿ
Lunar Eclipse 2021: ಇಂದು ದೀರ್ಘಾವಧಿ ಚಂದ್ರಗ್ರಹಣ; ನೀವು ಅನುಸರಿಸಲೇ ಬೇಕಾದ ಕೆಲವು ನಿಯಮಗಳು ಹೀಗಿವೆ
Published On - 10:37 am, Fri, 19 November 21