Lunar Eclipse 2021: ಇಂದು ದೀರ್ಘಾವಧಿ ಚಂದ್ರ ಗ್ರಹಣ; ಯಾವ ಪ್ರಮಾಣದಲ್ಲಿ ಗೋಚರಿಸಲಿದೆ? ಇಲ್ಲಿದೆ ಮಾಹಿತಿ

Blood Moon: 580 ವರ್ಷಗಳಲ್ಲಿ ಸಂಭವಿಸುತ್ತಿರುವ ದೀರ್ಘವಾಗ ಭಾಗರ್ಶ ಚಂದ್ರ ಗ್ರಹಣ ಇದಾಗಿದೆ. ಶತಮಾನದ ದೀರ್ಘಾವಧಿ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತಿದೆ. ಮಸುಕಾದ ಕೆಂಪು ಬಣ್ಣದ ಚಂದ್ರನು ಗೋಚರಿಸುತ್ತಾನೆ.

Lunar Eclipse 2021: ಇಂದು ದೀರ್ಘಾವಧಿ ಚಂದ್ರ ಗ್ರಹಣ; ಯಾವ ಪ್ರಮಾಣದಲ್ಲಿ ಗೋಚರಿಸಲಿದೆ? ಇಲ್ಲಿದೆ ಮಾಹಿತಿ
Lunar Eclipse 2021
Follow us
TV9 Web
| Updated By: shruti hegde

Updated on:Nov 19, 2021 | 1:27 PM

ಇಂದು ಸಂಭವಿಸುತ್ತಿರುವ ದೀರ್ಘವಾದ ಭಾಗಶಃ ಚಂದ್ರಗ್ರಹಣ ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರ ಗ್ರಹಣ. 580 ವರ್ಷಗಳಲ್ಲಿ ಸಂಭವಿಸುತ್ತಿರುವ ದೀರ್ಘವಾಗ ಭಾಗಶಃ ಚಂದ್ರ ಗ್ರಹಣ (Lunar Eclipse 2021) ಇದಾಗಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ. ಚಂದ್ರನ ಸಣ್ಣ ಭಾಗವು ಭೂಮಿಯ ನೆರಳಿನಿಂದ ಆವೃತವಾಗುತ್ತದೆ. ಹಾಗಾಗಿ ನಾವು ಮಸುಕಾದ ಕೆಂಪು ಚಂದ್ರನನ್ನು ನೋಡಬಹುದು. ಆದರೆ ಪರಿಪೂರ್ಣ ರಕ್ತ ಚಂದ್ರನನ್ನಲ್ಲ. ಸಂಪೂರ್ಣ ಚಂದ್ರ ಗ್ರಹಣದ (Chandra Grahan) ಸಮಯದಲ್ಲಿ ರಕ್ತ ಚಂದ್ರ (Blood Moon) ಕಾಣಿಸುತ್ತಾನೆ. ಚಂದ್ರನು ಪೂರ್ಣವಾಗಿ ಕೆಂಪು ಬಣ್ಣ ಪಡೆಯುವುದರಿಂದ ಆ ಹೆಸರು ಬಂದಿದೆ. ಸೂರ್ಯನ ಬೆಳಕು ಚಂದ್ರನನ್ನು ತಲುಪುವ ಮೊದಲು ಭೂಮಿಯ ವಾತಾವರಣದ ಮೂಲಕ ಹಾದು ಹೋಗಬೇಕು. ಈ ಸಮಯದಲ್ಲಿ ಬಣ್ಣ ಬದಲಾವಣೆಯಾಗುತ್ತದೆ.

ಸೂರ್ಯನ ಬೆಳಕು ಭೂಮಿಯ ವಾತಾವಣದ ಮೂಲಕ ಹಾದು ಹೋಗುವ ಪ್ರಕ್ರಿಯೆಯಲ್ಲಿ ವಿವಿಧ ಬಣ್ಣಗಳು ಚದುರಿ ಹೋಗುತ್ತವೆ. ಹಾಗೂ ಹೆಚ್ಚಿನ ತರಂಗಾಂತರದ ಮೂಲಕ ಕೆಂಪು ಬೆಳಕು ಹರಡುತ್ತದೆ. ಹಾಗಾಗಿ ಚಂದ್ರನು ಕೆಂಪು-ಕಿತ್ತಳೆ ಬಣ್ಣದಲ್ಲಿ ಗೋಚರಿಸುತ್ತಾನೆ.

ಲಾಸ್ ಏಂಜಲೀಸ್​ನಲ್ಲಿರುವ ಗ್ರಿಫಿತ್ ಅಬ್ಸರ್​ವೇಟರಿ ನಿರ್ದೇಶಕ ಎಡ್ ಕ್ರುಪ್ ಹೇಳಿರುವ ಪ್ರಕಾರ, ಶತಮಾನದ ದೀರ್ಘಾವಧಿ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತಿದೆ. ಭೂಮಿಯ ನೆರಳಿನಿಂದ ಮಸುಕಾದ ಕೆಂಪು ಬಣ್ಣದ ಚಂದ್ರನು ಗೋಚರಿಸುತ್ತಾನೆ. ಯಾವುದೇ ಸಂಸ್ಕೃತಿ ಸಂಪ್ರದಾಯದವರೂ ಸಹ ಸೂರ್ಯ ಅಥವಾ ಚಂದ್ರನಲ್ಲಿ ಗ್ರಹಣ ಕಾಲವು ಕೆಟ್ಟ ಸುದ್ದಿ ಎಂದು ಭಾವಿಸುತ್ತಾರೆ. ಒಂದು ರೀತಿಯಲ್ಲಿ ಗ್ರಹಣ ಕಾಲವು ಹಾನಿಯ ಬೆದರಿಕೆಯನ್ನು ನೀಡಿದೆ ಎಂದು ಅವರು ಮಾಹಿತಿ ಹೊಂಚಿಕೊಂಡಿದ್ದಾರೆ.

ಇಂದಿನ ಗ್ರಹಣವನ್ನು ಯಾರು ವೀಕ್ಷಿಸಬಹುದು? ಭಾಗಶಃ ಚಂದ್ರ ಗ್ರಹಣವು ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೂರ್ವ ಏಷ್ಯಾ, ಆಸ್ಟ್ರೇಲಿಯಾ ಮತ್ತು ಫೆಸಿಫಿಕ್ ಪ್ರದೇಶದಿಂದ ಗೋಚರಿಸುತ್ತದೆ. ಹವಾಮಾನ ಇಲಾಖೆ ತಿಳಿಸಿರುವಂತೆ ಅರುಣಾಚಲ ಪ್ರದೇಶ, ಬಿಹಾರ, ಆಸ್ಸಾಂನ ಕೆಲವು ಭಾಗಗಳಿಂದಲೂ ಸಣ್ಣ ಪ್ರಮಾಣದಲ್ಲಿ ಗೋಚರಿಸಬಹುದು. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್​ನಲ್ಲಿ ಗ್ರಹಣದ ಕೊನೆಯ ಭಾಗವನ್ನು ವೀಕ್ಷಿಸಬಹುದು. ಚಂದ್ರ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:48ಕ್ಕೆ ಆರಂಭವಾಗುತ್ತದೆ ಮತ್ತು ಸಂಜೆ 4:17ಕ್ಕೆ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ:

Lunar Eclipse 2021: ಇಂದೇ ಸಂಭವಿಸಲಿದೆ ದೀರ್ಘ ಕಾಲದ ಚಂದ್ರ ಗ್ರಹಣ; ಇಲ್ಲಿವೆ ತಿಳಿಯಬೇಕಾದ ಕೆಲವು ವಿಷಯಗಳು

Lunar Eclipse 2021: ಇಂದು ದೀರ್ಘಾವಧಿ ಚಂದ್ರಗ್ರಹಣ; ನೀವು ಅನುಸರಿಸಲೇ ಬೇಕಾದ ಕೆಲವು ನಿಯಮಗಳು ಹೀಗಿವೆ

Published On - 1:27 pm, Fri, 19 November 21

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ